Asianet Suvarna News Asianet Suvarna News

ಪ್ರವಾಸಕ್ಕೆ ತೆರಳುತ್ತಿದ್ದ ಬಸ್‌ ಉರುಳಿ 12 ಮಂದಿಗೆ ಗಾಯ

ಅಧ್ಯಯನ ಪ್ರವಾಸಕ್ಕೆ ತೆರೆಳುತ್ತಿದ್ದ ಖಾಸಗಿ ಬಸ್‌ ಉರುಳಿ 12 ಮಂದಿ ಗಾಯಗೊಂಡಿದ್ದಾರೆ. ರೇಷ್ಮೆ ಬೆಳೆ ಅಧ್ಯಯನ ಪ್ರವಾಸಕ್ಕೆಂದು ಶ್ರೀರಂಗಪಟ್ಟಣ ತಾಲೂಕಿನಿಂದ ಸುಮಾರು 50 ಮಂದಿ ತಲಘಟ್ಟಪುರ, ಕಿರಣಗೆರೆ, ಕೋಲಾರ ಹಾಗೂ ಕೈವಾರಕ್ಕೆ ಶ್ರೀ ಪಂಚಲಿಂಗೇಶ್ವರ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದರು.

tourist bus accident in mandya 12 injured
Author
Bangalore, First Published Jan 10, 2020, 10:18 AM IST

ಮಂಡ್ಯ(ಜ.10): ಅಧ್ಯಯನ ಪ್ರವಾಸಕ್ಕೆ ತೆರೆಳುತ್ತಿದ್ದ ಖಾಸಗಿ ಬಸ್‌ ಉರುಳಿ 12 ಮಂದಿ ಗಾಯಗೊಂಡಿರುವ ಘಟನೆ ಹಲಗೂರು ರಸ್ತೆಯ ಮುಡೀನಹಳ್ಳಿ-ಹಾಗಲಹಳ್ಳಿ ಮಧ್ಯೆ ಗುರುವಾರ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕು ಬಾಬುರಾಯನಕೊಪ್ಪಲು ರೇಷ್ಮೆ ವಿಸ್ತರಣಾಧಿಕಾರಿ ಜಯರಾಮು, ರೇಷ್ಮೆ ನಿರೀಕ್ಷಕ ಜಯರಾಮು, ಶ್ರೀರಂಗಪಟ್ಟಣದ ರಕ್ಷಿತ್‌, ಚಿಕ್ಕಹಾರೋಹಳ್ಳಿಯ ಬಾಲಕೃಷ್ಣ, ಶಂಭುಗೌಡ, ಗರಕಹಳ್ಳಿಯ ವೆಂಕಟೇಶ್‌, ಗೋಪಾಲ್, ಚೊಟ್ಟನಹಳ್ಳಿಯ ಮೂಡಲಗಿರಿಗೌಡ, ಮಲ್ಲೇನಹಳ್ಳಿಯ ಸಂತೋಷ್‌, ವೆಂಕಟೇಶ್‌ ಹಾಗೂ ಚಂದಗಾಲು ಗ್ರಾಮದ ಶ್ರೀಕಾಂತ್‌ ಗಾಯಗೊಂಡವರು.

ಅಕ್ರಮ ಖಾತೆ ಸಕ್ರಮ ಮಾಡಿಕೊಡದ್ದಕ್ಕೆ ಪುರಸಭೆ ಸಿಬ್ಬಂದಿ ಹತ್ಯೆಗೆ ಯತ್ನ...!

ರೇಷ್ಮೆ ಬೆಳೆ ಅಧ್ಯಯನ ಪ್ರವಾಸಕ್ಕೆಂದು ಶ್ರೀರಂಗಪಟ್ಟಣ ತಾಲೂಕಿನಿಂದ ಸುಮಾರು 50 ಮಂದಿ ತಲಘಟ್ಟಪುರ, ಕಿರಣಗೆರೆ, ಕೋಲಾರ ಹಾಗೂ ಕೈವಾರಕ್ಕೆ ಶ್ರೀ ಪಂಚಲಿಂಗೇಶ್ವರ ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದರು.

ಪ್ರವಾಸಕ್ಕೆ ಆಗಮಿಸಿದ್ದ ಬಸ್ ಅಪಘಾತ : ವಿದ್ಯಾರ್ಥಿ ಸಾವು, 12 ಜನರು ಗಂಭೀರ

ಭಾರತೀನಗರ ಸಮೀಪದ ಹನುಮಂತನಗರದಲ್ಲಿರುವ ಆತ್ಮಲಿಂಗೇಶ್ವರಸ್ವಾಮಿ ದರ್ಶನ ಪಡೆದು ಹಲಗೂರು ರಸ್ತೆ ಮೂಲಕ ತೆರಳುತ್ತಿದ್ದಾಗ ಮುಡೀನಹಳ್ಳಿ- ಹಾಗಲಹಳ್ಳಿ ಮಧ್ಯೆ ಕೇಬಲ್ ಹಾಕಲು ಗುಂಡಿ ತೆಗೆಯಲಾಗಿತ್ತು. ಇದನ್ನು ಗಮನಿಸದ ಬಸ್‌ ಚಾಲಕ ಗುಂಡಿಯ ಮೇಲೆ ಬಸ್‌ ಚಲಾಯಿಸಿದಾಗ ರಸ್ತೆ ಬದಿಗೆ ಉರುಳಿಬಿದ್ದಿದೆ.ಈ ಘಟನೆಯಿಂದಾಗಿ 12 ಮಂದಿ ಗಾಯಗೊಂಡಿದೆ. ಉಳಿದವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಗಾಯಾಳುಗಳಿಗೆ ಚಂದೂಪುರ ಹಾಗೂ ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಕ್ಕೆಲುಬು’ ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಕ್ರಮ

Follow Us:
Download App:
  • android
  • ios