ಮಂಗಳೂರು(ಆ.04): ಕಳ್ಳತನ ಮಾಡಿ ತಲೆ ಮತರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳೂರಿನ ಸುಳ್ಯದಲ್ಲಿ ನಡೆದಿದೆ. ಕಳ್ಳತನ ಮಾಡಿ 9 ವರ್ಷಗಳ ನಂತರ ಆರೋಪಿ ಸರೆ ಸಿಕ್ಕಿದ್ದಾನೆ. ಕಳ್ಳತನ ಮಾಡಿದ್ರೂ ಸಿಕ್ಕಿ ಬೀಳದೆ 9ವರ್ಷ ಆರಾಮವಾಗಿ ಒಡಾಡಿಕೊಂಡು ಪೊಲೀಸರಿಗೆ ತಲೆ ನೋವು ತಂದಾತನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಂಭತ್ತು ವರ್ಷಗಳ ಹಿಂದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಂದಡ್ಕದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕುತ್ತಿಗೆಗೆ ಚಾಕು ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ಮಾಡಿದ!

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಕಸಬಾ ಗ್ರಾಮದ ಕಂದಡ್ಕದ ಬಾಲಕೃಷ್ಣ ಎಂಬಾತನ ವಿರುದ್ಧ 9 ವರ್ಷಗಳ ಹಿಂದೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ನಾಪತ್ತೆಯಾಗಿದ್ದ. ಖಚಿತ ಮಾಹಿತಿ ಪಡೆದ ಸುಳ್ಯ ಪೊಲೀಸರು, ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ಮತ್ತು ಎಸ್‌ಐ ಹರೀಶ್‌ಕುಮಾರ್‌ ನೇತೃತ್ವದಲ್ಲಿ ಆರೋಪಿಯನ್ನು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ