ಕೊರಟಗೆರೆಯಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರದ ಎನ್ಡಿಎ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಭಾಗವಹಿಸಿ ಕೆ.ಎಂ. ಸುರೇಶ್ ಪರ ಮತಯಾಚಿಸಿದರು. ಈ ವೇಳೆ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಹಾಗೂ ಸಿರಾ-ಬೈರೇನಹಳ್ಳಿ ಹೆದ್ದಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೊರಟಗೆರೆ (ಅ.17): ಪದವಿಧರರು ಆಧಾರ ಸ್ತಂಭ, ದೇಶದಲ್ಲಿ ಬದಲಾವಣೆ ತರುವ ಶಕ್ತಿ ಶಿಕ್ಷಕರ ಕೈಯಲ್ಲಿ ಇದೆ. ನಮ್ಮ ಎನ್ಡಿಎ ಕಾರ್ಯಕರ್ತರು ಕೆ.ಎಂ ಸುರೇಶ್ ಅವರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ
ಪಟ್ಟಣದ ಸಾದರ ಸಮುದಾಯ ಭವನದಲ್ಲಿ ಎನ್ಡಿಎ ವತಿಯಿಂದ ಏರ್ಪಡಿಲಾಗಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿಯನ್ನ ೨೦೨೭ ಡಿಸೆಂಬರ್ಗೆ ಮುಗಿಸಿ ರೈಲು ಸಂಚಾರ ಮಾಡಲಿದೆ. ಇದರ ಜೊತೆಗೆ ಈಗ ಒಂದು ಲೈನ್ ಇದೆ. ಇದರ ಜೊತೆಗೆ ಇನ್ನೊಂದು ಲೈನ್ ಮಾಡಲು ಸರ್ವೆ ಮಾಡಲು ತಯಾರಿ ಮಾಡಲಾಗಿದೆ. ಬೆಂಗಳೂರು ತುಮಕೂರು ನಾಲ್ಕು ಪಥದ ರೈಲ್ವೆ ಕಾಮಗಾರಿ ಆಗಲಿದೆ. ಸಿರಾ ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ೭೫ ಕಿ.ಲೋ ಕಾಮಗಾರಿಗೆ ೮೫೦ ಕೋಟಿ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಶೀಘ್ರ ಪ್ರಾರಂಭವಾಗಿಲಿದೆ ಎಂದು ಅವರು ಹೇಳಿದರು.
ನೂತನ ಜಿಲ್ಲೆಗಳಾಗಲಿವೆಯೇ ಮಧುಗಿರಿ, ತಿಪಟೂರು?
ತುಮಕೂರು ಜಿಲ್ಲೆ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿದ್ದು, ಮಧುಗಿರಿ, ತಿಪಟೂರು ಏಕೆ ಜಿಲ್ಲೆ ಮಾಡಬಾರದು ಎಂದು ಚಿಂತನೆ ನಡೆದಿದೆ. ರಾಜ್ಯದಲ್ಲಿ ಭೀಕರ ಬರಗಾಲದ ಬಗ್ಗೆ ಚಿಂತನೆ ಮಾಡುತ್ತಿಲ್ಲ. ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ದ ಗುಡುಗಿದರು.
ಜಿಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪಿ.ಎನ್.ಕೃಷ್ಣಮೂರ್ತಿ, ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಜೆಡಿಎಸ್ ಅಧ್ಯಕ್ಷ ಕಾಮರಾಜು, ಯುವ ಅಧ್ಯಕ್ಷ ವೆಂಕಟೇಶ್, ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ನಿಕಟ ಪೂರ್ವ ಅಧ್ಯಕ್ಷ ಡಾ. ದರ್ಶನ್ ಕೆ.ಎಲ್. ಮುಖಂಡರಾದ ಹುಚ್ಚಯ್ಯ, ನರಸಿಂಹರಾಜು, ಸಿದ್ದಗಂಗಪ್ಪ, ಮಾವತ್ತೂರು ಮಂಜು, ವೀರಕ್ಯಾತರಾಯ, ಪವನ್ಕುಮಾರ್, ಕಾಕಿಮಲ್ಲಯ್ಯ, ಲಕ್ಷ್ಮೀಶ್, ಲಕ್ಷ್ಮಣ್, ಸ್ವಾಮಿ, ದೊಡ್ಡಯ್ಯ, ನಾಗರಾಜು, ಸೇರಿದಂತೆ ಎನ್ಡಿಎ ಕಾರ್ಯಕರ್ತರು ಹಾಜರಿದ್ದರು.


