Asianet Suvarna News Asianet Suvarna News

ಪ್ರವಾಸಕ್ಕೆ ಆಗಮಿಸಿದ್ದ ಬಸ್ ಅಪಘಾತ : ವಿದ್ಯಾರ್ಥಿ ಸಾವು, 12 ಜನರು ಗಂಭೀರ

ಪ್ರವಾಸಕ್ಕೆ ಆಗಮಿಸಿದ್ದ ಶಾಲಾ ಬಸ್ ಅಪಘಾತಕ್ಕೆ ಈಡಾಗಿದ್ದು, ಈ ವೇಳೆ ಓರ್ವ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. 12 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 

1 Killed Many Injured in School Bus Accident in Uttara Kannada
Author
Bengaluru, First Published Jan 4, 2020, 10:11 AM IST
  • Facebook
  • Twitter
  • Whatsapp

ಶಿವಮೊಗ್ಗ [ಜ.04]:  ಆಂಧ್ರಪ್ರದೇಶದಿಂದ  ಪ್ರವಾಸಕ್ಕೆ  ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳ ಬಸ್  ಕಂದಕಕ್ಕೆ ಉರುಳಿ ಬಿದ್ದು ಒಬ್ಬ ವಿದ್ಯಾರ್ಥಿ‌ ಮೃತಪಟ್ಟ ಘಟನೆ ಗೇರುಸೊಪ್ಪ ಸಮೀಪ ನಡೆದಿದೆ. 

ಉತ್ತರ ಕನ್ನಡ ಜಿಲ್ಲೆ ಗೇರುಸೊಪ್ಪ ಬಳಿ ಶುಕ್ರವಾರ ರಾತ್ರಿ ಅಪಘಾತವಾಗಿದ್ದು, ಭಾಷಾ ಫಕ್ರುದ್ದಿನ್ [14] ಎಂಬ ವಿದ್ಯಾರ್ಥಿ ಸ್ಥಳದ್ಲೇ ಸಾವಿಗೀಡಾಗಿದ್ದು, 12 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

 ಆಂಧ್ರಪ್ರದೇಶದ ಕದ್ರಿ ಅನಂತಪುರ ಜಿಲ್ಲೆಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಸಿಗಂದೂರು, ಜೋಗ, ಮುರ್ಡೇಶ್ವರ ಸೇರಿದಂತೆ ವಿವಿಧ ಪ್ರವಾಸಿ ತಾಣ ವೀಕ್ಷಿಸಲು ಬಸ್ ಮೂಲಕ ಆಗಮಿಸಿದ್ದರು. ಒಟ್ಟು 44ವಿದ್ಯಾರ್ಥಿಗಳು, 9 ಶಿಕ್ಷಕರು 4 ಅಡುಗೆ ಸಿಬ್ಬಂದಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. 

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಮಣೆಪಾಲ, ಉಡುಪಿ ಸೇರಿದಂತೆ ವಿವಿಧ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸಣ್ಣ ಪುಟ್ಟ ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಗಾಯಗೊಂಡ ಬಹುತೇಕರು ಆಂಧ್ರ ಹಾಗೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. 

ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !...

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ  ಗಾಯಾಳುಗಳನ್ನು ರಕ್ಷಿಸಿ,  6 ಕ್ಕೂ ಹೆಚ್ಚು ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.    

ಘಟನಾ ಸ್ಥಳಕ್ಕೆ ತಹಸೀಲ್ದಾರ್ ವಿವೇಕ ಶೇಣ್ವಿ, ಎ.ಎಸ್.ಪಿ ನಿಖಿತಾ ಬುಳ್ಳಾವರ ಭೇಟಿ ನೀಡಿದ್ದಾರೆ. ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಅಲ್ಲದೇ ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿ ಮಾರುತಿ ಗುರೂಜಿ ಭೇಟಿ ನೀಡಿದ್ದಾರೆ. 

Follow Us:
Download App:
  • android
  • ios