Chamarajanagar: ಕೃಷಿ ಜಮೀನಿಗೆ ಕಾಡಾನೆ ದಾಳಿ: ಕಂಗಾಲಾದ ರೈತರು

ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾರಣ್ಯದಂಚಿನಲ್ಲಿರುವ ಕೃಷಿ ಜಮೀನುಗಳಿಗೆ ಕಾಡಾನೆ ನುಗ್ಗಿ ರೈತರು ಬೆಳೆದಿದ್ದ ಬಾಳೆ, ಮಾವು, ತೆಂಗಿನ ಸಸಿ ತಿಂದು ರೈತರಿಗೆ ಲಕ್ಷಾಂತರ ನಷ್ಟಸಂಭವಿಸಿದ ಘಟನೆ ಮುರುಟಿಪಾಳ್ಯಗ್ರಾಮದಲ್ಲಿ ನಡೆದಿದೆ. 

Wild Elephant Attacks Farm Land Farmers Panic at Chamarajanagar District gvd

ಯಳಂದೂರು (ಜೂ.30): ಬಿಳಿಗಿರಿರಂಗನಾಥಸ್ವಾಮಿ ಹುಲಿರಕ್ಷಿತಾರಣ್ಯದಂಚಿನಲ್ಲಿರುವ ಕೃಷಿ ಜಮೀನುಗಳಿಗೆ ಕಾಡಾನೆ ನುಗ್ಗಿ ರೈತರು ಬೆಳೆದಿದ್ದ ಬಾಳೆ, ಮಾವು, ತೆಂಗಿನ ಸಸಿ ತಿಂದು ರೈತರಿಗೆ ಲಕ್ಷಾಂತರ ನಷ್ಟಸಂಭವಿಸಿದ ಘಟನೆ ಮುರುಟಿಪಾಳ್ಯಗ್ರಾಮದಲ್ಲಿ ನಡೆದಿದೆ. ಮುರುಟಿಪಾಳ್ಯಗ್ರಾಮದ ರೈತ ಬಿ.ರಾಜೀವ್‌ ಹಾಗೂ ಸುಬ್ಬರಾವ್‌ ಸೇರಿದಂತೆ ಹತ್ತಾರು ರೈತರ ಕೃಷಿ ಜಮೀನಿಗೆ ಆನೆಗಳು ನುಗ್ಗಿ ರೈತರು ಬೆಳೆದಿದ್ದ ಫಸಲು ತಿಂದು ನಾಶಪಡಿಸಿದೆ. ಬಾಳೆ, ತೆಂಗಿನ ಸಸಿಗಳ ಸುಳಿ ತಿಂದು ಹಾಕಿದೆ. ಮಾವಿನ ಮರಗಳ ರಂಬೆಗಳನ್ನು ಮುರಿದು ಹಾಕುವುದರ ಜತೆಯಲ್ಲಿ ಕೆಲವು ಮಾವಿನ ಗಿಡಗಳನ್ನು ಮುರಿದು ಹಾಕಿದ್ದು ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟದಿಂದ ರೈತರು ಕಣ್ಣೀರು ಹಾಕುವಂತಾಗಿದೆ.

ಸಿಬ್ಬಂದಿ ನಿರ್ಲಕ್ಷ: ಈಗಾಗಲೇ ಕಾಡಂಚಿನ ಕೃಷಿ ಜಮೀನುಗಳಲ್ಲಿ ಕಾಡಾನೆಗಳ ದಾಂಧಲೇ ಜಾಸ್ತಿಯಾಗಿದೆ. ರೈತರು ಬೆಳದ ಫಸಲು ರಕ್ಷಣೆ ಮಾಡಿಕೊಳ್ಳುವುದೆ ರೈತರಿಗೆ ದೊಡ್ಡ ಸವಾಲಾಗಿದೆ. ಆದರೆ, ಆನೆಗಳ ಹಿಂಡು ರೈತರ ಕೃಷಿ ಜಮೀನಿಗೆ ನುಗ್ಗಿ ಫಸಲು ತಿಂದು ದಾಂಧಲೇ ನಡೆಸುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ವಿಫಲರಾಗಿದ್ದಾರೆ. ಕೆಲವು ಬಾರಿ ಸಿಬ್ಬಂದಿ ಎದುರೆ ರೈತರ ಕೃಷಿ ಜಮೀನುಗಳಿಗೆ ಆನೆಗಳು ನುಗ್ಗಿ ಫಸಲು ತಿಂದರೂ ಅರಣ್ಯ ಇಲಾಖೆ ಸಿಬ್ಬಂದಿ ಕಂಡೂ ಕಾಣದಂತೆ ಕೈಕಟ್ಟಿಈ ಕೆಲಸ ನಮ್ಮದಲ್ಲ ಎಂದು ಸುಮ್ಮನಾಗಿ ಬಿಡುವುದು ಇವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ.

Chamarajanagar: ಬಂಡೀಪುರ ದಿನಗೂಲಿ ನೌಕರರಿಗೆ ಸಂಬಳ ಬಂತು!

ಕೆಟ್ಟು ಹೋದ ಸೋಲಾರ್‌ ಕಂದಕ: ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಗಡಿಯಂಚಿನಲ್ಲಿ ಸೋಲಾರ್‌ ತಂತಿ ಹಾಗೂ ಕಂದಕಗಳ ನಿರ್ಮಿಸಿದರೂ ಉಪಯೋಗಕ್ಕೆ ಬಾರದ ರೀತಿಯಾಗಿದೆ. ಬಹುತೇಕ ಕಡೆ ಆನೆ ಕಂದಕಗಳು ಮುಚ್ಚಿ ಹೋಗುವುದರ ಜತೆಯಲ್ಲಿ ಸೋಲಾರ್‌ ವಿದ್ಯುತ್‌ ಬೇಲಿ ಕೂಡಾ ಕಾರ್ಯನಿರ್ವಹಿಸದೆ ಕೆಟ್ಟು ಹೋಗಿರುವುದರಿಂದ ಕಾಡಿನಿಂದ ಆನೆಗಳು ಸಲಿಸಾಗಿ ಸೋಲಾರ್‌ ಬೇಲಿಗಳನ್ನು ಮುರಿದು ಕೃಷಿ ಜಮೀನಿನ ಕಡೆ ಮುಖ ಮಾಡುತ್ತಿರುವುದು ರೈತರು ಫಸಲು ರಕ್ಷಣೆ ಮಾಡಿಕೂಳ್ಳುವುದೆ ದೊಡ್ಡ ಸವಾಲಾಗಿದೆ.

ದೂರಿಗೆ ಸ್ಪಂದಿಸದ ಅರಣ್ಯ ಇಲಾಖೆ: ಆನೆಗಳು ಕಾಡಿನಿಂದ ಕೃಷಿ ಜಮೀನಿಗೆ ಬರುತ್ತಿದಂತೆ ರೈತರು ಸಂಬಂಧಪಟ್ಟಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಫೋನ್‌ ಮಾಡಿ ಮಾಹಿತಿ ನೀಡಿದರೆ ನಮ್ಮ ಇಲಾಖೆ ವಾಚರ್‌, ಫಾರೆಸ್ಪರ್‌ ಬರುತ್ತಾರೆ ಎಂದು ನುಣುಚಿಕೂಳ್ಳುತ್ತಿದ್ದಾರೆ. ಆದರೆ, ಆನೆಗಳು ಬಂದು ಫಸಲು ತಿಂದು ಹೋದ ಮಾರನೆ ದಿನ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿ ವಾಪಸ್‌ ಹೋಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ವಾಹನ ಸೌಲಭ್ಯವಿಲ್ಲ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ರೈತರ ಆರೋಪ.

Ramanagara: ಕಾಡಾನೆ ಕಾಟಕ್ಕೆ ಎಲಿಫೆಂಟ್‌ ಟಾಸ್ಕ್‌ಫೋರ್ಸ್‌ ಕಾರ್ಯತಂತ್ರ

ಬಿಆರ್‌ಟಿಯಲ್ಲೋ ಆನೆಗಳ ದಾಂಧಲೆ: ಬಿಳಿಗಿರಿರಂಗಬೆಟ್ಟದ ರೈತರು ಬೆಳೆದಿರುವ ಕಾಫಿ ತೋಟದಲ್ಲಿ ಹಲಸಿನ ಹಣ್ಣು, ಬಾಳೆ, ಮಾವು, ಸೀಬೆ, ಚಕ್ಕೊತ, ಬೆಣ್ಣೆ ಹಣ್ಣು ಸೇರಿದಂತೆ ಇತರೆ ಫಸಲು ತಿನ್ನಲು ತೋಟಗಳಿಗೆ ನುಗ್ಗಿ ಮರದ ರೆಂಬೆಗಳನ್ನು ಮುರಿದು ಹಾಕುವುದರ ಜತೆಗೆ ಕಾಫಿ ಸಸಿಗಳನ್ನು ತುಳಿದು ನಾಶಪಡಿಸುತ್ತಿರುವುದರಿಂದ ಸೋಲಿಗರು ಆತಂಕಗೊಂಡಿದ್ದಾರೆ. ಇನ್ನಾದರು ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಫಸಲು ರಕ್ಷಣೆ ಮಾಡಲು ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios