ಮಂಡ್ಯ(ಜ.23): ಅಳುತ್ತಿದ್ದ ಕಂದಮ್ಮನ ತೊಟ್ಟಿಲು ತೂಗಿ, ಮನೆಯ ಆವರಣದಲ್ಲಿದ್ದ ಮಾಟ ಹುಡುಕಿದ ಪವಾಡ ಬಸವನನ್ನು ಪರೀಕ್ಷಿಸಲು ಹೋದ ಪೊಲೀಸ್‌ನನ್ನು ಬಸಪ್ಪ ರಸ್ತೆಯುದ್ದಕ್ಕೆ ಅಟ್ಟಾಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಯಪುರ ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಇಬ್ಬರು ಭಕ್ತರು ಬಸಪ್ಪನ ಕೋಪಕ್ಕೆ ಸಿಲುಕಿರುವ ಘಟನೆ ನಡೆದಿದೆ. ಕುಡಿದ ಬಂದು ಬಸಪ್ಪನ ಪವಾಡ ಪರೀಕ್ಷೆ ಮಾಡಲು ಬಂದ ಭಕ್ತನನ್ನು ಬಸಪ್ಪ ಕಣ್ಣೀರಾಕಿಸಿ ಕ್ಷಮೆ ಕೇಳಿಸಿದೆ.

ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಘಟನೆ‌ ನಡೆದಿದ್ದು, ಜುಟ್ಟನಹಳ್ಳಿ ಗ್ರಾಮದ ರಮೇಶ್ ಎಂಬುವರ ಮನೆಗೆ ಪಾದಪೂಜೆಗೆಂದು ಗ್ರಾಮಕ್ಕೆ ಕರೆಸಿದ ಜಯಪುರ ಬಸಪ್ಪನಿಗೆ ಛೇಡಿಸಿ ಪರೀಕ್ಷೆ ಮಾಡಲು ಹೋದ ಇಬ್ಬರು ಭಕ್ತರು ಕಷ್ಟಕ್ಕೆ ಸಿಲುಕಿದ್ದಾರೆ.

ರಾಮನಗರ ಜಿಲ್ಲೆಯ ಜಯಪುರ ಚಾಮುಂಡೇಶ್ವರಿ ಬಸಪ್ಪ ಪರೀಕ್ಷೆಗೆ ಬಂದ ಭಕ್ತರಿಬ್ಬರಿಗೆ ತಕ್ಕ ಪಾಠ ಕಲಿಸಿದೆ. ನಕಲಿ ಕೋರಿಕೆ ಇಟ್ಟು ಕೊಂಡು ಪಾದ ಕೇಳಲು ಬಂದ ಪೊಲೀಸ್ ಅಧಿಕಾರಿಯನ್ನು ಬಸಪ್ಪ ಬೀದಿಯಲ್ಲಿ ಅಟ್ಟಾಡಿಸಿದ ತಿವಿದಿದೆ. ಮದ್ಯ ಕುಡಿದು ಬಂದು ಬಸವನ ಪಾದ ಕೇಳಿ ಛೇಡಿಸಲು ಬಂದವನಿಗೆ ಅಂಗೈ ಮೇಲೆ ಬಲವಾದ ಪಾದವಿಟ್ಟು ಕಣ್ಣೀರಾಕಿಸಿದೆ.

ಕೊಂಬಿನಿಂದಲೇ ತೊಟ್ಟಿಲು ತೂಗಿ ಮಗು ಮಲಗಿಸಿದ ಬಸವ

ಬಸಪ್ಪನ ಪರೀಕ್ಷೆ ಮಾಡಲು ಹೋಗಿ ತಪ್ಪಿನ ಅರಿವಾಗಿ ಇಬ್ಬರು ಭಕ್ತರೂ ಪವಾಡ ಬಸವಪ್ಪನ ಕ್ಷೆಮೆ ಕೇಳಿದ್ದಾರೆ. ತಪ್ಪಿತಸ್ಥ ಭಕ್ತರು ಕ್ಷಮೆ ಕೇಳಿದ ಬಳಿಕ ಶಾಂತಗೊಂಡ ಜಯಪುರದ ಪವಾಡ ಬಸಪ್ಪನನ್ನು ನೋಡಿ ಗ್ರಾಮಸ್ಥರ ಅಚ್ಚರಿಗೊಳಗಾಗಿದ್ದಾರೆ.

ಈ ಹಿಂದೆ ಮಾಟವಿದ್ದ ಮನೆಯಲ್ಲಿ ಮಾಟ ಮಾಡಿರುವ ಜಾವನ್ನು ಬಸಪ್ಪ ತೋರಿಸಿಕೊಟ್ಟಿತ್ತು. ಹಾಗೆಯೇ ಮಗುವೊಂದು ಅಳುತ್ತಿದ್ದಾಗ ಕೊಂಬಿನಿಂದಲೇ ತೊಟ್ಟಿಲು ತೂಗಿದ ವಿಡಿಯೋ ಕೂಡ ವೈರಲ್ ಆಗಿತ್ತು.