ನಾಗರಹೊಳೆ: ಕಾಡಂಚಿನ ಜಮೀನಿನಲ್ಲಿ ಹುಲಿಹೆಜ್ಜೆ ಪತ್ತೆ; ಗ್ರಾಮಸ್ಥರಲ್ಲಿ ಆತಂಕ!
ನಾಗರಹೊಳೆ ಅರಣ್ಯದಂಚಿನ ಜಮೀನಿಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಲು ಭಯಭೀತರಾಗಿದ್ದಾರೆ.
ನಾಗರಹೊಳೆ (ಜು.13) ನಾಗರಹೊಳೆ ಅರಣ್ಯದಂಚಿನ ಜಮೀನಿಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಲು ಭಯಭೀತರಾಗಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು, ಮುದಗನೂರು, ಕೊಳವಿಗೆ ಗ್ರಾಮದ ಮುಸುಕಿನ ಜೋಳದ ಹೊಲದಲ್ಲಿ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ರೈತ ದನಕರುಗಳನ್ನು ಅಟ್ಟುವ ವೇಳೆ ಜಮೀನಿನಲ್ಲಿ ಹುಲಿ ಹೆಜ್ಜೆಗಳು ಕಾಣಿಸಿವೆ.
ಜೋಳ ತೆನೆಕಚ್ಚಿದ್ದು, ಕಡ್ಡಿಗಳು ಆಳೆತ್ತರಕ್ಕೆ ಬೆಳೆದಿವೆ. ಹೀಗಾಗಿ ಹುಲಿ ಜೋಳದ ಹೊಲವನ್ನೇ ಆಶ್ರಯಿಸುವ ಭೀತಿ ಎದುರಾಗಿದೆ. ಅಲ್ಲದೇ ಮಳೆಯಾಗುತ್ತಿರುವುದರಿಂದ ಕಾಡುಹಂದಿ, ಮುಳ್ಳುಹಂದಿ ಬೇಟೆಯಾಡಲು ಜಮೀನಿಗೆ ಬಂದಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತವಾಗಿದೆ.
ದನಕಾರುಗಳನ್ನು ಮೇಯಿಸಲು ಜಮೀನುಗಳಿಗೆ ಹೋಗಲು ರೈತರು ಎದುರುವಂತಾಗಿದೆ ಹೀಗಾಗಿ ಗ್ರಾಮಸ್ಥರು ಹುಲಿಯನ್ನು ಪತ್ತೆಹಚ್ಚಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
Chamarajanagar: ಕೃಷಿ ಜಮೀನಿಗೆ ಕಾಡಾನೆ ದಾಳಿ: ಕಂಗಾಲಾದ ರೈತರು