Murugha Mutt ಪ್ರತಿ ಸ್ಥಳದಲ್ಲೂ ಪೊಲೀಸರ ಮಹಜರು!
ಮುರುಘಾ ಮಠದ ಸ್ವಾಮೀಜಿಗಳ ಪ್ರಕರಣದಲ್ಲಿ ಭಾನುವಾರ ಪೊಲೀಸರು ಸ್ಥಳದ ಮಹಜರು ಮಾಡಿದ್ದಾರೆ. ಬಾಲಕಿಯರು ಸೂಚಿಸಿದ ಪ್ರತಿಸ್ಥಳಗಳಲ್ಲೂ ಪೊಲೀಸರು ಮಹಜರು ಮಾಡಿದ್ದಾರೆ.
ಚಿತ್ರದುರ್ಗ (ಸೆ.4): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳ ಪ್ರಕರಣದಲ್ಲಿ ಪೊಲೀಸರು ಭಾನುವಾರ ಮಠದಲ್ಲಿ ಸ್ಥಳಗಳ ಮಹಜರು ನಡೆದಿದ್ದಾರೆ. ಸಂತ್ರಸ್ತ ಬಾಲಕಿಯರು ಸೂಚಿಸಿದ್ದ ಪ್ರತೀ ಸ್ಥಳದಲ್ಲೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸ್ವಾಮೀಜಿ ಕೊಠಡಿ, ಸ್ನಾನದ ಕೋಣೆ, ಕೊಠಡಿ ಮುಂಭಾಗ, ಸ್ಕೈಯ್ ವಾಕ್ ಸಮೀಪ ಹಾಗೂ ಹಾಸ್ಟೆಲ್ ಬಳಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮಹಜರು ವೇಳೆ ಕೃತ್ಯಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಕೊಠಡಿಯಲ್ಲಿ ಇದ್ದ ಕೆಲವು ಬಟ್ಟೆಗಳನ್ನ ಪೊಲೀಸರು ಈ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮುರುಘಾ ಶ್ರೀಗಳ ಕೋಣೆಗೆ ಯಾರೆಲ್ಲಾ ಹೋಗುತ್ತಿದ್ದರು. ಅವರ ಕೋಣೆಗೆ ಯಾರಿಗೆಲ್ಲಾ ಪ್ರವೇಶವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಕೇಳಿ ಪಡೆದುಕೊಂಡಿದ್ದಾರೆ. ಕೋಣೆಗೆ ಯಾರಿಗೆಲ್ಲ ಅವಕಾಶ ಇತ್ತು, ಬಾಲಕಿಯರು ಹೋಗುತ್ತದ್ದರೆ, ಹೋಗಿದ್ದರೆ, ಯಾರು ಕರ್ಕೊಂಡು ಹೋಗುತ್ತಿದ್ದರ ಎನ್ನುವುದರ ಮಾಹಿತಿ ಸಂಗ್ರಹ ಮಾಡಿದ್ದಾರೆ. ಮಹಜರು ಮುಗಿಸಿ ಮಠದಿಂದ ಸ್ವಾಮೀಜಿಯನ್ನ ಡಿವೈಎಸ್ಪಿ ಕಚೇರಿಗೆ ಪೊಲೀಸರು ಕರೆದೊಯ್ದಿದ್ದಾರೆ.
ಸ್ಥಳ ಮಹಜರು ವೇಳೆ ಸ್ವಾಮೀಜಿ ಕಣ್ಣೀರು: ಸ್ಥಳ ಮಹಜರು ನಡೆಸುವ ವೇಳೆ ಮುರುಘಾ ಶ್ರೀ (Murugha Seer) ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಮಠದ ಗದ್ದುಗೆ, ಪೂಜಾ ಸ್ಥಳಗಳಿಗೆ ತೆರಳಿ ಮುರುಘಾ ಶ್ರೀಗಳು ನಮಸ್ಕರಿಸಿದರು. ಮಠದ ದರ್ಬಾರ್ ಹಾಲ್ ಸೇರಿದಂತೆ ಎಲ್ಲಾ ಕಡೆಯಲ್ಲೂ ಪೊಲೀಸರು (Police) ಭೇಟಿ ನೀಡಿದರು. ಈ ವೇಳೆ 15ಕ್ಕೂ ಹೆಚ್ಚಿನ ಸ್ವಾಮೀಜಿಗಳಿದ್ದರು ಎಂದು ಹೇಳಲಾಗಿದೆ.ಅಲ್ಲದೆ, ಅವರ ಸಾಕಷ್ಟು ಶಿಷ್ಯವೃಂದ ಕೂಡ ಈ ವೇಳೆ ಅಲ್ಲಿತ್ತು.
Murugha Mutt: ಮುರುಘಾ ಶ್ರೀಗಳ ಅನುಪಸ್ಥಿತಿಯಲ್ಲಿ ನಾಳೆ ಸಾಮೂಹಿಕ ವಿವಾಹ ಕಾರ್ಯಕ್ರಮ!
ಏನಿದು ಪ್ರಕರಣ: ಚಿತ್ರದುರ್ಗದ ಮುರುಘಾ ಮಠದ (Murugha Mutt) ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿರುವ ಹಲವು ಅಪ್ರಾಪ್ತ ಬಾಲಕಿಯರಿಗೆ ಸ್ವಾಮೀಜಿಗಳಾದ ಮುರುಘಾ ಶ್ರೀ ಲೈಂಗಿಕವಾಗಿ ದೌರ್ಜನ್ಯ (Sexual Assault) ಮಾಡಿದ್ದರು ಎಂದು ಆರೋಪಿಸಿ, ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿದ್ದ ಒಡನಾಡಿ ಸೇವಾ ಸಂಸ್ಥೆಯ ಸಹಾಯ ಪಡೆದು ದೂರು ನೀಡಿದ್ದರು. ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿಯವರಿಗೆ ಹಣ್ಣು ತೆಗೆದುಕೊಂಡು ಹೋಗುವಂತೆ ಮಹಿಳಾ ವಾರ್ಡನ್ ಅವರೇ ನಮ್ಮನ್ನು ಅವರ ಕೋಣೆಗೆ ಕಳುಹಿಸುತ್ತಿದ್ದರು. ಅವರ ಕೋಣೆಗೆ ಹೋದರೆ, ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದರು. ಇದಕ್ಕಾಗಿ ಒಡನಾಡಿ ಸಂಸ್ಥೆಯ ಸಹಾಯ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಸ್ವಾಮೀಜಿ ವಿರುದ್ಧ ಪೋಕ್ಸೋ (Pocso) ಪ್ರಕರಣ ದಾಖಲಾಗಿತ್ತು. ಆದರೆ, ಪ್ರಕರಣ ರಾಖಲಾಗಿ ಹಲವು ದಿನಗಳಾದರೂ ಪೊಲೀಸರು ಸ್ವಾಮೀಜಿಯವರನ್ನು ಬಂಧನ ಮಾಡಿರಲಿಲ್ಲ. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ರಾಜ್ಯಾದ್ಯಂತ ನಡೆದಿದ್ದರು. ಇದರಿಂದಾಗಿ ಗುರುವಾರ ತಡರಾತ್ರಿ ಮುರುಘಾ ಮಠದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆಯ ವೇಳೆಗೆ ಜೈಲಿನಲ್ಲೇ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Murugha Seer Case; ಸರಕಾರ ನಿರ್ಲಕ್ಷ್ಯ ತೋರಿದೆಯೆಂದು ಆರೋಪಿಸಿದ ಎಚ್ ವಿಶ್ವನಾಥ್
ಆಸ್ಪತ್ರೆಯಲ್ಲಿ ಮುರುಘಾ ಶ್ರೀಗಳನ್ನು ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಬೇಕು ಎನ್ನುವ ಹಂತದಲ್ಲಿ ಮಧ್ಯಪ್ರವೇಶಿಸಿದ ಕೋರ್ಟ್, ನಮ್ಮ ಗಮನಕ್ಕೆ ತರದೆ ಮುರುಘಾ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇಕೆ ಎಂದು ಪ್ರಶ್ನೆ ಮಾಡಿತು. ಕೊನೆಗೆ ಅವರ ಆಸ್ಪತ್ರೆಯ ವಿವರಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಕಸ್ಟಡಿಗೆ ನೀಡಿತ್ತು. ಸೋಮವಾರ ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ಆ ಬಳಿಕವೇ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ಮಾಡಲಿದೆ. ಈ ನಡುವೆ ಪ್ರಕರಣದ 2 ನೇ ಆರೋಪಿಯನ್ನು ಕೂಡಾ ಅರೆಸ್ಟ್ ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶರಣರನ್ನು ನಗರದ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ.