ತೇಜಸ್ವಿ ಸೂರ್ಯ ಮೆಟ್ರೋ ಮಿತ್ರ: ಸಂಸದರ ಬಗ್ಗೆ ಸಚಿವ ಕೇಂದ್ರ ಸಚಿವ ಮನೋಹರ್ ಖಟ್ಟರ್ ಮೆಚ್ಚುಗೆ

ತೇಜಸ್ವಿ ಸೂರ್ಯ ಯಾವುದೇ ಕಾರ್ಯ ಕೈಗೆತ್ತಿಕೊಂಡರೆ, ಅದನ್ನು ಪೂರ್ಣಗೊಳ್ಳುವವರೆಗೂ ಅವಿರತವಾಗಿ ಶ್ರಮಿಸುವುದು ಅವರ ಕಾರ್ಯವೈಖರಿಗೆ ಸಾಕ್ಷಿ, ಮೆಟ್ರೋ ಕಾರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ನನ್ನನ್ನು ಭೇಟಿಯಾಗಿ ಬೆಂಗಳೂರು ಮೆಟ್ರೋ ಶೀಘ್ರಗತಿಯ ಕಾರ್ಯಾಚರಣೆ ಕುರಿತಂತೆ ಒತ್ತಾಯಪಡಿಸಿದರು ಎಂದು ತಿಳಿಸಿದ ಕೇಂದ್ರ ನಗರಾಭಿವೃದಿ ಸಚಿವ ಮನೋಹರ್ ಲಾಲ್ ಖಟ್ಟರ್

Union Minister Manohar Khattar appreciates MP Tejasvi Surya's Work About Namma Metro grg

ಬೆಂಗಳೂರು(ಜ.07): ಸಂಸದ ತೇಜಸ್ವಿ ಸೂರ್ಯ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ನಗರಾಭಿವೃದಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ತೇಜಸ್ವಿ ಅವರನ್ನು 'ಮೆಟ್ರೋ ಮಿತ್ರ' ಎಂದು ಕರೆದು ಪ್ರಶಂಸಿಸಿದ್ದಾರೆ. 

ಕೋಲ್ಕತ್ತಾದ ಟೀಟಾಫರ್‌ನಲ್ಲಿ ನಡೆದ ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಪ್ರಥಮ ಬೋಗಿಗಳ ಚಾಲನಾ ಸಮಾರಂಭದಲ್ಲಿ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಬೆಂಗಳೂರು ಮಹಾನಗರದ ಮೆಟ್ರೋ ಆಗತ್ಯತೆಗಳಿಗೆ ತಕ್ಕಂತೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿರುವುದು ಅಭಿನಂದನಾರ್ಹ ಎಂದರು. 

ಮೆಟ್ರೋ ಯೆಲ್ಲೋ ಲೈನ್‌ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್‌, ಅಪ್‌ಡೇಟ್‌ ನೀಡಿದ BMRCL!

ಒಂದು ವ್ಯವಸ್ಥಿತ ತಂಡವಾಗಿ ಕಾರ್ಯನಿರ್ವಹಿಸುವುದು ಪ್ರಗತಿಯ ಸಂಕೇತ, ಯುವ ನಾಯಕರಾಗಿ ತೇಜಸ್ವಿ ಸೂರ್ಯ ಅವರು ಈ ತಂಡದಲ್ಲಿ ಇರುವುದರಿಂದ ಅವರ ಪ್ರಯತ್ನದ ಫಲವಾಗಿ ವೇಗದ ಗತಿಯಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ತೇಜಸ್ವಿ ಸೂರ್ಯ ಅವರು ಯಾವುದೇ ಕಾರ್ಯ ಕೈಗೆತ್ತಿಕೊಂಡರೆ, ಅದನ್ನು ಪೂರ್ಣಗೊಳ್ಳುವವರೆಗೂ ಅವಿರತವಾಗಿ ಶ್ರಮಿಸುವುದು ಅವರ ಕಾರ್ಯವೈಖರಿಗೆ ಸಾಕ್ಷಿ, ಮೆಟ್ರೋ ಕಾರ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಬಾರಿ ನನ್ನನ್ನು ಭೇಟಿಯಾಗಿ ಬೆಂಗಳೂರು ಮೆಟ್ರೋ ಶೀಘ್ರಗತಿಯ ಕಾರ್ಯಾಚರಣೆ ಕುರಿತಂತೆ ಒತ್ತಾಯಪಡಿಸಿದರು ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ನಗರಾಭಿವೃದಿಗೆ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದಾರೆ. ಪ್ರತೀ ನಗರದಿಂದಲೂ ತೇಜಸ್ವಿ ಸೂರ್ಯ ಅವರಂತಹ ಜನಪ್ರತಿನಿಧಿಗಳು ಆಯ್ಕೆಯಾಗಿ ಬಂದರೆ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕಲು ಯಾವುದೇ ಅಡೆತಡೆಗಳು ಇರುವುದಿಲ್ಲ. ಬೆಂಗಳೂರು ಅಭಿವೃದ್ಧಿಗೆ, ವಿಶ್ವದರ್ಜೆಯ ನಗರವನ್ನಾಗಿಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಹಳದಿ ಮೆಟ್ರೋದಿಂದ ಸಂಚಾರ ದಟ್ಟಣೆಗೆ ತಡೆ: 

ತೇಜಸ್ವಿ ಸೂರ್ಯ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಗರದ ಸಂಚಾರ ದಟ್ಟಣೆ ನಿಯಂ ತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ಹಳದಿ ಮಾರ್ಗದ ಮೊದಲ ಮೆಟ್ರೋ ಬೋಗಿಗಳಿಗೆ ಕೋಲ್ಕತ್ತಾದ ಟೀಟಾಘರ್‌ನಲ್ಲಿ ಚಾಲನೆ ನೀಡಲಾಗಿದೆ. 

ಬಸ್‌ ಟಿಕೆಟ್‌ ಬಳಿಕ ಮೆಟ್ರೋ ದರವೂ ಹೆಚ್ಚಳ?

ಮೆಟ್ರೋ ಹಳದಿ ಮಾರ್ಗದ ಮೊದಲ ರೈಲು ಬೋಗಿಗೆ ಟಿಟಾನಗರದಿಂದ ಹಸಿರು ನಿಶಾನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಬೆಂಗಳೂರು ತಲುಪಲಿದೆ. ಫೆಬ್ರವರಿ ಮೊದಲ ವಾರದಲ್ಲಿ 2ನೇ ರೈಲು ಬೋಗಿ ಬರಲಿದೆ. ಮಾರ್ಚ್, ಏಪ್ರಿಲ್ ನಂತರ ಪ್ರತಿ ತಿಂಗಳು ಬೆಂಗಳೂರಿಗೆ 2 ರೈಲು ಬೋಗಿ ಬರಲಿದೆ. ಆದಷ್ಟು ಬೇಗ ಆರ್.ವಿ.ರಸ್ತೆನಿಂದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಮೆಟ್ರೋ ರೈಲು ಆರಂಭ ಮಾಡಲಾಗುವುದು. ಇದು ಸಂಚಾರ ದಟಣೆಗೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. 

ಮೆಟ್ರೊ ಮಾರ್ಗದ ಆರಂಭಕ್ಕೆ ಇದ್ದ ಅಡೆತಡೆ ನಿವಾರಿಸಲು ಹಲವು ಪ್ರಯತ್ನ ಮಾಡಿದ್ದು, ಈ ಕಾರ್ಯಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ಒಂದೇ ವೇದಿಕೆಗೆ ತಂದು ಅಧಿಕಾರಿಗಳ ಮತ್ತು ಸಚಿವರ ಮಟ್ಟದಲ್ಲಿ ಇದ್ದ ತೊಂದರೆಗಳನ್ನು ಬಗೆಹರಿಸಲು ಅವಿರತವಾಗಿ ಶ್ರಮ ವಹಿಸಲಾಗಿದೆ. 1.2 ಕೋಟಿ ವಾಹನಗಳು ರಸ್ತೆಗಿಳಿಯುವ ಬೆಂಗಳೂರು ನಗರದಲ್ಲಿ, ಈ ಮಾರ್ಗ ಆರಂಭವಾಗುವುದರಿಂದ ಪ್ರತಿನಿತ್ಯ 2.5 ಲಕ್ಷಕ್ಕೂ ಅಧಿಕ ಪ್ರಯಾಣಿಕ ರಿಗೆ ಐಟಿ-ಬಿಟಿ, ಕೈಗಾರಿಕಾ ಕಾರಿಡಾರ್‌ಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದರು.

Latest Videos
Follow Us:
Download App:
  • android
  • ios