ಪ್ರವಾಸದಿಂದ ನಿಜಕ್ಕೂ ದೇಹ, ಮನಸ್ಸಿಗೆ ದೀರ್ಘಾಯುಷ್ಯ

ತಾಲೂಕಿನ ಇತಿಹಾಸ ಪ್ರಸಿದ್ಧ ಹುತ್ರಿದುರ್ಗ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು,

Travel indeed gives longevity to the body and mind snr

  ಕುಣಿಗಲ್ : ತಾಲೂಕಿನ ಇತಿಹಾಸ ಪ್ರಸಿದ್ಧ ಹುತ್ರಿದುರ್ಗ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು,

ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಮಾತನಾಡಿ ಪ್ರವಾಸದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ ಬೆಟ್ಟ ಹತ್ತುವುದರಿಂದ ದೇಹ ಉಲ್ಲಾಸಗೊಳ್ಳುತ್ತದೆ ಈ ಪ್ರವಾಸ ನಿಜವಾಗಿಯೂ ದೇಹಕ್ಕೆ ಮನಸ್ಸಿಗೆ ದೀರ್ಘಾಯುಷ್ಯ ತಂದುಕೊಡಲಿದೆ ಎಂದರು,

ವಿದ್ಯಾರ್ಥಿಗಳ ಜೊತೆ ಶಾಸಕರು ಸೇರಿದಂತೆ ಹಲವಾರು ಅಧಿಕಾರಿಗಳು ಬೆಟ್ಟ ಹತ್ತುವ ಮುಖಾಂತರ ಬೆಟ್ಟದ ಬಗ್ಗೆ ಇತಿಹಾಸ ಹಾಗೂ ಹಲವಾರು ಸಾಧನೆಯ ಕುರುಹುಗಳನ್ನು ವಿದ್ಯಾರ್ಥಿಗೆ ತಿಳಿಸುವ ಮುಖಾಂತರ ವಿಶ್ವ ಪರಿಸರ ದಿನವನ್ನು ಸಾರ್ಥಕವಾಗಿ ಆಚರಿಸಿದರು,

ಹುತ್ರಿದುರ್ಗ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆಂಪಯ್ಯ ಮಾತನಾಡಿ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಿಂದ ಉತ್ತಮ ಅನುದಾನ ನೀಡಿ ನಮ್ಮ ಸಂಘದ ಕಾರ್ಯ ಚಟುವಟಿಕೆಗಳಿಗೆ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ರಾಜಕಾರಣಿಗಳಿಗೂ ಹಾಗೂ ಅಧಿಕಾರಿಗಳಿಗೂ ಸಂಘದ ವತಿಯಿಂದ ಅಭಿನಂದಿಸುತ್ತೇವೆ ಎಂದರು,

ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಹುತ್ರಿದುರ್ಗಾ ಸಂರಕ್ಷಣಾ ಸಮಿತಿಯ ಪ್ರಕಾಶ್ ಮೂರ್ತಿ ಮಾತನಾಡಿ ಹುತ್ರಿದುರ್ಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾದಂತ ಹಲವಾರು ಕುರುಹಗಳು ಹೊಂದಿದೆ ಇಲ್ಲಿ ಹಲವಾರು ಶತಶತಮಾನಗಳ ಸಂಶೋಧನೆಗೆ ಒಳಪಡುವಂತಹ ವಿಚಾರಗಳಿವೆ ಈ ಹುತ್ರಿದುರ್ಗ ಬೆಟ್ಟದ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದರು,

ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ಮಂಗಳ ಭಟ್ ಜಿಲ್ಲೆಯಲ್ಲಿ 26 ಪ್ರಮುಖ ಸ್ಥಳಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿ ಪುರಾತತ್ವ ಇಲಾಖೆಗೆ ಸೇರಿಸಲಾಗಿದೆ ಕೇಂದ್ರ ಪುರಾತತ್ವ ಇಲಾಖೆ 33 ಸ್ಥಳಗಳನ್ನು ಗುರುತಿಸಿದೆ.

ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಈಗಾಗಲೇ ಹಲವಾರು ಬಾರಿ ಆಚರಿಸುವ ಜೊತೆಗೆ ವಿಶೇಷ ಸಂದೇಶವನ್ನು ಜನತೆಗೆ ನೀಡುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಮಾಡುತ್ತಿದ್ದು ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ ಎಂಬ ಧ್ಯೇಯದಿಂದ ಈ ಬಾರಿ ಕಾರ್ಯನಿರ್ವಹಿಸುತ್ತಿದೆ ಪ್ರವಾಸಿ ತಾಣಗಳಲ್ಲಿ ಈ ಬಾರಿ ಹೆಚ್ಚು ಗಿಡಗಳನ್ನು ನೆಡುವ ಮುಖಾಂತರ ಉತ್ತಮ ಸಾಧನೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ ನೀವು ಸ್ವಚ್ಛತೆಯನ್ನು ಕಾಪಾಡಿ ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಏರ್ಪಡಿಸಿದ್ದ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಶ್ವನಾಥ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಹಾಗೂ ಹುತ್ರಿದುರ್ಗ ಸಂರಕ್ಷಣ ಸಮಿತಿಯ ಸದಸ್ಯರು ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಸಿದ್ಧ ಪ್ರವಾಸಿ ತಾಣ

ಭಾರತದ ನೈಋತ್ಯ ಪ್ರದೇಶದಲ್ಲಿ ನೆಲೆಸಿರುವ ಕೇರಳವನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ. ಇದು ಹಚ್ಚ ಹಸಿರಿನ ಭೂದೃಶ್ಯಗಳು, ಹಿನ್ನೀರು ಮತ್ತು ರೋಮಾಂಚಕ ಸಾಹಸಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಕೇರಳಕ್ಕೆ ಪ್ರವಾಸ ಎಂದ ತಕ್ಷಣ ಬರೀ ಮುನ್ನಾರ್‌, ಅತಿರಪಳ್ಳಿ ಫಾಲ್ಸ್ ಎಂದೇ ಅಂದುಕೊಳ್ಳಬೇಕಾಗಿಲ್ಲ. ಇದಲ್ಲದೆ, ಎತ್ತರದ ಶಿಖರಗಳಿಂದ ಹಿಡಿದು ದಟ್ಟವಾದ ಕಾಡುಗಳ ವರೆಗೆ, ಮರೆಯಲಾಗದ ಸಾಹಸದ ಭರವಸೆ ನೀಡುವ ಕೇರಳದ ಅಗ್ರ ಐದು ಪ್ರವಾಸಿ ತಾಣಗಳು ಇಲ್ಲಿವೆ.

1. ಮುನ್ನಾರ್
ಪಶ್ಚಿಮ ಘಟ್ಟಗಳಲ್ಲಿರುವ ಮುನ್ನಾರ್, ಚಾರಣ ಪ್ರಿಯರಿಗೆ ಸ್ವರ್ಗವಾಗಿದೆ. ಮಂಜಿನಿಂದ ಆವೃತವಾಗಿರುವ ಇಲ್ಲಿನ ವಿಶಾಲವಾದ ಚಹಾ ತೋಟಗಳು, ಬೆಟ್ಟಗಳು, ಪರ್ವತಗಳು ಟ್ರಕ್ಕಿಂಗ್ ಅನುಭವವನ್ನು ಮೆಮೊರೆಬಲ್ ಆಗಿಸುತ್ತದೆ. ಮುನ್ನಾರ್‌ನಲ್ಲಿರುವ ಕೆಲವು ಜನಪ್ರಿಯ ಟ್ರೆಕ್ಕಿಂಗ್ ಟ್ರೇಲ್‌ಗಳೆಂದರೆ ಅನಮುಡಿ ಶಿಖರ, ಮೀಸಪುಲಿಮಲ ಮತ್ತು ಚೋಕ್ರಮುಡಿ. ಪಶ್ಚಿಮ ಘಟ್ಟಗಳ ಸುಂದರವಾದ (Beautiful) ಸೊಬಗು, ಹಚ್ಚ ಹಸಿರಾದ ಪರ್ವತ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

2. ವಯನಾಡ್
ವಯನಾಡ್ ತನ್ನ ದಟ್ಟವಾದ ಕಾಡುಗಳು (Forest) ಮತ್ತು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ, ಇದು ಸಾಹಸ ಪ್ರಿಯರಿಗೆ ಸ್ವರ್ಗವಾಗಿದೆ. ಪ್ರವಾಸಿಗರು  ಇಲ್ಲಿ ರೋಮಾಂಚಕ ಜಂಗಲ್ ಸಫಾರಿಗಳನ್ನು ಮಾಡಬಹುದು, ಗುಪ್ತ ಗುಹೆಗಳನ್ನು ಅನ್ವೇಷಿಸಬಹುದು ಮತ್ತು ದಟ್ಟವಾದ ಕಾಡುಗಳ ಮೂಲಕ ಚಾರಣ (Trekking) ಮಾಡಬಹುದು. ಚೆಂಬ್ರಾ ಶಿಖರವು ಅಡ್ವೆಂಚರ್ ಇಷ್ಟಪಡುವವರಿಗೆ ಉತ್ತಮ ತಾಣವಾಗಿದೆ.

3. ವಾಗಮೋನ್ 
ಕೇರಳದಲ್ಲಿ ಹೆಚ್ಚು ಪ್ರಸಿದ್ಧವಾಗಿಲ್ಲದ ಸ್ಥಳ ವಾಗಮೋನ್. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸ್ಥಳದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಹಸ ಉತ್ಸಾಹಿಗಳಲ್ಲಿ, ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಅಭಿಮಾನಿಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳು, ರೋಲಿಂಗ್ ಬೆಟ್ಟಗಳು ಮತ್ತು ಅನುಕೂಲಕರವಾದ ಗಾಳಿಯ ಪರಿಸ್ಥಿತಿಗಳು ವಾಗಮೋನ್‌ನ್ನು ಪ್ಯಾರಾಗ್ಲೈಡಿಂಗ್‌ಗೆ ಸೂಕ್ತವಾದ ತಾಣವನ್ನಾಗಿ ಮಾಡುತ್ತದೆ. 

4. ತೇಕ್ಕಡಿ
ತೇಕ್ಕಡಿ, ವನ್ಯಜೀವಿಗಳನ್ನು ಇಷ್ಟಪಡುವವರು ಭೇಟಿ ನೀಡಲೇಬೇಕಾದ ತಾಣವಾಗಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯವು ದಟ್ಟವಾದ ಕಾಡುಗಳು ಮತ್ತು ಸುಂದರವಾದ ಸರೋವರಗಳ ನಡುವೆ ನೆಲೆಸಿದೆ. ಜಂಗಲ್ ಸಫಾರಿಗಳು, ಬಿದಿರಿನ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್‌ನಂತಹ ಅತ್ಯಾಕರ್ಷಕ ಚಟುವಟಿಕೆಗಳಿಗೆ ಅವಕಾಶ ಒದಗಿಸುತ್ತದೆ. ಆನೆಗಳು, ಹುಲಿಗಳು ಮತ್ತು ಹಲವಾರು ಇತರ ಪ್ರಾಣಿಗಳನ್ನು ಇಲ್ಲಿ ನೋಡಬಹುದು.

ದೇವರ ನಾಡಿನಲ್ಲೊಂದು ಸುಂದರ ಬುಡಕಟ್ಟು ಗ್ರಾಮ, ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

5. ಅಲೆಪ್ಪಿ
ಕೇರಳದ ಹಿನ್ನೀರಿನ ಈ ಪ್ರದೇಶವು ಪ್ರಶಾಂತವಾದ ಹೌಸ್‌ಬೋಟ್ ವಿಹಾರಕ್ಕೆ ಪ್ರಸಿದ್ಧವಾಗಿದೆ, ಅಲೆಪ್ಪಿ ರೋಮಾಂಚಕ ಕಯಾಕಿಂಗ್ ಸಾಹಸಗಳನ್ನು ಮಾಡಲು ಸಹ ಅವಕಾಶ ಒದಗಿಸುತ್ತದೆ. ಶಾಂತವಾದ ಹಿನ್ನೀರು, ಅಂಕುಡೊಂಕಾದ ಕಾಲುವೆಗಳು ಮತ್ತು ಸೊಂಪಾದ ಗದ್ದೆಗಳ ಮೂಲಕ ಪ್ರಯಾಣಿಸಬಹುದು. 

ನೀವು ದಿನನಿತ್ಯದ ರೊಟೀನ್ ಜೀವನದಿಂದ ವಿಶ್ರಾಂತಿ ಬಯಸುತ್ತಿದ್ದಲ್ಲಿ ಕೇರಳದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಗಮ್ಯಸ್ಥಾನಗಳು ಸಾಹಸಕ್ರೀಡೆಗಳಿಗೆ ಅವಕಾಶ ನೀಡುವುದರ ಜೊತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಸುಂದರ ಪರಿಸದರಲ್ಲಿ ಮನಸ್ಸು ಸಹ ಉಲ್ಲಸಿತಗೊಳ್ಳುತ್ತದೆ. ಆದರೆ ಈ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ. 

Latest Videos
Follow Us:
Download App:
  • android
  • ios