ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮಹೀಂದ್ರ ಸ್ಕಾರ್ಪಿಯೋ ಕಾರಿನಿಂದ ಮದುವೆ ಕ್ಯಾನ್ಸಲ್
ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮಹೀಂದ್ರ ಸ್ಕಾರ್ಪಿಯೋ ಕಾರಿನಿಂದ ಮದುವೆ ಕ್ಯಾನ್ಸಲ್, ಮಂತ್ರಘೋಷಗಳು ಮೊಳಗುತ್ತಿತ್ತು. ಕುಟುಂಬಸ್ಥರು ನೆರೆದಿದ್ದರು. ಆದರೆ ಮದುವೆ ನಡೆಯಲೇ ಇಲ್ಲ. ಏನಿದು ಮದುವೆಗೆ ಅಡ್ಡಿಯಾದ ಕಾರಿನ ಕತೆ

ಕೊನೇ ಕ್ಷಣದಲ್ಲಿ ಮದುವೆ ಕ್ಯಾನ್ಸಲ್
ಪೋಷಕರು, ಹಿರಿಯರು ಸೇರಿದಂತೆ ಎಲ್ಲರು ನಿಶ್ಚಿಯಿಸಿ ಮದುವೆ ನಿಗದಿ ಮಾಡಲಾಗಿತ್ತು. ಅದ್ಧೂರಿಯಾಗಿ ನಿಶ್ಚಿತಾರ್ಥವೂ ನಡೆದಿತ್ತು. ಎಂಗೇಜ್‌ಮೆಂಟ್ ಬಳಿಕ ಮದುವೆ ತಯಾರಿಗಳು ಆರಂಭಗೊಂಡಿತ್ತು. ಎಂಗೇಜ್‌ಮೆಂಟ್ ಸಂಪೂರ್ಣ ಖರ್ಚು ವೆಚ್ಚವನ್ನು ಹುಡುಗಿ ಪೋಷಕರು ಭರಿಸಿದ್ದರು. ಇತ್ತ ಮದುವೆ ಸಂಪೂರ್ಣ ಖರ್ಚು ವೆಚ್ಚ ಕೂಡ ಹುಡುಗಿ ಪೋಷಕರೇ ಮಾಡಬೇಕಿತ್ತು. ಹೀಗಾಗಿ ಶ್ರಮವಹಿಸಿ ತಯಾರಿಗಳು ನಡೆಯುತ್ತಿತ್ತು. ಮದುವೆ ದಿನ ಬಂದೇ ಬಿಟ್ಟಿತ್ತು. ಅದ್ಧೂರಿ ಮದುವೆಗೆ ವೇದಿಕೆ ಸಿದ್ದಗೊಂಡಿತ್ತು. ವಧು ವರರು ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಕುಟುಂಬಸ್ಥರು, ಆಪ್ತರು ಸೇರಿದ್ದರು. ಮಂತ್ರಗಳು ಮೊಳಗಿತ್ತು. ಇನ್ನೇನು ತಾಳಿಕಟ್ಟಬೇಕು ಅನ್ನೋವಷ್ಟರಲ್ಲೇ ಮದುವೆ ಕ್ಯಾನ್ಸಲ್ ಆಗಿದೆ. ಕಾರಣ ಮಹೀಂದ್ರ ಸ್ಕಾರ್ಪಿಯೋ ಕಾರು
ಗೋಪಾಲ್‌ಗಂಜ್‌ನಲ್ಲಿ ನಡೆದ ಮದುವೆ
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೌದು, ಒಂದು ಸ್ಕಾರ್ಪಿಯೋ ಕಾರಿನಿಂದ ಮದುವೆ ನಿಂತಿದೆ. ಅಷ್ಟಕ್ಕೂ ಸ್ಕಾರ್ಪಿಯೋ ಕಾರು ಮಂಟಪಕ್ಕೆ ನುಗ್ಗಿ ಬಂದಿಲ್ಲ. ಅಥವಾ ವರ ಮಂಟಪಕ್ಕೆ ಬರುವಾಗ ಸ್ಕಾರ್ಪಿಯೋ ಕಾರು ಅಡ್ಡಿಯಾಗಿಲ್ಲ. ಬದಲಾಗಿ ಎದುರಿಗೆ ಸ್ಕಾರ್ಪಿಯೋ ಕಾರಿಲ್ಲ ಅನ್ನೋ ಕಾರಣಕ್ಕೆ ಮದುವೆ ರದ್ದಾಗಿದೆ.
ವರದಕ್ಷಿಣೆಗೆ ಮದುವೆ ಕ್ಯಾನ್ಸಲ್
ಹುಡುಗಿ ಪೋಷಕರು ವರದಕ್ಷಿಣೆ ರೂಪದಲ್ಲಿ ಸ್ಕಾರ್ಪಿಯೋ ಕಾರು ನೀಡಬೇಕು ಎಂದು ವರನ ಬೇಡಿಕೆಯಾಗಿತ್ತು. ಸಾಲ ಮಾಡಿ ಮದುವೆ ಮಾಡುತ್ತಿದ್ದ ವಧುವಿನ ಪೋಷಕರಿಗೆ ಇದು ಅಸಾಧ್ಯವಾಗಿತ್ತು. ಆದರೂ ಶಕ್ತಿ ಮೀರಿ ಪ್ರಯತ್ನಿಸಿದ್ದರು. ಮದುವೆ ನಡೆದ ಬಳಿಕ ಸ್ಕಾರ್ಪಿಯೋ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದರು. ಆದರೆ ತಾಳಿಕಟ್ಟುವಾಗ ಸ್ಕಾರ್ಪಿಯೋ ಕಾರಿನ ಕೀ ನನಗೆ ನೀಡಬೇಕು ಎಂದು ಷರತ್ತು ವಿಧಿಸಿತ್ತು. ತನ್ನ ಎದುರಿಗೆ ಸ್ಕಾರ್ಪಿಯೋ ಕಾರು ಇರಲಿಲ್ಲ, ಕಿ ಸಿಗಲಿಲ್ಲ ಎಂದು ವರ ಮದುವೆಗೆ ನಿರಾಕರಿಸಿದ ಘಟನೆ ಇದು.
ಮದುವೆ ಮಂಟಪದಲ್ಲಿ ರಂಪಾಟ
ಹುಡುಗಿ ಪೋಷಕರು ವರ ಹಾಗೂ ಆತನ ಕುಟುಂಬಸ್ಥರ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಮದುವೆ ಮುಗಿಯಲು ಬಳಿಕ ಹೇಗಾದರು ಮಾಡಿ ಸ್ಕಾರ್ಪಿಯೋ ಕಾರು ಖರೀದಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ವರ ಹಾಗೂ ಆತನ ಮನೆಯವರು ಒಪ್ಪಲೇ ಇಲ್ಲ. ಈಗ ಕೊಟ್ಟರೆ ಮದುವೆ ಎಂದಿದ್ದಾರೆ. .ಯಾವ ಮಾತುಕತೆಯೂ ಫಲಪ್ರದವಾಗಲಿಲ್ಲ. ಕೊನೆಗೆ ಮದುವೆ ರದ್ದಾಗಿತ್ತು. ವಧುವಿನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಮದುವೆ ಮಂಟಪದಲ್ಲೇ ಮಾತಿನ ಚಕಮಕಿ ನಡೆದಿತ್ತು.
ಹುಡುಗಿ ಪೋಷಕರಿಂದ ಪೊಲೀಸರಿಗೆ ದೂರು
ಸಾಲ ಮಾಡಿ ಮದುವೆ ಆಯೋಜಿಸಲಾಗಿತ್ತು. ಮಗಳ ಭವಿಷ್ಯವನ್ನು ವರದಕ್ಷಿಣೆ ವಿಚಾರದಲ್ಲಿ ಕತ್ತಲಲ್ಲಿ ಇಟ್ಟ ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವೇಳೆ ಎಂಗೇಜ್ಮೆಂಟ್ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಹಣ ನೀಡಿರುವುದಾಗಿ ಹೇಳಿದ್ದಾರೆ.
ಹುಡುಗಿ ಪೋಷಕರಿಂದ ಪೊಲೀಸರಿಗೆ ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

