* ಮದುವೆಗೆ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಸೀಜ್* ಮದುವೆಗೆ ಕುರಿ‌ ತುಂಬಿದಂತೆ ಜನರನ್ನ ತುಂಬಿಕೊಂಡು ಹೊರಟಿದ್ದ ವಾಹನ* ಯಾದಗಿರಿ ನಗರದಲ್ಲಿ ನಡೆದ ಘಟನೆ 

ಯಾದಗಿರಿ(ಮೇ.24): ಲಾಕ್‌ಡೌನ್‌ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನರ ಗುಂಪು ಪ್ರಯಾಣಕ್ಕೆ ನಿಷೇಧ ಇದ್ದರೂ ತೆರೆದ ವಾಹನದಲ್ಲಿ ಕುರಿ ಹಿಂಡಿನಂತೆ ಜನರು ಮದುವೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ದಾಳಿ ಮಾಡಿದ್ದಾರೆ. ಮದುವೆಗೆ ಅಂತ ಬುಲೆರೋ ಪಿಕ್ ಅಪ್ ವಾಹನದಲ್ಲಿ ಕಿಕ್ಕಿರಿದು ತುಂಬಿದ್ದ ಜನರು ಯಾದಗಿರಿ ನಗರಕ್ಕೆ ಬಂದಿದ್ದ ವೇಳೆ ಈ ದಾಳಿ ಮಾಡಲಾಗಿದೆ. 

ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ

ಬಳಿಕ ಜನರ ಸಮೇತ ಠಾಣೆಗೆ ವಾಹನವನ್ನ ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಠಾಣೆ ಬಳಿ ವಾಹನ ನಿಲ್ಲುತ್ತಿದ್ದಂತೆ ವಾಹನದಿಂದ ಜಂಪ್ ಮಾಡಿದ ಬೀಗರು ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ#ANCares #IndiaFightsCorona