Asianet Suvarna News Asianet Suvarna News

Omicron Variant: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಿಗೆ ಕ್ವಾರಂಟೈನ್‌

*  ರೂಪಾಂತರ ತಳಿ ಒಮಿಕ್ರಾನ್‌ ಹರಡುವ ಆತಂಕ ಬೇಡ
*  ಇಬ್ಬರ ವರದಿ ನೆಗೆಟಿವ್‌ ಬಂದಿದ್ದು ಆರ್‌ಟಿಪಿಸಿಆರ್‌ ರಿಪೋರ್ಟ್‌ಗೆ ವೇಟಿಂಗ್‌ 
*  ಮೂರನೇ ಅಲೆಯ ಬಗ್ಗೆ ಭೀತಿಗೊಳ್ಳದೆ ಸುರಕ್ಷತೆಯ ಕಡೆ ಗಮನ ನೀಡಿ
 

Two People Quarantine Came From South Africa to Hosapete grg
Author
Bengaluru, First Published Dec 1, 2021, 2:48 PM IST
  • Facebook
  • Twitter
  • Whatsapp

ಬಳ್ಳಾರಿ(ಡಿ.01):  ದಕ್ಷಿಣ ಆಫ್ರಿಕಾದಿಂದ(South Africa) ಬಂದಿರುವ ಹೊಸಪೇಟೆಯ ಇಬ್ಬರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ನೆಗೆಟಿವ್‌ ಬಂದಿದೆ. ಹೀಗಾಗಿ, ಕೊರೋನಾ(Coronavirus) ಸೋಂಕಿನ ಹೊಸ ರೂಪಾಂತರ ತಳಿ ಒಮಿಕ್ರಾನ್‌(Omicron) ಜಿಲ್ಲೆಯಲ್ಲಿ ಹರಡುವ ಆತಂಕ ಬೇಡ. ಸಾರ್ವಜನಿಕರು ಮೂರನೇ ಅಲೆಯ ಬಗ್ಗೆ ಭೀತಿಗೊಳ್ಳದೆ ಸುರಕ್ಷತೆಯ ಕಡೆ ಗಮನ ನೀಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಹೊಸಪೇಟೆಯವರು(Hosapete) ದಕ್ಷಿಣ ಆಫ್ರಿಕಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರು. ನ. 25ರಂದು ಅಲ್ಲಿಂದ ವಿಮಾನ(Flight) ಮೂಲಕ ಮುಂಬೈಗೆ(Mumbai) ಬಂದು ಮತ್ತೆ ಅಲ್ಲಿಂದ ನ. 26ರಂದು ಕಾರ್‌ನಲ್ಲಿ ಹೊಸಪೇಟೆಗೆ ಬಂದಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಆ ಇಬ್ಬರ ಆರೋಗ್ಯ ತಪಾಸಣೆ ನಡೆಸಲಾಯಿತು. ನೆಗೆಟಿವ್‌ ಬಂದಿದೆ. ಆರ್‌ಟಿಪಿಸಿಆರ್‌(RTPCR) ವರದಿ ಬರಬೇಕಾಗಿದೆ. ಆಫ್ರಿಕಾದಿಂದ ಬಂದ ಇಬ್ಬರು ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್‌(Quarantine) ಮಾಡಿದ್ದೇವೆ ಎಂದು ವಿವರಿಸಿದರು.

Omicron ಆತಂಕ: ಗದಗ ಜಿಲ್ಲಾದ್ಯಂತ ಹೈ ಅಲರ್ಟ್‌

ಒಮಿಕ್ರಾನ್‌ ವೈರಸ್‌ ಹರಡುವ ಕುರಿತು ವಿನಾಕಾರಣ ಭೀತಿ ಬೇಡ. ಮೂರನೇ ಅಲೆ ಬರುವ ಸಾಧ್ಯತೆ ಇರುವುದರಿಂದ ಎಲ್ಲರಿಗೂ ಸುರಕ್ಷತೆ ಕಡೆ ಗಮನ ಹರಿಸಬೇಕು. ಸಾರ್ವಜನಿಕರು ಕೊರೋನಾ ಲಸಿಕೆ(Vaccine) ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಜಾಗೃತಿ(Awareness) ಮೂಡಿಸುವ ಕೆಲಸವೂ ನಡೆದಿದೆ. ಮೊದಲ ಡೋಸ್‌ ಶೇ. 94ರಷ್ಟಾಗಿದೆ. ಆದರೆ, ಎರಡನೇ ಡೋಸ್‌ ಬರೀ ಶೇ.52ರಷ್ಟಾಗಿದೆ. ಹಳ್ಳಿಹಳ್ಳಿಗಳಲ್ಲಿ ಅರಿವು ಮೂಡಿಸುತ್ತಿದ್ದೇವೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ವೈರಸ್‌ನಿಂದ ಹೆಚ್ಚಿನ ಅಪಾಯ ಆಗದಂತೆ ತಡೆಗಟ್ಟಬಹುದಾಗಿದೆ ಎಂದರು.

ಭಾರತೀಯರ ಮೇಲೆ ಒಮಿಕ್ರೋನ್‌ ಅಪಾಯ ಕಡಿಮೆ

ಕೋವಿಡ್‌ ವೈರಸ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದ (Covid-19 New Variant Omicron) ಭಾರತೀಯರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತೀಯರು ಹೊಸ ರೂಪಾಂತರಿ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಖ್ಯಾತ ವೈರಾಣು ತಜ್ಞ ಶಾಹಿದ್‌ ಜಮೀಲ್‌ (Shahid Jameel) ಹೇಳಿದ್ದಾರೆ. ಆದರೆ ಜನರು ಜಾಗೃತರಾಗಿರಬೇಕು,ಮಾಸ್ಕ್‌ ಧರಿಸಬೇಕು ಎಂದು ಹೇಳಿದ್ದಾರೆ. 

‘ಡೆಲ್ಟಾದಿಂದ (Delta Variant) ಉಂಟಾದ 2ನೇ ಅಲೆಯ ವೇಳೆಯಲ್ಲಿ ನಾವು ಊಹಿಸಿದ್ದಕ್ಕಿಂತ ಹೆಚ್ಚಿನ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಸೆರೋ ಸಮೀಕ್ಷೆ ಅನ್ವಯ ಶೇ.67ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್‌ ವಿರುದ್ಧದ ಪ್ರತಿಕಾಯಗಳು (Antibodies) ಉತ್ಪತ್ತಿಯಾಗಿದ್ದವು. ಇವೆಲ್ಲವೂ ಲಸಿಕೆಯಿಂದ ಉತ್ಪಾದನೆಯಾದ ಪ್ರತಿಕಾಯಗಳಲ್ಲ. ಬದಲಾಗಿ ಜನರಲ್ಲಿ ಸೋಂಕು ಕಾಣಿಸಿಕೊಂಡು ಬಳಿಕ ಸ್ವಾಭಾವಿಕವಾಗಿ ಉತ್ಪತ್ತಿಯಾದ ಪ್ರತಿಕಾಯಗಳು. ಹೀಗಾಗಿ ಈ ಪ್ರತಿಕಾಯಗಳು ಒಮಿಕ್ರೋನ್‌ ಅಥವಾ ಇನ್ಯಾವುದೇ ಹೊಸ ರೂಪಾಂತರಿಯ ವಿರುದ್ಧವೂ ಹೋರಾಡುವ ಶಕ್ತಿ ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.

Omicron Variant: ಕೊರೋನಾ ಹೊಸ ತಳಿ ತಡೆಗಟ್ಟಲು ತಜ್ಞರ ಸಮಿತಿ ಶಿಫಾರಸು: ಇಲ್ಲಿದೆ ಡಿಟೇಲ್ಸ್!

ಒಮಿಕ್ರೋನ್‌ ನಿರುಪದ್ರವಿ ವೈರಸ್‌ ಇದ್ದಂತಿದೆ: ಆಸೀಸ್‌ ತಜ್ಞ

ಕ್ವೀನ್ಸ್‌ಲ್ಯಾಂಡ್‌(Queens Land): ಇಡೀ ಜಗತ್ತು ಒಮಿಕ್ರೋನ್‌ ರೂಪಾಂತರಿ ಕೊರೋನಾವೈರಸ್‌ಗೆ ಬೆಚ್ಚಿ ಕುಳಿತಿದ್ದರೆ ಆಸ್ಪ್ರೇಲಿಯಾದ(Australia) ತಜ್ಞರೊಬ್ಬರು ಈ ವೈರಸ್‌ ನಿರುಪದ್ರವಿ ಇದ್ದಂತಿದೆ ಎಂದು ಊಹಿಸಿದ್ದಾರೆ. ಅಲ್ಲದೆ, ಒಂದು ವೇಳೆ ಇದು ದೊಡ್ಡ ಪ್ರಮಾಣದಲ್ಲಿ ಹರಡಿದರೂ ಕಡಿಮೆ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದೂ ಹೇಳಿದ್ದಾರೆ. 

ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಗ್ರಿಫಿತ್‌ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಪ್ಲಾನೆಟರಿ ಹೆಲ್ತ್‌ ಅಂಡ್‌ ಫುಡ್‌ ಸೆಕ್ಯುರಿಟಿ ವಿಭಾಗದ ನಿರ್ದೇಶಕ ಹಮಿಶ್‌ ಮೆಕಲಮ್‌ ಈ ಕುರಿತು ತಾವು ನಡೆಸಿದ ಸೀಮಿತ ಅಧ್ಯಯನದ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಒಮಿಕ್ರೋನ್‌ ಅಪಾಯಕಾರಿಯಲ್ಲದ ರೂಪಾಂತರಿ ಇರಬಹುದು ಎಂದು ಊಹಿಸಿದ್ದಾರೆ. 
 

Follow Us:
Download App:
  • android
  • ios