Asianet Suvarna News Asianet Suvarna News

Vijayapuara: ನಾನು ತಪ್ಪು ಮಾಡಿದ್ದರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ: ಕೆ.ಎಸ್‌.ಈಶ್ವರಪ್ಪ

• ವೇದಿಕೆಯಲ್ಲಿ ಈಶ್ವರಪ್ಪ ವೀರಾವೇಶದ ಭಾಷಣ..!
• ಎಲ್ಲ ದೇಗುಲ ವಾಪಾಸ್‌ ಪಡೆಯುತ್ತೇವೆಂದ ಈಶ್ವರಪ್ಪ..!
• ಕಾಶಿಯಲ್ಲಿ ಮಸೀದಿ ಹೋಗುತ್ತೆ, ವಿಶ್ವನಾಥನ ಮಂದಿರ ಬರುತ್ತೆ..!

i am confidant come out from allegation says ks eshwarappa in vijayapuara gvd
Author
Bangalore, First Published May 27, 2022, 1:05 AM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಮೇ.27): ಭಕ್ತ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವೇದಿಕೆ ಮೇಲೆ ಖಡಕ್‌ ಭಾಷಣ ಮಾಡಿದ್ದಾರೆ. ಕಾಶಿ ವಿಶ್ವನಾಥ ಮಂದಿರದ ಬಗ್ಗೆ ಈಶ್ವರಪ್ಪ ಮಾಡಿದ ಪವರ್‌ ಪುಲ್‌ ಭಾಷಣಕ್ಕೆ ಕಾರ್ಯಕ್ರಮದಲ್ಲಿ ಕೇಕೇ.. ಶಿಳ್ಳೆ.. ಚಪ್ಪಾಳೆ ಬಿದ್ದವು..!

ವೇದಿಕೆ ಮೇಲೆ ಸ್ಪೋಟಕ ಹೇಳಿಕೆ ನೀಡಿದ ಈಶ್ವರಪ್ಪ: ಭಕ್ತ ಕನಕದಾಸರ ಮೂರ್ತಿ ಅನಾವರಣ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಈಶ್ವರಪ್ಪ ಖಡಕ್ಕಾಗಿಯೇ ಭಾಷಣ ಆರಂಭಿಸಿದ್ರು. ಹಿಂದೆ ಧರ್ಮಾಂಧರ ದಾಳಿಗೊಳಗಾದ ದೇಗುಲಗಳ ಬಗ್ಗೆ ಮಾತನಾಡುತ್ತ ದೇಶ 36 ಸಾವಿರ ದೇವಾಲಯಗಳನ್ನ ಸಹ ಪುನರ್ ಸ್ಥಾಪಿಸಿ ಪ್ರತಿಷ್ಠಾಪಿಸಲಿದ್ದೇವೆ ಎಂದು ಸ್ಪೋಟಕ ಹೇಳಿಕೆ‌ ನೀಡಿದರು. ಕಾನೂನು ಮೂಲಕವಾಗಿಯೇ ದೇಗುಲಗಳನ್ನ ವಾಪಾಸ್‌ ಪಡೆಯುತ್ತೇವೆ. ಇಂದಿಲ್ಲ ನಾಳೆ ಎಲ್ಲಾ ದೇಗುಲಗಳು ಹಿಂದೂಗಳ ಕೈಗೆ ಬರುತ್ವೆ ಎಂದು ಈಶ್ವರಪ್ಪ ಆರ್ಭಟಿಸಿದ್ದಾರೆ..

ಕಾಂಗ್ರೆಸ್​​ನ ಇಬ್ಬರು ಪ್ರಭಾವಿ ನಾಯಕರು ಬಿಜೆಪಿಗೆ ಬರಲು ನಾಟಕ ಮಾಡ್ತಿದ್ದಾರೆ- ಯತ್ನಾಳ್ ಬಾಂಬ್

ದೇಗುಲ ಪುಡಿ ಪುಡಿ ಮಾಡಿದವ್ರನ್ನ ಸುಮ್ಮನೆ ಬಿಡೋಲ್ಲ: ಈಶ್ವರನ ಲಿಂಗ, ಸೋಮನಾಥನ ಲಿಂಗ, ಕಾಶಿ ವಿಶ್ವನಾಥನ ಲಿಂಗ, ಮಥುರಾ ಶ್ರೀಕೃಷ್ಣನ ಭೂಮಿ, ಅಯೋಧ್ಯೆ ಶ್ರೀರಾಮಚಂದ್ರನ ಭೂಮಿಯನ್ನ ಪುಡಿ ಪುಡಿ ಮಾಡಿದವರನ್ನ ಸುಮ್ಮನೆ ಬಿಡೋದಿಲ್ಲ ಎಂದಿದ್ದಾರೆ. ಯಾರೂ ಕೂಡ ಕಾನೂನು ಮೀರುವುದಿಲ್ಲ. ಮಹಾತ್ಮ ಡಾ ಬಿ ಆರ್‌ ಅಂಬೇಡ್ಕರ್‌ ಸಂವಿಧಾನ ಸೃಷ್ಟಿಸಿದ್ದಾರೆ. ಕಾನೂನು ಗೌರವ ಕೊಡಬೇಕು ಎಂದಿದ್ದಾರೆ. ಈಗ ನೋಡಿ ಒಂದೊಂದೆ ದೇಗುಲಗಳ ಸರ್ವೇ ನಡೆಯುತ್ತಿದೆ ಎಂದಿದ್ದಾರೆ.

ಕಾಶಿ ವಿಶ್ವನಾಥನ ಲಿಂಗ ಇರುವ ಮಸೀದಿ ಹೋಗುತ್ತೆ: ಕಾಶಿ ಮಸೀದಿಯಲ್ಲಿ ಶಿವಲಿಂಗ ಇರುವ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ಕಾಶಿಯಲ್ಲಿ ವಿಶ್ವನಾಥನ ದೇಗುಲ ಪುನರ್‌ ಸ್ಥಾಪಿಸಿದ್ದು, ಕುರುಬ ಸಮುದಾಯದ ಅಹಲ್ಯಾಬಾಯಿ ಹೋಳ್ಕರ್. ಕಾಶಿ ವಿಶ್ವನಾಥನ ಲಿಂಗ ಇರುವ ಜಾಗದಲ್ಲಿ ಮಸೀದಿ ಕಟ್ಟಲಾಗಿದೆ. ಮುಂದೆ ಕಾನೂನು ಪ್ರಕಾರ ಅಲ್ಲಿನ ಮಸೀದಿ ಹೋಗುತ್ತೆ. ಕಾಶಿ ವಿಶ್ವನಾಥನ ದೇಗುಲ ಬಂದೇ ಬರುತ್ತೆ ಎಂದರು. ಆಗ ಕನಕದಾಸರಿಗೆ, ಸಂಗೊಳ್ಳಿ ರಾಯಣ್ಣನಿಗೆ, ಕಿತ್ತೂರು ರಾಣಿ ಚೆನ್ನಮ್ಮಗೆ ಸಮಾಧಾನ ಎಂದ್ರು. ಎಲ್ಲ ಮಹಾಪುರುಷರಿಗೆ ಸಮಾಧಾನವಾಗುವ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು ಎಂದು ವೀರಾವೇಶದಲ್ಲಿ ಭಾಷಣ ಮಾಡಿದ್ರು..

ಪರೋಕ್ಷವಾಗಿ ಯಡಿಯೂರಪ್ಪ ವಿರೋಧಿಗಳಿಗೆ ಟಾಂಗ್‌ ಕೊಟ್ಟ ಬೈರತಿ..!

ಆರೋಪಗಳಿಂದ ಚೌಡೇಶ್ವರಿ ಪಾರು ಮಾಡ್ತಾಳೆ: ಈಶ್ವರಪ್ಪ ತಮ್ಮ‌ ಮೇಲಿನ ಆರೋಪಗಳಿಗೆ ಮನೆ ದೇವತೆಯ ಮೇಲೆ‌ ಭಾರ ಹಾಕಿದ್ದೇ‌ನೆ, ಇದರಿಂದ ಪಾರಾಗುತ್ತೇ‌ನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮನೆ ದೇವರು ಚೌಡೇಶ್ವರಿ, ನಾನು ತಪ್ಪು ಮಾಡಿಲ್ಲ ಎನ್ನುವುದಾದರೇ ಚೌಡೇಶ್ವರಿಯೇ ನನ್ನ ಆರೋಪದಿಂದ ಹೊರ ತರ್ತಾಳೆ ಎಂದರು.

Follow Us:
Download App:
  • android
  • ios