ಗಾಂಧಿ ಕನಸಿನಂತೆ ಪೌರತ್ವ ತಿದ್ದುಪಡಿ ಕಾಯ್ದೆ: ನಳಿನ್
ಗಾಂಧೀಜಿ ಅವರ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ಬೇರೆ ದೇಶಗಳ ಅಲ್ಪ ಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧಿ ಕನಸು ಎಂದಿದ್ದಾರೆ.
ಕೋಲಾರ(ಜ.04): ಗಾಂಧೀಜಿ ಅವರ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ಬೇರೆ ದೇಶಗಳ ಅಲ್ಪ ಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧಿ ಕನಸು ಎಂದಿದ್ದಾರೆ.
ಕೋಲಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗಾಂಧಿ ಕನಸು. ಬೇರೆ ದೇಶಗಳ ಅಲ್ಪ ಸಂಖ್ಯಾತರಿಗೆ ಆಶ್ರಯ ಕೊಡುವುದು ಗಾಂಧಿ ಕನಸು. ಅದರಂತೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ತಂದಿದ್ದಾರೆ. ಸುಮಾರು 3 ಕೋಟಿ ಜನರಿಗೆ ಪೌರತ್ವ ಸಿಗಲಿದೆ ಎಂದಿದ್ದಾರೆ.
ಚಿರತೆ ಶೋಧ: ನಾಗರಹೊಳೆ ಪರಿಣತರ ತಂಡ ಮಂಗಳೂರಿಗೆ
ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿ ರಾಷ್ಟ್ರ ವಿರೋಧ ನೀತಿ ಅನುಸರಿಸುತ್ತಿದೆ. ಅಪಪ್ರಚಾರ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಪೌರತ್ವ ಇಲ್ಲದವರಿಗೆ ಪೌರತ್ವ ಕೊಟ್ಟು ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಹೀನ ಕೆಲಸಕ್ಕೆ ಕೈ ಹಾಕಿದೆ,ಬೆಂಕಿ ಹಾಕುವ ಕೆಲಸ ಮಾಡುತ್ತಿದೆ. ಇಟಲಿಯಿಂದ ಬಂದ ಸೋನಿಯಾಗಾಂಧಿ ಅವರಿಗೆ ಪೌರತ್ವ ಸಿಕ್ಕಿದೆ. ಬುದ್ದಿ ಜೀವಿಗಳು ಅರ್ಬನ್ ನಕ್ಸಲ್ ರಿಂದ ಈ ರೀತಿ ಅಪ ಪ್ರಚಾರ ಆಗಿದೆ. ಕಾಂಗ್ರೆಸ್ ನಾಯಕರು ಮಾಡಿದ ಕಾಯ್ದೆಯನ್ನೆ ನಾವು ಮಾಡುತ್ತಿರುವುದು. ಹಾಗಾದ್ರೆ ಅವರೆಲ್ಲಾ ಸಂವಿಧಾನ ವಿರೋಧಿಗಳೇ ಎಂದು ಪ್ರಶ್ನಿಸಿದ್ದಾರೆ.
ಕಪಿಲಾ ನದಿಯಲ್ಲಿ ತೇಲುತ್ತಿತ್ತು ನವಜಾತ ಶಿಶುವಿನ ಮೃತದೇಹ..!
ಮೋದಿ ಸೋಲಿಸಿ ಎಂದು ಎಚ್.ಎಸ್ ದೊರೆಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಎಷ್ಟೆ ಕೂಗಾಡಿದ್ರು ಮೋದಿ ಅವರ ವರ್ಚಸ್ಸು ಕುಗ್ಗಿಸಲು ಸಾಧ್ಯವಿಲ್ಲ. ಸುಳ್ಳು ಮತ್ತು ಅಪಪ್ರಚಾರ ಮಾಡಿದವರು ರಾಷ್ಟ್ರ ವಿರೋಧಿಗಳು ಎಂದು ಗಾಂಧಿ ಹೇಳಿದ್ದಾರೆ ಎಂಬುದನ್ನು ನಳಿನ್ ಪ್ರಸ್ತಾಪಿಸಿದ್ದಾರೆ.