Mysuru: ಮುಕ್ತ ವಿವಿಯಲ್ಲಿ ನಿವೃತ್ತರಾವದರಿಗೆ ಹುದ್ದೆ: ಆರೋಪ
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ನಿವೃತ್ತರಾದವರಿಗೆ ತಾತ್ಕಾಲಿಕ ಹುದ್ದೆ ನೀಡಿ ಸರ್ಕಾರದ ಆದೇಶ, ನಿರ್ದೇಶನ ಕಡೆಗಣಿಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ 4ನೇ ಹಂತದ ನಿವಾಸಿ ಆರ್.ಎನ್. ಸತ್ಯನಾರಾಯಣ ಆರೋಪಿಸಿದ್ದಾರೆ.
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ನಿವೃತ್ತರಾದವರಿಗೆ ತಾತ್ಕಾಲಿಕ ಹುದ್ದೆ ನೀಡಿ ಸರ್ಕಾರದ ಆದೇಶ, ನಿರ್ದೇಶನ ಕಡೆಗಣಿಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ 4ನೇ ಹಂತದ ನಿವಾಸಿ ಆರ್.ಎನ್. ಸತ್ಯನಾರಾಯಣ ಆರೋಪಿಸಿದ್ದಾರೆ.
ಕುವೆಂಪು ವಿವಿಯಲ್ಲಿ ಉಪ ಕುಲಸಚಿವರಾಗಿ ನಿವೃತ್ತರಾದ ಕೆ.ಎಂ. ಶಶಿಧರ ಅವರಿಗೆ ಶಿವಮೊಗ್ಗದ ಮುಕ್ತ ವಿವಿ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿಯಾಗಿ ನಿಯೋಜಿಸಿ, ಅವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಮುಕ್ತ ವಿವಿ ಕುಲಸಚಿವ ಕೆ.ಎಲ್.ಎನ್. ಮೂರ್ತಿ ಆದೇಶಿಸಿದ್ದಾರೆ.
ಈ ಆದೇಶಕ್ಕೆ ಮುಕ್ತ ವಿವಿ ಕುಲಪತಿ ಶರಣಪ್ಪ ವಿ.ಹಲಸೆ ಅವರು ಮುಕ್ತ ವಿವಿ ಕಾಯ್ದೆ 1992ರ ಎರಡನೇ ಅನುಸೂಚಿಯ 2(9) ರಲ್ಲಿನ ಅಧಿಕಾರ ಪ್ರಸ್ತಾಪಿಸಿದ್ದಾರೆ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಚಿವಾಲಯದ 2020ರ ಜೂ. 30ರ ಪತ್ರದ ಅನ್ವಯ ನಿವೃತ್ತಿಹೊಂದಿದ ನೌಕರರ ಪುನರ್ನೇಮಕ ಮತ್ತು ಸರ್ಕಾರಿ ನೌಕರರ ನಿವೃತ್ತಿ ನಂತರ ಸೇವೆ ವಿಸ್ತರಿಸದಿರುವ ಕುರಿತು ರಾಜ್ಯದ ಎಲ್ಲಾ ವಿವಿಗಳಿಗೆ ಸ್ಪಷ್ಟ ನಿರ್ದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಇಷ್ಟೆಲ್ಲಾ ನಿಯಮ, ನಿರ್ದೇಶನ ಇದ್ದರೂ ಕೆಸಿಎಸ್ ಆರ್ ನಿಯಮಕ್ಕೆ ಒಳಪಟ್ಟಿರುವ ಮುಕ್ತ ವಿವಿ ಕುಲಪತಿ ಮತ್ತು ಕುಲಸಚಿವರು ನಿವೃತ್ತರಾದವರನ್ನು ತಾತ್ಕಾಲಿಕ ಹುದ್ದೆಗೆ ನೇಮಕಾತಿ ಮಾಡಿ ಸರ್ಕಾರದ ನಿರ್ದೇಶನ, ನಿಯಮವನ್ನು ಧಿಕ್ಕರಿಸಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಉಲ್ಲಂಘನೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದ್ದಾರೆ
ದುಡ್ ಕೊಟ್ರೆ ಇಲ್ಲಿ ಪಾಸ್
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ, ಕರ್ಮಕಾಂಡಕ್ಕೆ ಸುದ್ದಿಯಾಗುತ್ತಿರುತ್ತೆ. ವಿದ್ಯಾರ್ಥಿಗಳ ಪಾಲಿಗೆ ವರ ಆಗಬೇಕಿದ್ದ ಮೈಸೂರಿನ(Mysore) ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ಅವರ ಪಾಲಿನ ಉರುಳಾಗಿ ಬೆಳೆದಿದೆ. ಜ್ಞಾನಾರ್ಜನೆಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ನೀಡದೆ, ಅಕ್ರಮಗಳನ್ನು ನಡೆಸಿ ಪ್ರಾಮಾಣಿಕ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗ್ತಿದೆ. ಇದು ಪ್ರಾಮಾಣಿಕ ವಿದ್ಯಾರ್ಥಿಯೊಬ್ಬ(Student) ವಿವಿ ಪ್ರಾಧ್ಯಾಪಕರಿಗೆ ಪೋನ್ ಮಾಡಿ ಗೋಳಾಡಿದ ಆಡಿಯೋ. ವಿವಿಯ ಸಹಾಯಕ ಪ್ರಾಧ್ಯಾಪಕ ಜಗದೀಶ್ ಬಾಬು ಹಾಗೂ ಚಿತ್ರದುರ್ಗ ಮೂಲದ ವಿದ್ಯಾರ್ಥಿಯ ಸಂಭಾಷಣೆಯಲ್ಲಿ ಮಂಡ್ಯ, ಚಿತ್ರದುರ್ಗ, ದಾವಣಗೆರೆಯ (Davanagere)ಪರೀಕ್ಷಾ ಕೇಂದ್ರಗಳ ಲಂಚಾವತಾರ ಬಿಚ್ಚಿಟ್ಟಿದ್ದಾರೆ . ಕಳೆದ ಸೆಮಿಸ್ಟರ್ ಬಹುತೇಕ ಪರೀಕ್ಷೆಗಳಲ್ಲಿ ಮಾಸ್ ಕಾಫಿ ನಡೆದಿದ್ದು, ಒಂದು ಸಾವಿರ ಕೊಟ್ಟರೆ ಎಂ,ಎ ಹಾಗೂ ಎಂ.ಕಾಂ ಪರೀಕ್ಷೆಗಳಲ್ಲಿ ಹಾಗೂ ಒಂದುವರೆ ಸಾವಿರ ಕೊಟ್ಟರೆ ಎಂ.ಎಸ್ಸಿ ಪರೀಕ್ಷೆಗಳನ್ನು ಕಾಪಿ ಮಾಡಬಹುದಂತೆ. ದುಡ್ಡು ಕೊಡಲಿಲ್ಲ ಅಂದ್ರೆ ಸಪರೇಟ್ ರೂಂ ನಲ್ಲಿ ಸ್ಟ್ರಿಕ್ಟ್ ಆಗಿ ಪರೀಕ್ಷೆ ಬರೆಸ್ತಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ. ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ವರವಾಗಲಿ ಎಂದು ಸ್ಥಾಪನೆಯಾಗಿದೆ. ಆದ್ರಿಲ್ಲಿ ಸಿಬ್ಬಂದಿಗಳು ತಮ್ಮ ಆರ್ಥಿಕತೆಗೆ ಅನುಕೂಲವಾಗುವಂತೆ ಬಳಸಿಕೊಳ್ಳುವಂತೆ ಕಾಣ್ತಿದೆ. ರಾಜ್ಯ ಸರ್ಕಾರ ಮಧ್ಯ ಪ್ರವೆಶ ಮಾಡಿ ಈ ಕರ್ಮಕಾಂಡಕ್ಕೆ ಬ್ರೇಕ್ ಹಾಕಬೇಕಿದೆ.