ಮಂಡ್ಯ(ಜ.25): ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಒಂದೇ ಕುರ್ಚಿಗಾಗಿ ಅಧಿಕಾರಿಗಳಿಬ್ಬರು ಕಿತ್ತಾಟ ನಡೆಸಿದ್ದು, ನಾ ಬಿಡಲ್ಲ, ನಾ ಹೋಗಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ರಂಪಾಟ ನಡೆದಿದ್ದು, ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗಾಗಿ ಜಟಾಪಟಿ ಶುರುವಾಗಿದೆ.

ಮಂಡ್ಯ: ಹೆಂಡತಿಯ ಮೊಬೈಲ್ ಹೇಳಿದ ಗಂಡನ ಭೀಕರ ಕೊಲೆ ಕತೆ!

ವಿಕ್ರಮರಾಜೇ ಅರಸ್ ಹಾಗೂ ಕೃಷ್ಣಮೂರ್ತಿ ಎಂಬುವರ ನಡುವೆ ಕುರ್ಚಿ ವಾರ್ ನಡೆದಿದ್ದು, ಜನವರಿ 18 ರಂದು ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿದ್ದ ಕೃಷ್ಣಮೂರ್ತಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆ ಹುದ್ದೆಗೆ ವಿಕ್ರಮರಾಜೇಅರಸ್ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಸೂಚನೆ ನೀಡಿತ್ತು.

ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘಗಳ ಉಪ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್ 20 ರಂದು ಕೃಷ್ಣಮೂರ್ತಿ ಅನುಪಸ್ಥಿತಿಯಲ್ಲಿ ಸ್ವಯಂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರು 21ರಂದು ವರ್ಗಾವಣೆಗೆ ತಡೆಯಾಜ್ಞೆ ಕೋರಿ ಕೆಎಟಿ ಮೊರೆಹೋಗಿದ್ದಾರೆ.

ನಾನು ಇಲ್ಲಿಗೆ ವರ್ಗಾವಣೆಗೊಂಡು ಕೇವಲ 5 ತಿಂಗಳಾಗಿದೆ. ಕನಿಷ್ಠ 2 ವರ್ಷ ಬೇರೆ ಕಡೆ ವರ್ಗಾವಣೆ ಮಾಡುವಂತಿಲ್ಲ. ವಿಕ್ರಮರಾಜೇ ಅರಸ್ ಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಬಡ್ತಿ ನೀಡಿದ್ರೆ ಖಾಲಿ ಇರವ ಜಾಗಕ್ಕೆ ನಿಯೋಜನೆ ಮಾಡಬೇಕೆಂಬ ನಿಯಮವಿದೆ. ನಿಯಮ ಉಲ್ಲಂಘಿಸಿ ವಿಕ್ರಮ ರಾಜೇಅರಸ್‌ರನ್ನು ನನ್ನ ಸ್ಥಾನಕ್ಕೆ ನಿಯೋಜಿಸಲಾಗಿದೆ. ಹಾಗಾಗಿ ನನ್ನ ವರ್ಗಾವಣೆಗೆ ತಡೆ ನೀಡುವಂತೆ ಕೃಷ್ಣಮೂರ್ತಿ ಕೆಎಟಿ ಮೊರೆಯೋಗಿದ್ದರು.

ಬಸವನ ಪವಾಡ, ಪರೀಕ್ಷೆ ಮಾಡಿದ ಪೊಲೀಸ್‌ನನ್ನು ಬೀದಿಯಲ್ಲಿ ಅಟ್ಟಾಡಿಸಿದ ಬಸಪ್ಪ

20ರಂದು ಇದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೆಎಟಿ ಆದೇಶ ನೀಡಿದ್ದು, ಬಳಿಕ ಇಬ್ಬರು ಅಧಿಕಾರಿಗಳು ಒಂದೇ ಕಚೇರಿಗೆ ಹಾಜರಾಗುತ್ತಿದ್ದಾರೆ. ಕಚೇರಿಯಲ್ಲಿಯೇ ಹುದ್ದೆ ಬಿಟ್ಟುಕೊಡವ ವಿಚಾರದಲ್ಲಿ ಜಗಳ ನಡೆದಿದೆ.