Asianet Suvarna News Asianet Suvarna News

ಶಿವಮೊಗ್ಗ: ಲೈಬ್ರರಿ, ಗೋದಾಮಿನಲ್ಲಿ ಕಳವು

ಪ್ರವಾಹ ಇಳಿದಿದ್ದು, ಹಲವೆಡೆ ಕಳ್ಳತನ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗದ ಸಾಗರದಲ್ಲಿ ಲೈಬ್ರರಿ ಹಾಗೂ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ

Theft in Shivamogga library and stock room
Author
Bangalore, First Published Aug 16, 2019, 2:31 PM IST

ಶಿವಮೊಗ್ಗ(ಆ.16): ಸಾಗರದ ಪಟ್ಟಣದ 5ನೇ ವಾರ್ಡ್‌ನ ಅಣಲೆಕೊಪ್ಪ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ.

ಸಮೀಪದಲ್ಲಿದ್ದ ಯೋಗೀಶ್‌ ಎಂಬವರಿಗೆ ಸೇರಿದ ನಂಜುಂಡೇಶ್ವರ ಶಾಮಿಯಾನದ ಗೋದಾಮಿನಲ್ಲಿದ್ದ ಮ್ಯಾಟ್‌ಗಳನ್ನು ಕಳವು ಮಾಡಿ, ಸುರೇಶ್‌ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಒಡೆದು, ಒಳಗಿನ ಸ್ಟಿರಿಯೋ, ಸೌಂಡ್‌ ಬಾಕ್ಸ್‌ಗಳನ್ನು ಸಹ ಕದ್ದೊಯ್ದಿದ್ದಾರೆ.

ಅಣಲೆಕೊಪ್ಪ ವ್ಯಾಪ್ತಿಯಲ್ಲಿ ಬೀದಿದೀಪ ಇಲ್ಲದೇ ಇರುವುದೇ ಕಳವು ಪ್ರಕರಣಗಳು ಜಾಸ್ತಿಯಾಗಲು ಕಾರಣವಾಗಿದೆ ಎಂದು ವಾರ್ಡ್‌ ಸದಸ್ಯ ಆರ್‌.ಶ್ರೀನಿವಾಸ್‌ ಮೇಸ್ತ್ರಿ ದೂರಿದ್ದಾರೆ.

ಮಂಗಳೂರು: 9 ವರ್ಷದ ನಂತ್ರ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ..!

ಕಳೆದೆರಡು ತಿಂಗಳಿನಿಂದ ಬೀದಿದೀಪ ಹಾಕಿಸುವಂತೆ ನಗರಸಭೆ ಅಧಿಕಾರಿಗಳಿಗೆ, ಆಡಳಿತಾಧಿಕಾರಿಗಳಿಗೆ ವಿನಂತಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ . ಇದರಿಂದ ರಾತ್ರಿ ಹೊತ್ತು ಇಡೀ ವಾರ್ಡ್‌ ಕತ್ತಲಿನ ಕೂಪವಾಗುತ್ತಿದೆ. ಇನ್ನಾದರೂ ನಗರಸಭೆ ಆಡಳಿತ ಬೀದಿದೀಪ ಅಳವಡಿಸದೇ ಇದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಶ್ರೀನಿವಾಸ್‌ ಮೇಸ್ತ್ರಿ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios