'ದಿ ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು!
ಹಿಂದಿಯ ದಿ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆಗೆ ಜನರು ಮುಗಿಬಿದ್ದು ಹೋಗುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಗಣ್ಯರು, ರಾಜಕಾರಣಿಗಳು ಮತ್ತು ಸ್ವಾಮೀಜಿಗಳಿಗೂ ಸಹ ಈ ಸಿನಿಮಾ ಆಕರ್ಷಿಸಿದೆ.
ಜಗನ್ನಾಥ ಪೂಜಾರ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ರಾಯಚೂರು (ಮಾ.20): ಹಿಂದಿಯ 'ದಿ ಕಾಶ್ಮೀರ ಫೈಲ್ಸ್' (The Kashmir Files) ಸಿನಿಮಾ ವೀಕ್ಷಣೆಗೆ ಜನರು ಮುಗಿಬಿದ್ದು ಹೋಗುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಗಣ್ಯರು, ರಾಜಕಾರಣಿಗಳು ಮತ್ತು ಸ್ವಾಮೀಜಿಗಳಿಗೂ ಸಹ ಈ ಸಿನಿಮಾ ಆಕರ್ಷಿಸಿದೆ. ಹೀಗಾಗಿ ಇಂದು ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಪೂರ್ಣಿಮಾ ಸಿನಿಮಾ ಮಂದಿರದಲ್ಲಿ ಮಂತ್ರಾಲಯ (Mantralaya) ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು (Sri Subudhendra Teertharu) ಶ್ರೀಮಠದವರೊಂದಿಗೆ ಸಿನಿಮಾ ನೋಡಿದರು. ಇತ್ತ ಉಡುಪಿಯಲ್ಲಿಯೂ ಸಹ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಉಡುಪಿಯಲ್ಲಿ 'ದಿ ಕಾಶ್ಮೀರ ಫೈಲ್ಸ್' ಸಿನಿಮಾ ನೋಡಿದರು.
ಯಾವತ್ತೂ ಪೂಜೆ ಪ್ರವಚನ ಹಾಗೂ ಧಾರ್ಮಿಕ ತಿರುಗಾಟಗಳಲ್ಲೇ ನಿರತರಾಗಿರುವ ಮತ್ತು ಸಿನಿಮಾ ಥಿಯೇಟರ್ಗೆ ಯಾವತ್ತೂ ಕಾಲಿರಿಸಿದ ಯತಿಗಳು ಕೂಡ ಇಂದು ದಿ ಕಾಶ್ಮೀರಿ ಫೈಲ್ಸ್ ನೋಡುವ ಉತ್ಸುಕತೆ ತೋರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲ ಉತ್ತರ ಭಾರತದಲ್ಲೂ ಅನೇಕ ಸ್ವಾಮೀಜಿಗಳು ಸಿನಿಮಾ ಕಂಡು ಭಾವುಕರಾಗಿದ್ದಾರೆ. ಅಷ್ಟಮಠಾಧೀಶರಲ್ಲಿ ಒಬ್ಬರಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರೊಂದಿಗೆ ಪೇಜಾವರ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಮಣಿಪಾಲದಲ್ಲಿ ಸಿನಿಮಾ ವೀಕ್ಷಿಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಸಿನಿಮಾ ಸುಳ್ಳಿನ ಸರಮಾಲೆಯಲ್ಲಿ ಮರೆಯಾಗಿದ್ದ ಸತ್ಯವನ್ನು ಸಮಾಜದ ಮುಂದೆ ಬಿಚ್ಚಿಟ್ಟಿದೆ. ಸತ್ಯದ ಆವಿಷ್ಕಾರ ಮಾಡಿದ ನಿರ್ದೇಶಕರಿಗೆ ಅಭಿನಂದನೆ.ಅವರು ಕೊಟ್ಟಿರುವ ಎಚ್ಚರ ಸದಾ ಕಾಲ ನಮ್ಮಲ್ಲಿ ಜಾಗೃತರಾಗಿರಬೇಕು.ಇದು ಕೇವಲ ಆಗಿ ಹೋದ ಘಟನೆಯಲ್ಲ. ಮುಂದಿನ ದಿನ ನಮಗೂ ಈ ಪರಿಸ್ಥಿತಿ ಬಾರಬಾರದಂತೆ ಎಚ್ಚರವಾಗಿರಬೇಕು.ಈ ಸಿನಿಮಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಯಲ್ಲಿ ಅನುವಾದವಾಗಬೇಕು. ಆ ಕಾಲದಲ್ಲಿ ಪಂಡಿತರು ಉಟ್ಟ ಬಟ್ಟೆಯಲ್ಲಿ ಬದುಕುಳಿದರೆ ಸಾಕೆಂದು ಊರು ಬಿಟ್ಟಿದ್ದರು,ಮತ್ತೆ ಅವರು ಸ್ವಸ್ಥಾನಕ್ಕೆ ಮರಳಬೇಕು. ಹಿಂದಿನ ವೈಭವ ಮತ್ತೆ ಕಾಶ್ಮೀರದಲ್ಲಿ ಕಾಣಬೇಕು ಎಂದು ಆಶಿಸಿದರು.
ದಿ ಕಾಶ್ಮೀರಿ ಫೈಲ್ಸ್ ವೀಕ್ಷಿಸಲು ಮೊದಲ ಬಾರಿ ಥಿಯೇಟರ್‌ಗೆ ಕಾಲಿಟ್ಟ ವಿಶ್ವಪ್ರಸನ್ನ ತೀರ್ಥರು
ಚಿತ್ರ ಪ್ರದರ್ಶನಕ್ಕೆ ಶ್ರೀಗಳು ತಮ್ಮ ಜೊತೆಗೆ ಮಠದ 35 ಶಿಷ್ಯರನ್ನು ಕೂಡ ಕರೆದೊಯ್ದಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಶನಿವಾರ ರಾತ್ರಿ ಕೊನೆಯ ಶೋ ನೋಡಲು ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದೆ ಉರಿ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಚಿಂತನೆ: ಈಗ ಇಡೀ ದೇಶದಲ್ಲಿ ಕಾಶ್ಮೀರ ಪಂಡಿತರ ಕುರಿತು ಬಿಡುಗಡೆಯಾಗಿರುವ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಬಗ್ಗೆಯೇ ಚರ್ಚೆ. 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಬಗ್ಗೆ ಪರ ವಿರೋಧ ಎರಡು ಚರ್ಚೆಯಾಗುತ್ತಿದೆ. ಇದರ ನಡುವೆ ಬಿಜೆಪಿ ಮಾತ್ರ ಈ ಸಿನಿಮಾವನ್ನ ಪ್ರತಿಯೊಬ್ಬ ಭಾರತೀಯರು ನೋಡಬೇಕು ಎಂದು ಇಡೀ ಪ್ರದರ್ಶನವನ್ನೇ ಬುಕ್ ಮಾಡಿ ತನ್ನ ಕಾರ್ಯಕರ್ತರಿಗೆ ಉಚಿತವಾಗಿ ಸಿನಿಮಾವನ್ನ ತೊರಿಸುತ್ತಿದೆ. ವಿವೇಕ್ ಆಗ್ನಿಹೊತ್ರಿ (Vivek Agnihotri) ನಿರ್ದೇಶನದ 'ದಿ ಕಾಶ್ಮೀರಿ ಫೈಲ್ಸ್' ಚಿತ್ರ ಸಧ್ಯಕ್ಕೆ ಹಿಂದೆ ಭಾಷೆಯಲ್ಲಿ ಪ್ರದರ್ಶನವಾಗ್ತಿದೆ. ಹಿಂದಿ ಭಾಷೆಯಲ್ಲಿರೋದ್ರಿಂದ ಸಿನಿಮಾ ನೋಡಲು ಕೆಲವರು ಹಿಂಜರಿಯುತ್ತಿದ್ದಾರೆ.
The Kashmir Files Free Download ಲಿಂಕ್ ಬಗ್ಗೆ ಸೈಬರ್ ತಜ್ಞರ ಎಚ್ಚರಿಕೆ!
ಇದಕ್ಕಾಗಿ ರಾಜ್ಯ ಬಿಜೆಪಿ ಈ ಸಿನಿಮಾವನ್ನ ಕನ್ನಡಕ್ಕೆ ಡಬ್ಬಿಂಗ್ (Kannada version) ಮಾಡಿ ಪ್ರದರ್ಶನ ಮಾಡಿಸಿದರೆ ಹೇಗೆ ಎಂದು ಚಿಂತನೆ ನಡೆಸಿದಯಂತೆ. 'ದಿ ಕಾಶ್ಮೀರ ಫೈಲ್ಸ್' ಚಿತ್ರವನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಇಡಿ ರಾಜ್ಯದ ಜನತೆಯ ಮುಂದೆ ಇಡಬೇಕು ಎಂದು ಕೆಲ ಸಚಿವರ ಮುಂದೆ ಸಿಎಂ ಬೊಮ್ಮಾಯಿ ಸಹ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸಹ 'ದಿ ಕಾಶ್ಮೀರಿ ಫೈಲ್ಸ್' ಚಿತ್ರವನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಇಡೀ ರಾಜ್ಯದ ತಮ್ಮ ಕಾರ್ಯಕರ್ತರಿಗೆ ತೊರಿಸುವ ತವಕದಲ್ಲಿದೆ. ಅಂದುಕೊಂಡ ಹಾಗೇ ನಡೆದರೆ ಶೀಘ್ರದಲ್ಲೇ ಕನ್ನಡ ಅವತರಣಿಕೆಯಲ್ಲಿ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.