Chamarajanagar: ಸಿಸಿಟಿವಿ ಕ್ಯಾಮರಾವಿಲ್ಲದ ಏರಿಯಾಗಳೇ ಕಳ್ಳರ ಟಾರ್ಗೆಟ್: ಎರಡು ದಿನಕ್ಕೊಂದು ಕಳ್ಳತನ
ಬಾಗಿಲ ಚಿಲಕ ಮುರಿದು ಒಳನುಗ್ಗುವ ಖತರ್ನಾಕ್ ಕಳ್ಳರು.
ಮದುವೆಗೆ ಮಾಡಿಸಿದ್ದ ಚಿನ್ನಾಭರಣ ಕಳ್ಳತನ
ಚಾಮರಾಜನಗರದ ಜನತೆ ಭಯ ಶುರುವಾಗಿದೆ
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಫೆ.01): ಆ ಮನೆಯ ಒಡತಿ ಮಗಳ ಮದುವೆಗೆಂದು ಚಿನ್ನಾಭರಣ ಮಾಡಿಸಿ ಇಟ್ಟಿದ್ದರು. ಆದರೆ ಖತರ್ನಾಕ್ ಕಳ್ಳರು ಆ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಆದ್ರೆ ಮನೆಯವರ ಬುದ್ದಿವಂತಿಕೆಯಿಂದ ಅರ್ಧ ಚಿನ್ನ ಕಳ್ಳನ ಪಾಲಾಗಿದ್ರೆ, ಇನ್ನರ್ಧ ಚಿನ್ನ ಮನೆಯಲ್ಲಿ ಸೇಫಾಗಿದೆ.ಆದ್ರೆ ಈ ಕಳ್ಳರ ಗ್ಯಾಂಗ್ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸದೆ ಏರಿಯಾಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಇದು ಚಾಮರಾಜನಗರದ ರಾಘವೇಂದ್ರ ಬಡಾವಣೆಯ ಮನೆಯಲ್ಲಿ ಕಂಡುಬಂದ ದೃಶ್ಯ. ಹೌದು ಬಡಾವಣೆಯ ಶೋಭಾ ಶಿವಣ್ಣ ಅವರ ಮನೆಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ಸುಮಾರು 300 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ. ಶೋಭಾ ಅವರು ಹಬ್ಬಕ್ಕೆಂದು ತನ್ನ ತಾಯಿಯ ಮನೆಗೆ ತೆರಳಿದ್ರು. ಇಂದು ಬೆಳಗ್ಗೆ ಅವರ ಸಂಬಂಧಿಕರು ಮನೆಯ ಬಳಿ ನೋಡಿದಾಗ ಗೇಟ್‌ಗೆ ಬೀಗ ಹಾಕಲಾಗಿತ್ತು. ಆದ್ರೆ ಮನೆಯ ಬಾಗಿಲು ತೆರೆದಿತ್ತು.ಇದರಿಂದ ಅನುಮಾನಗೊಂಡು ಶೋಭಾ ಅವರಿಗೆ ವಿಷಯ ತಿಳಿಸಿದರು.
ಮಂಡ್ಯ: ಬೀಗ ಹಾಕಿರುವ ಮನೆಗಳೇ ಟಾರ್ಗೆಟ್, ಖತರ್‌ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು
ಕೂಡಲೇ ಸ್ಥಳಕ್ಕಾಗಮಿಸಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಇನ್ನು ಶೋಭಾ ಅವರು ತಮ್ಮ ಮಗಳ ಮದುವೆಗೆಂದು ಚಿನ್ನಾಭರಣಗಳನ್ನು ಮಾಡಿಸಿಟ್ಟಿದ್ದರು. ಚಿನ್ನದ ಬೆಲೆ ಗಗನಕ್ಕೇರುತ್ತಿರುವುದರಿಂದ ಮದುವೆ ನಿಶ್ಚಿತವಾದ ನಂತರ ಖರೀದಿ ಮಾಡಿದ್ರೆ ಹಣ ಹೆಚ್ಚಾಗುತ್ತದೆ ಎಂಬ ಮುಂದಾಲೋಚನೆಯಿಂದ ಈಗಲೇ ಚಿನ್ನಾಭರಣ ಖರೀದಿ ಮಾಡಿದರು. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಚಾರವೆಂದ್ರೆ ಶೋಭಾ ಅವರು ಸ್ವಲ್ಪ ಪ್ರಮಾಣದ ಚಿನ್ನಾಭರಣವನ್ನು ಬೀರುವಿನಲ್ಲಿಟ್ಟಿದ್ದು.ಲ,ಇನ್ನು ಸ್ವಲ್ಪ ಚಿನ್ನವನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಮನೆ ಸಜ್ಜಾದ ಮೇಲೆ ಇಟ್ಟಿದ್ದರು. ಹೀಗಾಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳನ ಪಾಲಾಗಿದ್ರೆ ಮೇಲೆ ಇಟ್ಟಿದ್ದ ಚಿನ್ನ ಸೇಫಾಗಿದೆ.
ಎರಡು ದಿನಕ್ಕೊಂದು ಕಳ್ಳತನ ಪ್ರಕರಣ: ಚಾಮರಾಜನಗರ ಪಟ್ಟಣದಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ನಡೆದ ಎರಡನೇ ಕಳ್ಳತನ ಪ್ರಕರಣ ಇದು. ಮೊನ್ನೆಯಷ್ಟೇ ಪಟ್ಟಣದ ಸಿದ್ದಾರ್ಥ ಕಾಲೇಜಿನ ರಸ್ತೆಯ ಮನೆಯೊಂದರಲ್ಲಿ ಇದೇ ಮಾದರಿಯಲ್ಲಿ ಕಳ್ಳತನವಾಗಿತ್ತು. ಇದರಿಂದ ಚಾಮರಾಜನಗರದ ಜನತೆ ಭಯಗೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಇನ್ನುಮುಂದೆ ಈ ರೀತಿ ಕಳ್ಳತನ ಪ್ರಕರಣಗಳ ನಡೆಯದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಾರೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ: ಮನೆ, ಕಾರು ಕಳವು ಪ್ರಕರಣ: ಮತ್ತಿಬ್ಬರ ಬಂಧನ, 3 ಲಕ್ಷ ಮೌಲ್ಯದ ಸ್ವತ್ತು ವಶ
ಬೀಗ ಹಾಕಿರುವ ಮನೆಗಳೇ ಟಾರ್ಗೆಟ್: ಮಂಡ್ಯ(ಫೆ.01): ಬೀಗ ಹಾಕಿರುವ ಮನೆಗಳನ್ನೇ ಟಾರ್ಗೇಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್‌ನಾಕ್ ಗ್ಯಾಂಗ್‌ವೊಂದನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 11 ಲಕ್ಷ ರು. ಮೌಲ್ಯದ 183 ಗ್ರಾಂ ಚಿನ್ನಾಭರಣ, 3150 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಹೋಂಡಾ ಬ್ರಿವೋ ಕಾರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ, ಮುಂಬೈನ ಠಾಣೆ ನಿವಾಸಿ ವಿಜಯ್ ಸುರೇಶ್ ಬೋಸ್ಲೆ, ಶಿವಮೊಗ್ಗ ಜಿಲ್ಲೆ ಕೊತ್ತತ್ತಿ ಗ್ರಾಮದ ಪ್ರವೀಣ್, ಉಡುಪಿಯ ರಕ್ಷಕ್ ಪೂಜಾರಿ, ಪ್ರಸಾದ್, ಚಂದ್ರಕಾಂತ್ ಅವರನ್ನು ಬಂಧಿಸಲಾಗಿದೆ. ಮಂಡ್ಯದ ಹೊಸಹಳ್ಳಿ ಬಡಾವಣೆಯ ಶ್ರೀನಿವಾಸ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಬೆಂಗಳೂರು ಜೈಲು ಸೇರಿದ್ದನು. ಆ ಸಮಯದಲ್ಲಿ ಉಡುಪಿಯ ರಕ್ಷಕ್ ಪೂಜಾರಿ ಸೇರಿದಂತೆ ಉಳಿದವರೆಲ್ಲರ ಪರಿಚಯವಾಗಿತ್ತು. ಇವರೆಲ್ಲರೂ ಒಗ್ಗೂಡಿ ಕಳ್ಳತನ ಪ್ರಕರಣಗಳನ್ನು ನಡೆಸಿಕೊಂಡು ಬರುತ್ತಿದ್ದರು ಎಂದು ತಿಳಿದುಬಂದಿದೆ.