ಬಂಟ್ವಾಳದ ಬಿ.ಮೂಡ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಕೃಷ್ಣ ಕುಲಾಲ್ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎ.ಎಂ.ಆರ್. ಸಂಸ್ಥೆಯ ವತಿಯಿಂದ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರು ಈ ಪರಿಹಾರ ಧನವನ್ನು ಹಸ್ತಾಂತರಿಸಿದರು.

ಉತ್ತರ ಕನ್ನಡ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ ಕೃಷ್ಣ ಕುಲಾಲ್ ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಕ್ಕೆ ಎ.ಎಂ.ಆರ್. ಸಂಸ್ಥೆಯ ವತಿಯಿಂದ 5 ಲಕ್ಷ ರು. ಪರಿಹಾರ ಧನವನ್ನು ಹಸ್ತಾಂತರಿಸಲಾಯಿತು.

ಹೆಚ್.ಟಿ. ವಿದ್ಯುತ್ ತಂತಿ ತಗುಲಿ ಸಂಭವಿಸಿದ ದುರ್ಘಟ

ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‌ಗೆ ವಿದ್ಯುತ್ ಸರಬರಾಜು ಮಾಡುವ ಹೆಚ್.ಟಿ. ವಿದ್ಯುತ್ ತಂತಿ ತಗುಲಿ ಸಂಭವಿಸಿದ ದುರ್ಘಟನೆಯಲ್ಲಿ ಕೃಷ್ಣ ಕುಲಾಲ್ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎ.ಎಂ.ಆರ್. ಸಂಸ್ಥೆಯ ವತಿಯಿಂದ ನೀಡಲಾದ ₹5 ಲಕ್ಷ ಪರಿಹಾರ ಧನವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮೂಲಕ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: Hassan: 23 ಕೋಟಿ ವೆಚ್ಚದ ಹೊಸ ಸೇತುವೆ ಆರಂಭದಲ್ಲೇ ಕಳಪೆ ಕಾಮಗಾರಿ; ಕಂಬಗಳಲ್ಲಿ ಬಿರುಕು

ಈ ಸಂದರ್ಭದಲ್ಲಿ ಗೋವಿಂದ ಪ್ರಭು, ಸುಲೋಚನಾ ಜಿ. ಕೆ. ಭಟ್, ಹರಿಕೃಷ್ಣ ಬಂಟ್ವಾಳ್, ಮಚ್ಚೇಂದ್ರ ಸಾಲ್ಯಾನ್, ಕೇಶವ ದೈಪಲ, ಸುದರ್ಶನ್ ಬಜ, ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ, ಮಾಧವ ಮಾವೆ, ದಿನೇಶ್ ಅಮ್ಟೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: Travel: ದಸರಾ ಹಬ್ಬಕ್ಕೆ ಮಂಗಳೂರು KSRTCಯಿಂದ ವಿಶೇಷ ಕೊಡುಗೆ; 5 ಪ್ಯಾಕೇಜ್ ಘೋಷಣೆ