ವಿಜಯಪುರ: ವಿಕಲಚೇತನರಿಗೆ ವಿಶಿಷ್ಠ ಗುರುತಿನ ಚೀಟಿ: ಜಿಪಂ ಸಿಇಓ ರಾಹುಲ್ ಶಿಂಧೆ

*  ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಬ್ಬ ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ
*  ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ
*  ಇಂಡಿ ತಾಲೂಕಿನಲ್ಲಿ ಯಶಸ್ವಿ 
 

Unique Identity Card for Disabilities Says Vijayapura ZP CEO Rahul Sindhe grg

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್‌, ವಿಜಯಪುರ

ವಿಜಯಪುರ(ಮೇ.27):  ಜಿಲ್ಲೆಯ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎರಡು ದಿನಗಳ ವಿಶೇಷ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲಾ ಪಂಚಾಯತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಬ್ಬ ವಿಕಲಚೇತನರಿಗೆ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ನೀಡಲಾಗುತ್ತದೆ.

ತಪಾಸಣಾ ಶಿಬಿರದ ದಿನದಂದು ಪ್ರತಿಯೊಬ್ಬ ತಜ್ಞ ವೈದ್ಯರು ಹಾಜರಿರುವ ಹಾಗೆ ಕ್ರಮವಹಿಸಲಾಗಿದ್ದು, ವಿಕಲಚೇತನ ಫಲಾನುಭವಿಗಳು ತಮ್ಮ ಗ್ರಾಮಗಳಿಂದ ಆಸ್ಪತ್ರೆಗೆ ಬಂದು ಹೋಗಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯತಿಗಳಿಂದ ವ್ಯವಸ್ಥಿತ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಿಇಓ ಅವರು ತಿಳಿಸಿದ್ದಾರೆ.

Vijayapuara: ನಾನು ತಪ್ಪು ಮಾಡಿದ್ದರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ: ಕೆ.ಎಸ್‌.ಈಶ್ವರಪ್ಪ

ಇಂಡಿ ತಾಲೂಕಿನಲ್ಲಿ ಯಶಸ್ವಿ 

ಇಂಡಿ ತಾಲೂಕಿನಲ್ಲಿ ಮೇ 24 ಮತ್ತು ಮೇ 25ರವರೆಗೆ ಎರಡು ದಿನ ವಿಶೇಷ ತಪಾಸಣಾ ಶಿಬಿರ ನಡೆದು ಯಶಸ್ವಿಯಾಗಿದೆ. 700ಕ್ಕೂ ಹೆಚ್ಚು ಜನ ವಿಕಲಚೇತನರು ತಪಾಸಣೆಗೊಳಪಟ್ಟು ವಿಶೇಷ ಸೌಲಭ್ಯ ಪಡೆದರು. ಶ್ರವಣದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಇನ್ನುಳಿದ ದೈಹಿಕ, ಬೌದ್ಧಿಕ ವಿಕಲತೆ, ಮಾನಸಿಕ ಅಸ್ವಸ್ಥರು, ದೃಷ್ಟಿ ದೋಷವುಳ್ಳ ವಿಕಲಚೇತನರು ವಿಶೇಷ ತಪಾಸಣೆಗೊಳಪಟ್ಟು ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ ಪಡೆಯಲು ಮುಂದಾಗಿದ್ದಾರೆ.
ಒಂದೇ ಸ್ಥಳದಲ್ಲಿ ತಜ್ಞ ವೈದ್ಯರು ಲಭ್ಯವಿರುವುದರಿಂದ ಪ್ರತಿಯೊಬ್ಬ ಅರ್ಹ ವಿಕಲಚೇತನರು ಯಾವುದೇ ಸಮಸ್ಯೆ ಇಲ್ಲದೇ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಯನ್ನು ಪಡೆಯಲು ಸಹಾಯವಾಗಿದೆ. ಇಲ್ಲಿಯವರೆಗೂ ಅರ್ಜಿಯನ್ನು ಸಲ್ಲಿಸದೇ ಇದ್ದ ವಿಕಲಚೇತನರ ಅರ್ಜಿಗಳನ್ನು ಶಿಬಿರದ ದಿನದಂದೇ ಪಡೆದು ತಪಾಸಣೆಗೊಳಪಡಿಸಿ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಗಳನ್ನು ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಪರಿಣಾಮವಾಗಿ 635 ಜನ ವಿಕಲಚೇತನರು ಗುರುತಿನ ಚೀಟಿಗಳನ್ನು ಪಡೆಯುವಂತಾಗಿದೆ ಎಂದು ಸಿಇಓ ತಿಳಿಸಿದ್ದಾರೆ.

ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ

ಇಂಡಿಯ ಸಹಾಯಕ ಆಯುಕ್ತರಾದ ರಾಮಚಂದ್ರ ಗಡದೆ, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಮದ್ದಿನ, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಸಂಜಯ ಖಡಗೇಕರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಆಶು ನದಾಫ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಗುನಾರಿ, ಇಂಡಿ ತಾಲೂಕ ವೈದ್ಯಾಧಿಕಾರಿಗಳಾದ ಅರ್ಚನಾ ಕುಲಕರ್ಣಿ, ಇಂಡಿ ತಾಲೂಕಿನ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಆರ್.ಟಿ ಕೊಳಿಕರ ಹಾಗೂ ಇತರರು ಇಂಡಿ ತಾಲೂಕಿನಲ್ಲಿ ಎರಡು ದಿನಗಳ ವಿಶೇಷ ಶಿಬಿರದ ಆಯೋಜನೆಯನ್ನು ಅಚ್ಚುಕಟ್ಟುಗೊಳಿಸಿದ್ದಾರೆ ಎಂದು ಇದೆ ವೇಳೆ ಸಿಇಓ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Latest Videos
Follow Us:
Download App:
  • android
  • ios