ಮಂಡ್ಯ(ಜ.10): ಅಕ್ರಮ ಖಾತೆ ಸಕ್ರಮ ಮಾಡಿಕೊಡದ ಹಿನ್ನೆಲೆ ಪುರಸಭೆ ಸಿಬ್ಬಂದಿ ಹತ್ಯೆಗೆ ಯತ್ನಿಸಲಾಗಿದೆ. ಪುರಸಭೆ ಒತ್ತುವರಿ ಜಾಗವನ್ನ ತನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಒತ್ತಾಯ ಮಾಡಿದ್ದು, ಸಿಬ್ಬಂದಿ ನಿರಾಕರಿಸಿದಾಗ ವಾಹನ ಡಿಕ್ಕಿ ಮಾಡಿ ಹತ್ಯೆಗೆ ಯತ್ನಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಘಟನೆ ನಡೆದಿದ್ದು, ಮಾಜಿ ಪುರಸಭಾ ಸದಸ್ಯೆ ಪತಿ ಹತ್ಯೆಗೆ ಪ್ರಯತ್ನಿಸಿದ್ದಾನೆ. ಸ್ಕೂಟರ್‌ನಿಂದ ಡಿಕ್ಕಿ ಹೊಡೆದು ಹತ್ಯೆಗೆ ಪ್ರಯತ್ನಿಸಲಾಗಿದ್ದು, ಅದೃಷ್ಟವಶಾತ್ ನೌಕರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀರಂಗಪಟ್ಟಣ ಪುರಸಭೆ ರೆವೆನ್ಯೂ ಅಧಿಕಾರಿ ರಾಜು ಹತ್ಯೆಯಿಂದ ಪಾರಾದ ನೌಕರ.

ನಾಯಿಗೆ ಪೆಟ್ಟು: ಆಕ್ಷೇಪಿಸಿದವನ ಕೈ ಕಟ್‌..!

ಕಾಲಿನ ಮೇಲೆ ಸ್ಕೂಟರ್ ಚಕ್ರ ಹರಿದು ನೌಕರರನ‌ ಕಾಲಿಗೆ ಪೆಟ್ಟು ಬಿದ್ದಿದ್ದು, ಶ್ರೀರಂಗಪಟ್ಟಣ ಪುರಸಭೆ ಮಾಜಿ ಸದಸ್ಯೆ ಪದ್ಮಮ್ಮ ಪತಿ ಭಾರತೀಸುತ ಸಿದ್ದೇಗೌಡ ಎಂಬುವರಿಂದ ಹತ್ಯೆ ಯತ್ನ ನಡೆದಿದೆ. ನೌಕರನಿಗೆ ಡಿಕ್ಕಿ ಹೊಡೆದು ಭಾರತೀಸುತ ಪರಾರಿಯಾಗಿದ್ದಾನೆ.

ಕಾಲಿಗೆ ಪೆಟ್ಟಾಗಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ನೌಕರನಿಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಬಂದ ಪುರಸಭಾ ಮುಖ್ಯಾಧಿಕಾರಿ ನೌಕರನಿಗೆ ಸಾಂತ್ವನ ಹೇಳಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಗೆ ಯತ್ನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸರ್ಕಾರಿ ನೌಕರರಿಗೆ ಭದ್ರತೆ ಕೊಡಲು ಒತ್ತಾಯಿಸಲಾಗಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಆಟೋ: ಮೂವರು ಸ್ಥಳದಲ್ಲೇ ಸಾವು