The girl ran away on the wedding day: ಮೊದಲು ಪ್ರೀತಿ (Love) ವಿಷಯ ಹೇಳದೆ, ಮದುವೆ ದಿನವೇ ಕೆಲ ಹುಡುಗ, ಹುಡುಗಿಯರು ಓಡಿ ಹೋಗೋದು ಇತ್ತೀಚೆಗೆ ಹೆಚ್ಚಾಗ್ತಿದೆ. ಅದರಲ್ಲಿಯೂ ಹುಡುಗಿಯರು ಮಾತ್ರ ಹೆಚ್ಚು ಓಡಿ ಹೋಗ್ತಿದ್ದಾರೆ. ಶಿರಸಿಯ ಮುಸ್ಲಿಂ ಗಲ್ಲಿಯಲ್ಲಿ ಕೂಡ ಇದೇ ಘಟನೆ ನಡೆದಿದೆ. 

ಉತ್ತರ ಕನ್ನಡ: ಶಿರಸಿಯ ಮುಸ್ಲಿಂ ಗಲ್ಲಿಯ ಯುವತಿಯೊರ್ವಳು ತಮ್ಮದೇ ಸಮಾಜದ ಎಂಬಿಬಿಎಸ್ ಕಲಿಯುತ್ತಿರುವ ಯುವಕನನ್ನು ಪ್ರೀತಿಸಿ ಮದುವೆಯಾಗಲು ರೆಡಿಯಾಗಿದ್ದಳು. ಆದರೆ ಈ ಪ್ರೀತಿ ವಿಷಯ ಯುವತಿಯ ಪಾಲಕರಿಗೆ ಗೊತ್ತಿರಲಿಲ್ಲ. ಹೀಗಾಗಿ ಅವರು ಇಂದಿರಾ ನಗರದ ಯುವಕನೊಂದಿಗೆ ಇಂದು ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮಗಳ ಮದುವೆಯನ್ನು ನಿಗದಿ ಮಾಡಿದ್ದರು.

Add Asianetnews Kannada as a Preferred SourcegooglePreferred

ನಿಜಕ್ಕೂ ಏನಾಯ್ತು?

ಮದುವೆ ಸಂಭ್ರಮದಲ್ಲಿದ್ದ ಯುವತಿ ಯುವಕನ ಕುಟುಂಬದವರಿಗೆ ಅಘಾತ ಕಾದಿತ್ತು.ಇನ್ನೇನು ಇಂದು ಬೆಳಗಿನ ಮುಹೂರ್ತದಲ್ಲಿ ಹಸೆಮಣೆ ಎರಬೇಕಾಗಿದ್ದ ಆ ಯುವತಿ ಬೆಳ್ಳಂಬೆಳಿಗ್ಗೆ ತಾನು ಪ್ರೀತಿಸುತ್ತಿದ್ದ ಎಂಬಿಬಿಎಸ್ ಕಲಿಯುತ್ತಿರುವ ರಾಮನಬೈಲ್ ಯುವಕನೊಂದಿಗೆ ಪರಾರಿಯಾಗಿ ಬಿಟ್ಟಿದ್ದಾಳೆ .ಇದರಿಂದ ಅಘಾತಕ್ಕೊಳಗಾದ ಯುವತಿಯ ಪಾಲಕರು ಮತ್ತು ಯುವಕನ ಪಾಲಕರು ಇಬ್ಬರೂ ಕೂಡಾ ಇದೀಗ ಪೋಲಿಸ್ ಮೆಟ್ಟಿಲು ಎರುವಂತಾಗಿದೆ.

ಈ ಹುಡುಗಿ ಮದುವೆಯಾಗಬೇಕಾಗಿದ್ದ ಹುಡುಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಆದರೆ ಆತನೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಮಾತ್ರ ಇಂದು ಪ್ರಿಯತಮನೊಂದಿಗೆ ( ಭಾವಿ ವೈದ್ಯ) ಜಾಗ ಖಾಲಿ ಮಾಡಿದ್ದಾಳೆ ಎನ್ನಲಾಗಿದೆ.

ಯುವತಿ ಮಾಡಿದ ತಪ್ಪಿಗೆ ನೆಟ್ಟರಿಷ್ಟರಿಗೆ ಮದುವೆ ಊಟಕ್ಕಾಗಿ ಮಾಡಿದ ಕ್ವಿಂಟಲ್ ಗಟ್ಟಲೆ ಮಟನ್,ಚಿಕನ್ ಎಲ್ಲವೂ ವೆಸ್ಟ,ವೆಸ್ಟ್ ಆಗಿದೆಯಂತೆ.ಮಟನ್ ಗಾಗಿ 20 ಕ್ಕೂ ಹೆಚ್ಚಿನ ಕುರಿ ಕಟ್ ಮಾಡಲಾಗಿತ್ತೆಂದು ಹೇಳಲಾಗುತ್ತಿದ್ದು ಇನ್ನು ಚಿಕನ್ ಎಷ್ಟಾಗಿರಬಹುದೆಂದು ಒಮ್ಮೆ ಉಹಿಸಿಕೊಳ್ಳಿ. ಅತ್ತ ಹುಡುಗನ ಕಡೆಯವರು ಮದುವೆಗೆ ಮಾಡಿದ ಖರ್ಚು ವಸೂಲಿ ಮಾಡುವ ಗಡಿಬಿಡಿಯಲ್ಲಿದ್ದಾರೆಂದು ಹೇಳಲಾಗಿದೆ