Asianet Suvarna News Asianet Suvarna News

ದತ್ತಪೀಠ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಎಲ್ಲ ರೀತಿಯ ವಿರೋಧಗಳನ್ನು ಎದುರಿಸಿ ದತ್ತಾತ್ರೇಯರ ಪೂಜೆಗೆ ಅವಕಾಶ ಸಿಕ್ಕಿದೆ. ದತ್ತಪಾದುಕೆಗಳಿಗೆ ಇಂದು ನಿರಂತರ ಪೂಜೆಯಾಗುತ್ತಿದೆ. ದತ್ತಪೀಠ ನೂರಕ್ಕೆ ನೂರರಷ್ಟು ನಮ್ಮದಾಗಬೇಕು. ಜೊತೆಗೆ ದತ್ತಪೀಠದ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು. ಎಲ್ಲ ಸೌಕರ್ಯಗಳು ಭಕ್ತರಿಗೆ ಸಿಗುವಂತಾಗಬೇಕು: ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ 

Union Minister Shobha Karandlaje Talks Over Dattapeetha in Chikkamagaluru grg
Author
First Published Dec 26, 2023, 8:57 AM IST

ಚಿಕ್ಕಮಗಳೂರು(ಡಿ.26):  ಹಿಂದೂಗಳ ಪೀಠವಾಗಿರುವ ದತ್ತಪೀಠ ಈಗಾಗಲೇ ಭಾಗಶಃ ಹಿಂದೂಗಳಿಗೆ ಸಿಕ್ಕಂತಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ಎಲ್ಲ ರೀತಿಯ ವಿರೋಧಗಳನ್ನು ಎದುರಿಸಿ ದತ್ತಾತ್ರೇಯರ ಪೂಜೆಗೆ ಅವಕಾಶ ಸಿಕ್ಕಿದೆ. ದತ್ತಪಾದುಕೆಗಳಿಗೆ ಇಂದು ನಿರಂತರ ಪೂಜೆಯಾಗುತ್ತಿದೆ. ದತ್ತಪೀಠ ನೂರಕ್ಕೆ ನೂರರಷ್ಟು ನಮ್ಮದಾಗಬೇಕು. ಜೊತೆಗೆ ದತ್ತಪೀಠದ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು. ಎಲ್ಲ ಸೌಕರ್ಯಗಳು ಭಕ್ತರಿಗೆ ಸಿಗುವಂತಾಗಬೇಕು ಎಂದರು.

ಪಶ್ಚಿಮಘಟ್ಟದ ತಪ್ಪಲಲ್ಲಿರುವ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮಂಗಳವಾರ ತೆರೆ ಕಾಣಲಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಶೋಭಾಯಾತ್ರೆ ಶಾಂತಿಯುತವಾಗಿ ಸಂಪನ್ನವಾಯಿತು.

ದತ್ತ ಜಯಂತಿ: ದತ್ತಮಾಲಾಧಾರಿ ಸಿ ಟಿ ರವಿಯಿಂದ ಮನೆ ಮನೆಗೆ ತೆರಳಿ ಭಿಕ್ಷಾಟನೆ

ತಂಡೋಪ ತಂಡವಾಗಿ ಯಾತ್ರೆಯಲ್ಲಿ ಸಾಗಿದ ಯುವಕರು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗೆ ರಸ್ತೆಯ ಉದ್ದಕ್ಕೂ ನಿಂತಿದ್ದ ಸಾರ್ವಜನಿಕರು ಧ್ವನಿ ಗೂಡಿಸುತ್ತಿದ್ದರು.
ಶೋಭಾಯಾತ್ರೆಯಲ್ಲಿ ಡಿಜೆ, ಗೊಂಬೆ ಮೇಳ, ಹಳ್ಳಿ ವಾದ್ಯಗಳು ಇದ್ದವು. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಚಿವರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್, ಶಾಸಕ ವಿ.ಸುನಿಲ್‌ ಕುಮಾರ್ ಮತ್ತಿತರ ನಾಯಕರು ಇದ್ದರು, ಗಣಪತಿ ದೇಗುಲದಿಂದ ಆರಂಭವಾದ ಮೆರವಣಿಗೆಯು ಆಜಾದ್ ಪಾರ್ಕ್‌ ವೃತ್ತಕ್ಕೆ ತಲುಪಿದ ಬಳಿಕ ಮುಕ್ತಾಯಗೊಂಡಿತು.

ಇಂದು ತೆರೆ: 

ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ಮಂಗಳವಾರ ತೆರೆ ಬೀಳಲಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ದತ್ತಭಕ್ತರು ಮಾಲೆ ಧರಿಸಿ ಆಗಮಿಸಿದ್ದಾರೆ. ಬೆಳಿಗ್ಗೆ ಆಗಮಿಸಲಿರುವ ದತ್ತಪೀಠದ ದತ್ತ ಗುಹೆಯೊಳಗೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ನಂತರ ನಿರ್ಗಮಿಸಲಿದ್ದಾರೆ.

ಚಿಕ್ಕಮಗಳೂರು: ದತ್ತ ಜಯಂತಿ ಶೋಭಾಯಾತ್ರೆ, ಕೇಸರಿಯಲ್ಲಿ ಮಿಂದೆಂದ ಕಾಫಿನಾಡು!

ದತ್ತಪೀಠಕ್ಕೆ ಅಶೋಕ್ ಭೇಟಿ:

ಇದೇ ಮೊದಲ ಬಾರಿಗೆ ದತ್ತಮಾಲೆ ಧರಿಸಿರುವ ಆರ್.ಅಶೋಕ್ ಅವರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದರು. ಸುನಿಲ್‌ ಕುಮಾರ್ ಸಾಥ್‌ ನೀಡಿದರು.

ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ

ದತ್ತಜಯಂತಿ ಸಂದರ್ಭದಲ್ಲಿ ಪ್ರತೀತಿಯಂತೆ ಮಾಜಿ ಸಚಿವ ಸಿ.ಟಿ. ರವಿ ಹಾಗೂ ದತ್ತಮಾಲಾಧಾರಿಗಳು ನಗರದ ಬಸವನಹಳ್ಳಿ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿದರು.

Follow Us:
Download App:
  • android
  • ios