ರಾಯಚೂರಲ್ಲಿ ಫ್ರೀ ಹೆಲ್ತ್ ಕ್ಯಾಂಪ್: ಶ್ರೀಶೈಲ ಪಾದಯಾತ್ರಿಗಳ ಸೇವೆಯೇ ಮಲ್ಲಯ್ಯನ ಸೇವೆ ಎಂದ ಭಕ್ತರು..!
* ಮಲ್ಲಯ್ಯನ ಕಂಬಿ ಹೊತ್ತಿ 700ಕಿ.ಮೀ. ನಡೆದ ಭಕ್ತರ ದಂಡು
* ವೀರಶೈವ ರುದ್ರಸೇನಾ ಕಾರ್ಯಕರ್ತರಿಂದ ಫ್ರೀ ಹೆಲ್ತ್ ಕ್ಯಾಂಪ್
* ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡುವ ವಿಶೇಷ ತಂಡ
ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ ರಾಯಚೂರು
ರಾಯಚೂರು(ಮಾ.25): ಹೋಳಿ ಹುಣ್ಣಿಮೆ ಮುಗಿದ ಬಳಿಕ ಶ್ರೀಶೈಲ ಪಾದಯಾತ್ರೆ(Srisaila Padayatra) ಆರಂಭವಾಗುತ್ತದೆ. ಭಕ್ತರು ಮಹಾರಾಷ್ಟ್ರದ ಸೋಲಾಪೂರದಿಂದ ಆರಂಭಗೊಳ್ಳುವ ಪಾದಯಾತ್ರೆ ಶ್ರೀಶೈಲದವರೆಗೂ ನಡೆಯುತ್ತದೆ. ಲಕ್ಷಾಂತರ ಭಕ್ತರು 800-900 ಕಿ.ಮೀ. ರಸ್ತೆ ಉದ್ದಕ್ಕೂ ನಡೆದುಕೊಂಡು ಹೋಗುವುದನ್ನ ನೋಡುವುದೇ ಒಂದು ಹಬ್ಬ. ಇಂತಹ ಪಾದಯಾತ್ರಿಗಳಿಗಾಗಿ ದಾರಿ ಉದ್ದಕ್ಕೂ ಹತ್ತಾರು ಸೇವೆಗಳು ಮಲ್ಲಯ್ಯನ ಭಕ್ತರು(Devotees) ವ್ಯವಸ್ಥೆ ಮಾಡುತ್ತಾರೆ.
ಅಥಣಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ್ಟ ಯುವಕ
ಯುಗಾದಿಗೆ ಆಂಧ್ರ ಪ್ರದೇಶದ ಶ್ರೀಶೈಲ ಸುಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಲ್ಲಿಕಾರ್ಜನ ದೇವರ ಜಾತ್ರೆ ನಡೆಯುತ್ತೆ, ಈ ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ನಾ ಮುಂದು ತಾ ಮುಂದು ಅಂತ ಪಾದಯಾತ್ರೆ ಮಾಡಿ ಮಲ್ಲಿಕಾರ್ಜುನ್ ದೇವರಿಗೆ ಹರಕೆ ತೀರಿಸುತ್ತಾರೆ. ಮಹಾರಾಷ್ರದ ಸೋಲಾಪುರದಿಂದ ಆರಂಭಗೊಂಡ ಭಕ್ತರ ಪಾದಯಾತ್ರೆ, ಬೆಳಗಾವಿ,ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸಾವಿರಾರು ಭಕ್ತರು ಮಲ್ಲಯ್ಯನ ಕಂಬಿ ಹೊತ್ತು ರಾಯಚೂರು ಮಾರ್ಗವಾಗಿ ಶ್ರೀಶೈಲಕ್ಕೆ ಹೋಗುತ್ತಾರೆ.
'ದಿ ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು!
ಮಲ್ಲಯ್ಯನ ಕಂಬಿ ಅಂದ್ರೆ ಏನು?
ಶ್ರೀಗಂಧ ಮತ್ತು ಸಾಗಾವಾಣಿ ಬಿದಿರಿನಿಂದ ಮಾಡಿರುವ ಒಂದು ಸಾಧನ, ಪ್ರತಿವರ್ಷ ಹೋಳಿ ಹುಣ್ಣಿಮೆಯ ಕಾಮದಹನ ರಾತ್ರಿಯಂದು ಉತ್ತರ ಕರ್ನಾಟಕದಿಂದ(North Karnataka) ಶ್ರೀಶೈಲಕ್ಕೆ ಹೊರಡುವ ಮಲ್ಲಯ್ಯನ(Srisaila Mallikarjuna Swamy) ಕಂಬಿಗಳಿಗೆ ತನ್ನದೆಯಾದ ಇತಿಹಾಸವಿದೆ. ನೂರಾರು ವರ್ಷಗಳಿಂದ ಸಾಗವಾಣಿ ಕಟ್ಟಿಗೆಗಳಿಂದ ಮಾಡಿರುವ ಮಲ್ಲಯ್ಯನ ಕಂಬಿಗಳು ಶಿವರಾತ್ರಿಯಿಂದ ಹೊರಗೆ ಬೀಳುತ್ತವೆ. ಶಿವರಾತ್ರಿಯಿಂದ ಹೋಳಿ ಹುಣ್ಣಿಮೆಯವರೆಗೆ 15 ದಿನಗಳ ಕಾಲ ಆಯಾ ಊರು, ಪಟ್ಟಣಗಳಲ್ಲಿ ಭಕ್ತರ ಮನೆಗಳಿಗೆ ಮಲ್ಲಯ್ಯನ ಕಂಬಿಗಳು ಹೋಗುತ್ವೆ. ಮನೆಗಳಿಗೆ ಕಂಬಿಗಳನ್ನ ಬರಮಾಡಿಕೊಳ್ಳುವ ಭಕ್ತರು ಪೂಜೆ ಪುನಸ್ಕಾರ ಸಲ್ಲಿಸುವ ಪದ್ದತಿ ಇದೆ.15 ದಿನಗಳ ಕಾಲ ಭಕ್ತರ ಮನೆಗಳಲ್ಲಿ ಪೂಜೆ ಸಲ್ಲಿಸಿಕೊಳ್ಳುವ ಮಲ್ಲಯ್ಯನ ಕಂಬಿಗಳನ್ನ ಭಕ್ತರು ಹೋಳಿ ಹಬ್ಬದ ದಿನ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಕೊಂಡೊಯ್ಯುತ್ತಾರೆ. ಇನ್ನು ಕಟ್ಟಿಗೆಗಳಿಂದ ತಯಾರಾಗಿರುವ ಕಂಬಿಗಳಿಗೆ ಸುತ್ತ ನಾಲ್ಕು ತುದಿಗಳಲ್ಲು ನಂದಿ, ಮುಂಭಾಗದಲ್ಲಿ ಲಿಂಗ, ತುದಿಗಳ ಮೇಲ್ಬಾಗದಲ್ಲಿ ಹಿತ್ತಾಳೆ, ಬೆಳ್ಳಿಯಿಂದ ಮಾಡಿರುವ ಸಣ್ಣ ಶಿಖರಗಳನ್ನ ಅಳವಡಿಸಿರುತ್ತಾರೆ.
ಇನ್ನು ಭಕ್ತರು ಕಟ್ಟಿಗೆಗೆ ಬೆಳ್ಳಿಯ ಕವಚ, ಬೆಳ್ಳಿ ಛತ್ರಿಗಳನ್ನ ಕಾಣಿಕೆಯಾಗಿ ನೀಡುತ್ತಾರೆ. ಹೀಗೆ ಅಲಂಕಾರ ಮಾಡಿರುವ ಕಂಬಿ ಹೊತ್ತು ಪಾದಯಾತ್ರಿಗಳು ಶ್ರೀಶೈಲಕ್ಕೆ ಬರುತ್ತಾರೆ. ಕಂಬಿ ಹೊತ್ತು ಬರುವ ಪಾದಯಾತ್ರಿಗಳಿಗೆ ಮಲ್ಲಯ್ಯನೇ ಅಂತ ಪೂಜಿ ಭಕ್ತರು ದಾರಿ ಉದ್ದಕ್ಕೂ ಕಾಣಿಕೆಯೂ ಸಲ್ಲಿಸುತ್ತಾರೆ. ಇನ್ನೂ ಪಾದಯಾತ್ರಿಗಳ ಅನುಕೂಲಕ್ಕಾಗಿ ದಾನಿಗಳು ಅನ್ನದಾಸೋಹ, ಫಲಹಾರ ವಿತರಣೆ ಮತ್ತು ವಿಶ್ರಾಂತಿ ಕೋಣೆಗಳು ಸೇರಿದಂತೆ ನಾನಾ ಸೌಕರ್ಯಗಳು ವ್ಯವಸ್ಥೆ ಮಾಡುತ್ತಾರೆ. ಹೀಗಾಗಿ ಭಕ್ತರು ಮಲ್ಲಯ್ಯನ ನಂಬಿ ಪಾದಯಾತ್ರೆ ಮಾಡಿದ್ರೆ ಎಲ್ಲವೂ ಸಿಗುತ್ತೆ ಎಂಬ ನಂಬಿಕೆಯಲ್ಲಿ ನೂರಾರು ಜನರು ಗುಂಪು-ಗುಂಪಾಗಿ ಪಾದಯಾತ್ರೆ ಮಾಡುತ್ತಾರೆ.
ACB Raids: ಭ್ರಷ್ಟ ಎಂಜಿನಿಯರ್ ಮನೆ ಕಸದ ಬುಟ್ಟಿಯಲ್ಲೂ ಚಿನ್ನ..!
ರಾಯಚೂರಿನಲ್ಲಿ ಪಾದಯಾತ್ರಿಗಳಿಗೆ ಉಚಿತ ಮೆಡಿಕಲ್ ಸೇವೆ
ಇನ್ನೂ ಶ್ರೀಶೈಲಕ್ಕೆ ನೂರಾರು ಕಿ.ಮೀ. ಪಾದಯಾತ್ರೆ ಮಾಡುವ ಭಕ್ತರ ಕಾಲುಗಳಿಗೆ ಗಾಯಗಳು ಆಗುತ್ತವೆ. ಆದ್ರೂ ನೋವಿನಲ್ಲಿಯೇ ಭಕ್ತರು ಮಲ್ಲಯ್ಯನ ಜಪಿಸುತ್ತಾ ಪಾದಯಾತ್ರೆ ಮಾಡುತ್ತಿರುತ್ತಾರೆ. ಇದನ್ನ ಗಮನಿಸಿದ ರಾಯಚೂರು(Raichur) ನಗರದ ವೀರಶೈವಾ ರುದ್ರಸೇನಾ ಕಾರ್ಯಕರ್ತರು ಕಳೆದ 8 ವರ್ಷಗಳಿಂದ ಪಾದಯಾತ್ರಿಗಳಿಗೆ ಉಚಿತ ಮೆಡಿಕಲ್ ಸೇವೆಗೆ(Free Medical Service) ಮುಂದಾಗಿದ್ದಾರೆ. ಪಾದಯಾತ್ರಿಗಳು ಗಾಯಗೊಂಡರೇ ಅವರಿಗೆ ಪ್ರಥಮ ಚಿಕಿತ್ಸೆ ನೀಡುವುದು, ಮಾತ್ರೆ, ಇಂಜೆಕ್ಷನ್ ನೀಡುವುದು ಹಾಗೂ ಅಪಘಾತವಾಗಿ ಗಾಯಗೊಂಡರೇ ಅಂತವರಿಗೆ ಆ್ಯಂಬುಲೇನ್ಸ್ ಸೇವೆ ಒದಗಿಸುವುದು. ಜೊತೆಗೆ ಪಾದಯಾತ್ರೆ ವೇಳೆ ಯಾರಾದರೂ ಮೃತಪಟ್ಟರೇ ಅಂತಹವರ ಮೃತದೇಹ ಅವರ ಸ್ವಗ್ರಾಮಕ್ಕೆ ತಲುಪಿಸುವ ಕಾಯಕದಲ್ಲಿ ತೊಡಗಿದ್ದಾರೆ. 600 ಜನ ಸದಸ್ಯರು ಹೊಂದಿರುವ ವೀರಶೈವಾ ರುದ್ರಸೇನಾ ಸಮಿತಿಯ 40 ಸದಸ್ಯರು ನಿತ್ಯವೂ ಪಾದಯಾತ್ರಿಗಳಿಗೆ ಬೇಕಾದ ಮಾತ್ರೆ ಮತ್ತು ಆಹಾರ(Food) ವ್ಯವಸೆ ಮಾಡಲು ಸಿದ್ಧರಾಗಿದ್ದಾರೆ.
ಒಟ್ಟಿನಲ್ಲಿ ಶ್ರೀಶೈಲ ಪಾದಯಾತ್ರೆ ಹೊರಟ್ಟ ಭಕ್ತರ ಅನುಕೂಲಕ್ಕಾಗಿ ನೂರಾರು ದಾನಿಗಳು ಅನ್ನದಾನ ಜೊತೆಗೆ ಮೆಡಿಕಲ್ ಸೇವೆಯೂ ಮಾಡುತ್ತಿದ್ದಾರೆ. ಭಕ್ತರು ಗಾಯಗೊಂಡರೂ ಚಿಕಿತ್ಸೆ(Treatment) ಪಡೆದು ಮತ್ತೆ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.