ಮುರುಘಾ ಶ್ರೀ ಮೇಲಿನ ಪೋಕ್ಸೋ ಪ್ರಕರಣ ತೀವ್ರ ಬೇಸರ ತರಿಸಿದೆ: ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ
ಮುರುಘಾ ಶ್ರೀ ಪೋಕ್ಸೋ ಪ್ರಕರಣ ಹಾಗೂ ಮಹಿಳೆಯರ ಆಡಿಯೋ ವೈರಲ್ ವಿಚಾರದ ಘಟನೆಗಳು ಬಹಳ ನೋವು ಎನಿಸಿವೆ ಎಂದು ವಿಧಾನಸಭೆ ಮಾಜಿ ಸ್ಫೀಕರ್ ಕೆ ಬಿ ಕೋಳಿವಾಡ ಹೇಳಿದ್ದಾರೆ.
ಹಾವೇರಿ( ಸೆ.5): ಮುರುಘಾ ಶ್ರೀ ಪೋಕ್ಸೋ ಪ್ರಕರಣ ಹಾಗೂ ಮಹಿಳೆಯರ ಆಡಿಯೋ ವೈರಲ್ ವಿಚಾರದ ಘಟನೆಗಳು ಬಹಳ ನೋವು ಎನಿಸಿವೆ ಎಂದು ವಿಧಾನಸಭೆ ಮಾಜಿ ಸ್ಫೀಕರ್ ಕೆ ಬಿ ಕೋಳಿವಾಡ ಅವರು ಬೇಸರ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ಯಾವುದು ಸತ್ಯ? ಯಾವುದು ಅಸತ್ಯ ಅಂತಾ ಹೇಳೋಕೆ ನಾನು ಅಸಮರ್ಥ ಎಂದು ತಿಳಿಸಿದರು. ಪೊಲೀಸ್ ತನಿಖೆ ನಡೆದಿದೆ. ರಿಸಲ್ಟ್ ಏನು ಬರುತ್ತೋ ನೋಡೋಣ ಎಂದು ತಿಳಿಸಿದರು. ಈ ಪ್ರಕರಣಗಳಲ್ಲಿ ಸರ್ಕಾರದ ನಡೆ ಬಗ್ಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ನಾನು ಆ ಲೆವಲ್ಗೆ ಇಳಿಯೋಕೆ ಹೋಗಲ್ಲ. ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಬರಲಿ ಎಂದ್ರು. ಇದೇ ವೇಳೆ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಹಗರಣಗಳ ತನಿಖೆ ಮಾಡುವ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಷ್ಟು ದಿನ ಯಾಕೆ ಸುಮ್ಮನೆ ಕೂತಿದ್ರಿ? ನಿಮ್ಮ ಕೈನಲ್ಲೇ ಸರ್ಕಾರ ಇತ್ತಲ್ವಾ? ಕಾಂಗ್ರೆಸ್ ನವರು ನಾಲ್ವತ್ತು ಫರ್ಸೆಂಟೇಜ್ ಭ್ರಷ್ಟಾಚಾರ ಬಯಲಿಗೆಳೆದ ಮೇಲೆ ಅವರದ್ದೂ ತೆಗೆಯುತ್ತೇನೆ ಅಂತಿದ್ದಾರೆ. ನಮ್ಮ ಚೀಲದಲ್ಲಿ ಬುಸ್ ಬುಸ್ ನಾಗಪ್ಪ ಐತಿ, ತೆಗೆಯುತ್ತೇವೆ ಅಂದರೆ ತೆಗೆಯಿರಿ ಯಾರು ಬೇಡ ಅಂತಾರೆ. ಅಧಿಕಾರಕ್ಕೆ ಇದ್ದಾಗಲೆ ಏನೂ ಮಾಡೋಕೆ ಆಗಲಿಲ್ಲ. ಈಗ ಕೊನೆ ಹಂತದಲ್ಲಿ ಬಂದು ತೆಗೆಯುತ್ತೇವೆ ಅಂದರೆ ಹೆದರೋರ್ಯಾರು? ನಮ್ಮ ಕಾಂಗ್ರೆಸ್ಗೆ ಯಾವುದೇ ಹೆದರಿಕೆ ಇಲ್ಲ ಎಂದ್ರು.
ನಾನು ಸಾಬು, ಜಂಗಮರ ಗಲಾಟೆ ಬಗ್ಗೆ ಮಾತನಾಡಲ್ಲ: ಇಬ್ರಾಹಿಂ
ರಾಮನಗರ: ‘ನಾನು ಸಾಬ್ರು. ಜಂಗಮರ ಗಲಾಟೆ ಮಧ್ಯ ಹೋಗಬಾರದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೈ ಹಾಕಿ ಸುಟ್ಟುಕೊಂಡಿದ್ದಾರೆ. ಅದಕ್ಕೆ ನಾನು ಮಾತನಾಡುವುದಿಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾರ್ಮಿಕವಾಗಿ ಹೇಳಿದ್ದಾರೆ. ಈ ಹಿಂದೆ ರಾಮಚಂದ್ರಾಪುರ ಮಠದ ಶ್ರೀಗಳ ಮೇಲೆ ಆರೋಪ ಬಂದಾಗ ಆಗಿನ ಸರ್ಕಾರ ಏನು ಮಾಡಿತ್ತು? ಈಗಾಗಲೇ ಮುರುಘಾ ಶ್ರೀಗಳ ಬಂಧನವಾಗಿದೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ ಅನ್ನುವುದಕ್ಕೆ ಇದೇ ಉದಾಹರಣೆ ಎಂದರು.
ಶ್ರೀಗಳು ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು. ಆದರೆ ಟ್ರೋಲ್ ಮಾಡೋಕೆ ಹೋಗಬೇಡಿ. ಪರ ವಿರೋಧವೂ ಬೇಡ. ನಿಸ್ಪಕ್ಷಪಾತ ತನಿಖೆ ಮಾಡುವುದಲ್ಲಿ ಪೊಲೀಸರು ದಕ್ಷರಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಬಿಜೆಪಿಯಿಂದ ಧರ್ಮಾದಾರಿತ ರಾಜಕೀಯ: ಎಂಬಿಪಾ
ಕೊಪ್ಪಳ: ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ಶಾಂತಿ ಹಾಳಾಗಿದೆ. ಈ ಕೆಟ್ಟಪರಿಸ್ಥಿತಿಗೆ ಬಿಜೆಪಿ ಮಾಡುತ್ತಿರುವ ಧರ್ಮಾಧಾರಿತ ಮತ್ತು ಭಾವನಾತ್ಮಕ ರಾಜಕೀಯವೇ ಕಾರಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಿಎಂಗೆ ಯುಪಿ ಮಾದರಿ ಮೇಲೆ ಮೋಹ ಬಂದಿದೆ. ಸರ್ವಜನಾಂಗದ ಶಾಂತಿಯ ತೋಟ ಇಲ್ಲ. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ನಡೆದಿದೆ. ಅಭಿವೃದ್ಧಿಯೂ ಇಲ್ಲ. ಈಗ .3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಕಿಡಿಕಾರಿದರು.
Murugha Mutt ಪ್ರತಿ ಸ್ಥಳದಲ್ಲೂ ಪೊಲೀಸರ ಮಹಜರು!
ಬಿಜೆಪಿಗೆ ವೋಟ್ ಹಾಕಿದ ಶೇ. 50ರಷ್ಟುಜನ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ಜಾತಿ, ಧರ್ಮ ಏನೂ ನಡೆಯಲ್ಲ. ಸಾವರ್ಕರ್ ಜೈಲಿಗೆ ಹೋಗಿದ್ದರ ಬಗ್ಗೆ ವಾದಗಳಿವೆ, ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು ಐತಿಹಾಸಿಕ ಸತ್ಯ ಎಂದರು.
ಮಹಿಳೆಯರ ಸಂಭಾಷಣೆಯಲ್ಲಿ ಕೇಳಿಬಂದ ಆರೋಪ: ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ
ಮುರುಘಾ ಮಠ ಅತ್ಯಂತ ಪುರಾತನ, ಐತಿಹಾಸಿಕ ಮಠವಾಗಿದೆ. ಅದರ ದೊಡ್ಡ ಕೊಡುಗೆಯಿದೆ. ಆದರೆ ಸರ್ಕಾರ ತನಿಖೆಯಲ್ಲಿ ಎಡವಿದೆ. ನಿಷ್ಪಕ್ಷಪಾತ ತನಿಖೆಯಾಗಬೇಕು. ತನಿಖೆಯಿಂದ ಸತ್ಯ ಹೊರಬರಬೇಕು ಎಂದರು.