ಮಡಿಕೇರಿ(ಜ.04): ವಿರಾಜಪೇಟೆಯ ದೇವರಪುರ ಸಮೀಪ ಹೆಬ್ಬಾಲೆ ಗ್ರಾಮದ ಪರಿಶಿಷ್ಟಪಂಗಡದ ಪಣಿಯರವರ ಎಂ.ಮೋನಿಕಾ 6ನೇ ತರಗತಿ ವಿದ್ಯಾರ್ಥಿನಿ. ಎತ್ತರ ಜಿಗಿತದಲ್ಲಿ ಜಿಲ್ಲೆ,ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮೋನಿಕಾ ಇದೇ ಜ.14ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

ವಿರಾಜಪೇಟೆ ಸಮೀಪ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪಿ.ಎಂ.ಮೋನಿಕಾ ಕಳೆದ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜರುಗಿದ 2018-19 ನೇ ಸಾಲಿನ ರಾಷ್ಟ್ರಮಟ್ಟದ ಏಕಲವ್ಯ ವಸತಿ ಶಾಲೆಗಳ ಕ್ರೀಡಾಕೂಟದಲ್ಲಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದು, ಇದೀಗ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾಳೆ.

ಗಾಂಧಿ ಕನಸಿನಂತೆ ಪೌರತ್ವ ತಿದ್ದುಪಡಿ ಕಾಯ್ದೆ: ನಳಿನ್

ಹೆಬ್ಬಾಲೆ ಗ್ರಾಮದ ಪಿ.ಎಚ್‌.ಮುತ್ತ-ಕಾಳಿ ದಂಪತಿಯ 9ನೇ ಪುತ್ರಿ ಮೋನಿಕಾ ಕರ್ನಾಟಕ ವಸತಿ ಸಂಸ್ಥೆಗಳ ಸಂಘ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಬಾಳುಗೋಡು ಏಕಲವ್ಯ ಶಾಲೆಯ ದೈಹಿಕ ಶಿಕ್ಷಕರಾದ ಪಿ.ವಿ.ಸುರೇಶ್‌, ಪ್ರಾಂಶುಪಾಲರಾದ ಯೋಗ ನರಸಿಂಹ ಸ್ವಾಮಿ, ಶಿಕ್ಷಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ಸಹಪಾಠಿಗಳ ಉತ್ತೇಜನದಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.

ಚಿರತೆ ಶೋಧ: ನಾಗರಹೊಳೆ ಪರಿಣತರ ತಂಡ ಮಂಗಳೂರಿಗೆ