Shivamogga: ಶವ ಸುಟ್ಟ ಬೂದಿ ಕದ್ದ ಕಳ್ಳರು: ಧಾರ್ಮಿಕ ಕಾರ್ಯಕ್ಕೆ ಕುಟುಂಬಸ್ಥರ ಪರದಾಟ
ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ದಿನಗಳ ಹಿಂದೆ ಶವವನ್ನು ಸುಟ್ಟು ಸಂಸ್ಕಾರ ನೆರವೇರಿಸಿ ಬಂದಿದ್ದರು. ಆದರೆ, ನಂತರ ಧಾರ್ಮಿಕ ಕಾರ್ಯಕ್ಕಾಗಿ ಬೂದಿಯನ್ನು ತೆಗೆದುಕೊಳ್ಳಲು ಹೋದರೆ ಅಲ್ಲಿ ಬೂದಿಯೇ ಇರಲಿಲ್ಲ.
ವರದಿ- ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್
ಶಿವಮೊಗ್ಗ (ಫೆ.02): ಇದು ಅಂತಿಂಥ ಕಳ್ಳತನವಲ್ಲ...! ಈ ಕಳ್ಳತನದ ಕಥೆಯನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು..! ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ದಿನಗಳ ಹಿಂದೆ ಶವವನ್ನು ಸುಟ್ಟು ಸಂಸ್ಕಾರ ನೆರವೇರಿಸಿ ಬಂದಿದ್ದರು. ಆದರೆ, ನಂತರ ಧಾರ್ಮಿಕ ಕಾರ್ಯಕ್ಕಾಗಿ ಬೂದಿಯನ್ನು ತೆಗೆದುಕೊಳ್ಳಲು ಹೋದರೆ ಅಲ್ಲಿ ಬೂದಿಯೇ ಇರಲಿಲ್ಲ.
ಅಷ್ಟಕ್ಕೂ ಇಂತಹದೊಂದು ಕಳ್ಳತನ ನಡೆದಿದ್ದು ಯಾಕೆ..?ಈ ಕಳ್ಳತನದ ಬಗ್ಗೆ ನಾನಾ ಅನುಮಾನಗಳು..?ಸ್ಮಶಾನದಲ್ಲಿದ್ದ ಸುಟ್ಟ ಶವದ ಬೂದಿ ಮಾಯ.. ! ಆಶ್ಚರ್ಯ ಚಕಿತರಾದ ಮೃತರ ಕುಟುಂಬಸ್ಥರು ! ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಹಾಗೂ ಸ್ಮಶಾನದಲ್ಲಿದ್ದ ಕಬ್ಬಿಣದ ರಾಡ್‌ನ್ನು ಯಾರೋ ಕದ್ದೊಯ್ದ ವಿಚಿತ್ರ ಘಟನೆ ನಡೆದಿದೆ. ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ 3 ದಿನದ ಹಿಂದೆ ಊರಿನ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡಲಾಗಿತ್ತು. ಮಾರನೇ ದಿನ ಕುಟುಂಬದವರು ಸ್ಮಶಾನದಲ್ಲಿ ಧಾರ್ಮಿಕ ಕಾರ್ಯ ನಡೆಸಿದರು. ಅಳಿದುಳಿದ ಕಟ್ಟಿಗೆಯನ್ನು ಪದ್ಧತಿಯಂತೆ ಮುಂದೆ ಹಾಕಿ ಒಂದು ಎಳನೀರು ಇಟ್ಟು ವಾಪಾಸು ಬಂದಿದ್ದರು.
Chamarajanagar: ಸಿಸಿಟಿವಿ ಕ್ಯಾಮರಾವಿಲ್ಲದ ಏರಿಯಾಗಳೇ ಕಳ್ಳರ ಟಾರ್ಗೆಟ್: ಎರಡು ದಿನಕ್ಕೊಂದು ಕಳ್ಳತನ
ಧಾರ್ಮಿಕ ಕಾರ್ಯ ನೆರವೇರಿಸಲು ಬೂದಿ ಸಿಗದೇ ಒದ್ದಾಟ:
ಮೂರನೇ ದಿನ ಸಂಸ್ಕಾರ ಮಾಡಿದ ಬೂದಿ ತೆಗೆಯಲು ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು. ಆಗ ಕುಟುಂಬಸ್ಥರಿಗೆ ಶಾಕ್ ...! ಜೊತೆಗೆ ಆಶ್ಚರ್ಯವೂ ಕಾದಿತ್ತುಸ್ಮಶಾನದಲ್ಲಿ ನೋಡುವಾಗ ಸುಟ್ಟ ಶವದ ಬೂದಿ ಮಂಗ ಮಾಯವಾಗಿತ್ತು. ಅಯ್ಯೋ ದೇವರೇ.. ಮುಂದೆ ಹೇಗಪ್ಪಾ ಸವಸಂಸ್ಕಾರದ ಧಾರ್ಮಿಕ ವಿಧಿ ವಿಧಾನ ನಡೆಸುವುದು ಎಂದು ಚಿಂತಿಸುವಂತಾಗಿತ್ತು. ಆಶ್ಚರ್ಯವೆಂದರೆ ಬೂದಿ ಕದ್ದ ಕಳ್ಳರು ಮತ್ತೊಂದು ಕೈ ಕೆಲಸ ಮಾಡಿದ್ದರು. ಮೂರು ಎಲುಬು ಮೂಳೆಯನ್ನು ಅಲ್ಲೆ ಒಂದು ಬದಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಕುಟುಂಬದವರು ಆ ಮೂರು ಮೂಳೆಗಳನ್ನು ತಂದು ಮುಂದಿನ ಕಾರ್ಯವನ್ನು ಮಾಡಿದ್ದಾರೆ.
ಅಳಿದುಳಿದ ಮೂಳೆಯನ್ನು ಸುಟ್ಟು ಬೂದಿ ಸಂಗ್ರಹ: ಸ್ಮಶಾನದಲ್ಲಿ ಸುಟ್ಟ ಶವದ ಬೂದಿ ಇಲ್ಲದ್ದನ್ನು ನೋಡಿ ಮೃತರ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಕುಟುಂಬಸ್ಥರು ಆಶ್ಚರ್ಯಚಕಿತರಾಗಿ ಊರಿನ ಗ್ರಾಮಸ್ಥರಿಗೆ ಈ ವಿಷಯ ಮುಟ್ಟಿಸಿದ್ದಾರೆ. ಗ್ರಾಮಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಕುಟುಂಬಸ್ಥರು ಹೇಳಿದ ವಿಷಯ ಸತ್ಯವಾಗಿತ್ತು. ಶವ ಸಂಸ್ಕಾರ ಮಾಡುವಾಗ ಶವದ ಜೊತೆಯಲ್ಲಿಯೇ ಬಂಗಾರ, ಬೆಳ್ಳಿ ಬಿಟ್ಟಿರಬಹುದೆಂದು ಯೋಚಿಸಿದ ಕಳ್ಳರು ಬೂದಿಯನ್ನು ತೆಗೆದುಕೊಂಡು ಹೋಗಿರಬಹುದು ಎಂಬುದು ಸಾರ್ವಜನಿಕರ ಅಂಬೋಣ.
Crime News: ಪೈಪ್‌ಲೈನ್ ವೀಕ್ಷಿಸಲು ಬಂದು ಕಳ್ಳತನ; ಆರೋಪಿಗಳ ಬಂಧನ
ಒಟ್ಟಿನಲ್ಲಿ ಮಲೆನಾಡಿನ ತೀರ್ಥಹಳ್ಳಿಯ ಇಂತಹದೊಂದು ಚಿತ್ರ ವಿಚಿತ್ರ ಘಟನೆ ಮನೆ ಮನೆ ಮಾತಾಗಿದೆ.