ಏರಿಕೆ ಕಂಡಿದ್ದ ಟೊಮೇಟೋ ಬೆಲೆ ದಿಢೀರ್ ಕುಸಿತ
ಹಲವು ದಿನಗಳ ಹಿಂದೆ ಏರಿಕೆ ಕಂಡು ಟೊಮೆಟೋ ಬೆಳೆಗಾರರಲ್ಲಿ ಸಂತಸ ಮೂಡಿಸಿದ್ದ ಟೊಮೆಟೋ ಜಿಲ್ಲೆಯ ಮಾರುಕಟ್ಟೆಯಲ್ಲಿ ಮತ್ತೆ ಏರಳಿತ ಕಂಡಿದ್ದು ಟೊಮೇಟೋ ಬೆಳೆಗಾರರನ್ನು ಕಂಗಾಲಾಗಿಸಿದೆ.
ಚಿಕ್ಕಬಳ್ಳಾಪುರ (ಡಿ.21): ಹಲವು ದಿನಗಳ ಹಿಂದೆ ಏರಿಕೆ ಕಂಡು ಟೊಮೆಟೋ ಬೆಳೆಗಾರರಲ್ಲಿ ಸಂತಸ ಮೂಡಿಸಿದ್ದ ಟೊಮೆಟೋ ಜಿಲ್ಲೆಯ ಮಾರುಕಟ್ಟೆಯಲ್ಲಿ ಮತ್ತೆ ಏರಳಿತ ಕಂಡಿದ್ದು ಟೊಮೇಟೋ ಬೆಳೆಗಾರರನ್ನು ಕಂಗಾಲಾಗಿಸಿದೆ.
ವಾರದ ಹಿಂದೆ 15 ಕೆಜಿ ಟೊಮೆಟೋ (Tomato) ಬಾಕ್ಸ್ 350 ರಿಂದ 400 ರು.ಗಳ ವರೆಗೂ ಮಾರಾಟಗೊಂಡಿತು. ಆದರೆ ಎರಡು ದಿನದಿಂದ ಈಚೆಗೆ ಜಿಲ್ಲೆಯ ಮಾರುಕಟ್ಟೆಯಲ್ಲಿ (Market) ಟೊಮೆಟೋ 15 ಕೆಜಿ ಬಾಕ್ಸ್ ಬರೀ 100, ರಿಂದ 180 ರು ವರೆಗೂ ಮಾತ್ರ ಮಾರಾಟವಾಗುತ್ತಿದ್ದು ಟೊಮೆಟೋ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ರೈತರಿಗೆ ಆರ್ಥಿಕ ಸಂಕಷ್ಟ
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಟೊಮೇಟೋವನ್ನು ವಾಣಿಜ್ಯ ಬೆಳೆಯಾಗಿರುವ ರೈತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಲಕ್ಷಾಂತರ ರು, ಬಂಡವಾಳ ಸುರಿದು ಟೊಮೆಟೊ ಬೆಳೆಯುತ್ತಾರೆ. ಆದರೆ ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಟೊಮೇಟೋ ಬೆಳೆಗಾರರಿಗೆ ಮತ್ತೆ ಬೆಲೆ ಕೈ ಕೊಟ್ಟಿದ್ದು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತೆ ಮಾಡಿದೆ.
ಸಾಮಾನ್ಯವಾಗಿ ಜಿಲ್ಲೆಯ ಟೊಮೇಟೋವನ್ನು ಹೇರಳ ಪ್ರಮಾಣದಲ್ಲಿ ಚೆನ್ನೈ ವ್ಯಾಪಾರಸ್ಥರು ಖರೀದಿಸುತ್ತಾರೆ. ಆದರೆ ತಮಿಳುನಾಡು, ಕೇರಳಗೆ ಛತ್ತಿಸಗಡ್, ಉತ್ತರ ಪ್ರದೇಶದ ಟೊಮೇಟೋ ಪೂರೈಕೆ ಆಗುತ್ತಿರುವ ಪರಿಣಾಮ ಜಿಲ್ಲೆಯ ಟೊಮೇಟೋಗೆ ಬೇಡಿಕೆ ಕುಸಿದೆಯೆಂದು ಟೊಮೇಟೋ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೇಟೋ ಬೆಳೆಯುವ ರೈತರ ಸಂಖ್ಯೆ ಜಿಲ್ಲೆಯ ಚಿಂತಾಮಣಿಯಲ್ಲಿ ಇದ್ದಾರೆ. ಆದರೆ ಟೊಮೇಟೋ ಸದ್ಯ ಬೆಲೆ ಕಳೆದುಕೊಂಡು ಕೈಗೆ ಬಂದ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಜಿಲ್ಲೆಯ ಟೊಮೇಟೋ ಬೆಳೆಗಾರರನ್ನು ಕಂಗಾಲಾಗಿಸಿದೆ.
ತರಕಾರಿ ಬೆಲೆ ಏರಿಕೆ
ಇತ್ತೀಚೆಗೆ ಜಿಲ್ಲಾದ್ಯಂತ ಸುರಿದ ಮ್ಯಾಂಡಸ್ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ. ವಿಶೇಷವಾಗಿ ಆಲೂಗಡ್ಡೆ, ಬೀನ್ಸ್, ಬದನೆ, ಪಡವಲಕಾಯಿ, ನುಗ್ಗೆ, ಕ್ಯಾರೆಟ್, ಮೂಲಂಗಿ ಸೇರಿದಂತರ ವಿವಿಧ ತರಕಾರಿ ಬೆಳೆಗಳ ಬೆಲೆ ಗಗನಕ್ಕೇರಿದ್ದು ಪ್ರತಿಯೊಂದು ಕೆಜಿ ಮೇಲೆ 40, 50 ರು ಗಡಿ ದಾಟಿರುವುದರಿಂದ ಗ್ರಾಹಕರ ಕೈ ಮಚ್ಚುವಂತೆ ಮಾಡಿದೆ. ಚಂಡಮಾರುತಕ್ಕೆ ಸಾಕಷ್ಟುತರಕಾರಿ ಬೆಳೆ ಹಾನಿಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟಿದೆ.
ಡ್ರೈ ಟೊಮ್ಯಾಟೊ ತಿನ್ನಿ
ಟೊಮೇಟೋ (Tomato) ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಳಸಲ್ಪಡುವ ಸಾಮಾನ್ಯ ತರಕಾರಿಯಾಗಿದೆ. ಇದರಿಂದ ಸಾರು, ಸಾಂಬಾರು ಸಲಾಡ್, ಚಟ್ನಿ, ಜ್ಯೂಸ್ ಮೊದಲಾದವುಗಳನ್ನು ತಯಾರಿಸಲಾಗುತ್ತದೆ. ಮಾತ್ರವಲ್ಲ, ತ್ವಚೆಯನ್ನು ಹೆಚ್ಚಿಸಲು ಫೇಸ್ ಪ್ಯಾಕ್ ಆಗಿಯೂ ಇದನ್ನು ಬಳಸುತ್ತಾರೆ. ತರಕಾರಿ (Vegetabke)ಯಾಗಿ ಇದನ್ನು ಬಳಸುವುದಲ್ಲದೆ ಹಸಿ ರೂಪದಲ್ಲಿಯೂ ತರಕಾರಿಯನ್ನು ಹೆಚ್ಚಿನವರು ಬಳಸುತ್ತಾರೆ. ಸ್ಯಾಂಡ್‌ವಿಚ್, ಬರ್ಗರ್ ತಿನ್ನುವಾಗ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಆದರೆ, ಇದಲ್ಲದೆಯೂ ಒಣಗಿದ ಟೊಮೇಟೋ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು.
ಬಿಸಿಲಿನಲ್ಲಿ ಒಣಗಿದ ಟೊಮೆಟೊಗಳನ್ನು ತಿನ್ನುವುದರಿಂದ ನೀವು ಅನೇಕ ಮಾರಕ ರೋಗಗಳನ್ನು ತಪ್ಪಿಸಬಹುದು ಎಂದು ನಿಮಗೆ ತಿಳಿದಿದೆಯೇ. ಆದರೆ, ಈ ಟೊಮೆಟೊಗಳನ್ನು ಬಿಸಿಲಿನಲ್ಲಿ ಮಾತ್ರ ಒಣಗಿಸಬೇಕು. ಅಂತಹ ಟೊಮೆಟೊಗಳು ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತವೆ. ಇದನ್ನು ತರಕಾರಿ (Vegetable), ಪಿಜ್ಜಾ, ಸ್ಯಾಂಡ್‌ವಿಚ್ ಇತ್ಯಾದಿಗಳಲ್ಲಿ ಬಳಸಬಹುದು. ಹಾಗಿದ್ರೆ ಒಣ ಟೊಮೇಟೋಗಳನ್ನು ಆಹಾರದಲ್ಲಿ ಬಳಸೋದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ತಿಳಿಯೋಣ.
Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ
ಪೋಷಕಾಂಶಗಳ ಉಗ್ರಾಣ: ನ್ಯೂಟ್ರಿಷನ್ ವ್ಯಾಲ್ಯೂ ಆರ್ಗನೈಸೇಶನ್ ನ ವರದಿಯ ಪ್ರಕಾರ ಒಣಗಿದ ಟೊಮೇಟೋದಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಇದು ಮುಖ್ಯವಾಗಿ ವಿಟಮಿನ್ ಸಿ, ವಿಟಮಿನ್ ಕೆ, ನಿಯಾಸಿನ್, ಮ್ಯಾಂಗನೀಸ್, ಪೊಟ್ಯಾಸಿಯಮ್, ತಾಮ್ರ, ಪ್ರೋಟೀನ್, ಫೈಬರ್ ಅನ್ನು ಹೊಂದಿರುತ್ತದೆ. ಹೀಗಾಗಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ: ಬಿಸಿಲಿನಲ್ಲಿ ಒಣಗಿಸಿದ ಟೊಮೇಟೊಗಳು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿವೆ. ಶೀತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ (Health problem)ಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಸಿ ಸಹಾಯ ಮಾಡುತ್ತದೆ. ಇದರಲ್ಲಿ ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕುಗಳೂ ಸೇರಿವೆ. ಇದರೊಂದಿಗೆ ವಿಟಮಿನ್ ಸಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಉತ್ತಮವಾಗಿದೆ ಎಂದು ಸಾಬೀತಾಗಿದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ, ಒಣಗಿದ ಟೊಮೇಟೊಗಳು ಅಧಿಕ ರಕ್ತದೊತ್ತಡವನ್ನು (Blood pressure) ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ, ದೇಹವು ಹೆಚ್ಚಿನ ಪೊಟ್ಯಾಸಿಯಮ್ ಮತ್ತು ಕಡಿಮೆ ಸೋಡಿಯಂ ಅನ್ನು ಪಡೆಯುತ್ತದೆ, ಇದು ಅಧಿಕ ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಾಗಿದೆ.
Health Tips: ಚಳಿಗಾಲದಲ್ಲಿ ಪಾಲಕ್-ಟೊಮೆಟೊ ಜ್ಯೂಸ್ ಕುಡಿದು ಹೆಲ್ತಿಯಾಗಿರಿ
ಹೃದಯಕ್ಕೆ ಪ್ರಯೋಜನಕಾರಿ: ಬಿಸಿಲಿನಲ್ಲಿ ಒಣಗಿದ ಟೊಮೆಟೊಗಳ ಸೇವನೆಯು ದೈನಂದಿನ ಕ್ಯಾಲ್ಸಿಯಂನ 6 ಪ್ರತಿಶತ ಮತ್ತು ಮೆಗ್ನೀಸಿಯಮ್ನ 25 ಪ್ರತಿಶತವನ್ನು ಒದಗಿಸುವ ಮೂಲಕ ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಕ್ಯಾಲ್ಸಿಯಂ ಮೂಳೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯ ಸ್ನಾಯುವನ್ನು ಬಲಪಡಿಸುತ್ತದೆ. ಮೆಗ್ನೀಸಿಯಮ್ ಇದಕ್ಕೆ ವಿರುದ್ಧವಾದ ಪಾತ್ರವನ್ನು ಹೊಂದಿದೆ, ಹೃದಯ ಸ್ನಾಯುವನ್ನು ವಿಶ್ರಾಂತಿ ಮಾಡುವ ಮೂಲಕ ಸಾಮಾನ್ಯ ಹೃದಯ ಬಡಿತ (Heart beat)ವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯವನ್ನು ಆರೋಗ್ಯಕರವಾಗಿಡಲು, ನಿಮ್ಮ ಆಹಾರದಲ್ಲಿ ಒಣಗಿದ ಟೊಮೇಟೊಗಳನ್ನು ಸೇರಿಸಿಕೊಳ್ಳಬಹುದು.
ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ: ಬಿಸಿಲಿನಲ್ಲಿ ಒಣಗಿಸಿದ ಕೇವಲ 100 ಗ್ರಾಂ ಟೊಮೆಟೊಗಳು ನಿಮ್ಮ ದೈನಂದಿನ ಶಿಫಾರಸು ಮಾಡಿದ ಆಹಾರದ ಫೈಬರ್ ಸೇವನೆಯ 40% ಕ್ಕಿಂತ ಹೆಚ್ಚು ಹೊಂದಿರುತ್ತವೆ. ಇದು ಕರಗುವ ಮತ್ತು ಕರಗದ ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು (Digestion) ಬಲಪಡಿಸುತ್ತದೆ.
ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ: ಬಿಸಿಲಿನಲ್ಲಿ ಒಣಗಿದ ಟೊಮೆಟೊಗಳು ಲೈಕೋಪೀನ್‌ನ ಉತ್ತಮ ಮೂಲವಾಗಿದೆ, ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕೆಲವು ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.