ರಾಮಮಂದಿರ ನಿರ್ಮಾಣ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ: ಪೇಜಾವರಶ್ರೀ
ಶ್ರೀರಾಮಮಂದಿರ ಸ್ಥಾಪನೆ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ. ಭಾರತದಲ್ಲಿ ರಾಮರಾಜ್ಯ ನಿರ್ಮಾಣ ಆಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು.ಎಂದು ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.
ವಿಜಯನಗರ (ಏ.6): ಶ್ರೀರಾಮಮಂದಿರ ಸ್ಥಾಪನೆ ಬಳಿಕ ದೇಶದಲ್ಲಿ ಧರ್ಮಜಾಗೃತಿ ಪರ್ವ ಆರಂಭವಾಗಿದೆ ಎಂದು ಉಡುಪಿಯ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.
ಇಂದು ಹೊಸಪೇಟೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಶ್ರೀಗಳು, ಭಾರತದಲ್ಲಿ ರಾಮರಾಜ್ಯ ನಿರ್ಮಾಣ ಆಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು. ಪ್ರಭು ಶ್ರೀರಾಮಚಂದ್ರ ಒಬ್ಬ ರಾಜನಾಗಿದ್ದ. ಸದ್ಯ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಅಯೋಧ್ಯೆ ರಾಮಮಂದಿರ ನಿರ್ಮಾಣವಾದ ಮೇಲೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಕಡೆ ಹೆಚ್ಚು ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ ಎಂದರು.
ಧರ್ಮ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಶುದ್ಧೀಕರಣಕ್ಕೆ ಅಣಿಯಾಗಿದ್ದಾರೆ. ನಾವು ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳಬೇಕು. ಇತರರು ಉತ್ತಮ ಕಾರ್ಯ ನಿರ್ವಹಣೆಗೆ ಪ್ರೇರಣೆ ನೀಡಿದ್ರೆ ಮಾತ್ರ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ ಎಂದರು.
ಅಯೋಧ್ಯೆ ಮಂಡಲ ಪೂಜೆ ಮುಗಿಸಿ ಉಡುಪಿಗೆ ಬಂದ ಪೇಜಾವರ ಶ್ರೀಗಳು; ಆಂಜನೇಯ ಬಂದಂತಾಯ್ತು ಎಂದ ಪುತ್ತಿಗೆ ಶ್ರೀಗಳು!