Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ

ಡಯಟ್ ಋತುವಿಗೆ ತಕ್ಕಂತೆ ಬದಲಾಗ್ತಿರುತ್ತದೆ. ಚಳಿಗಾಲದಲ್ಲಿ ಕೆಲ ಆಹಾರವನ್ನು ಡಯಟ್ ನಲ್ಲಿ ಸೇರಿಸಬೇಕು. ಅದ್ರಲ್ಲಿ ಟೊಮೊಟೊ ಸೂಪ್ ಕೂಡ ಒಂದು. ಚಳಿ ಚಳಿ ಅಂತಾ ಟೀ ಕುಡಿಯೋ ಬದಲು ಈ ಸೂಪ್ ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ.

Health Benefits Of Tomato Soup

ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಬಿಸಿ ಬಿಸಿ ಟೀ, ಕಾಫಿ ಸೇವನೆ ಮಾಡಲು ಮನಸ್ಸು ಹಾತೊರೆಯುತ್ತದೆ. ಆಗಾಗ ಬಿಸಿ ಟೀ, ಕಾಫಿ ಸೇವನೆ ಮಾಡೋದು ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಈ ಸಮಯದಲ್ಲಿ ನಾವು ಸೂಪ್ ಗೆ ಆದ್ಯತೆ ನೀಡಬಹುದು. ಸೂಪ್ ದೇಹಕ್ಕೆ ಬಿಸಿ ಅನುಭವ ನೀಡುವ ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಚಳಿಗಾಲದ ಋತುವಿನಲ್ಲಿ ವಿವಿಧ ತರಕಾರಿಗಳ ಸೂಪ್ ತಯಾರಿಸಬಹುದು. ತರಕಾರಿ ಸೂಪ್ ಗಿಂತ ಟೊಮೊಟೊ ಸೂಪ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. 

ಟೊಮೊಟೊ (Tomato) ಸೂಪ್‌ (Soup )ನ ರುಚಿ ಅದ್ಭುತವಾಗಿರುತ್ತದೆ. ಚಳಿಗಾಲ (Winter) ದಲ್ಲಿ ನೀವು ಟೊಮೊಟೊ ಸೂಪ್ ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನವಿದೆ. ನಾವಿಂದು ಟೊಮೊಟೊ ಸೂಪ್ ಸೇವನೆ ಮಾಡೋದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನಿಮಗೆ ಹೇಳ್ತೆವೆ.

ಅನಾರೋಗ್ಯದಿಂದ (Illness) ರಕ್ಷಣೆ : ಚಳಿಗಾಲದಲ್ಲಿ ಖಾಯಿಲೆ ಹೆಚ್ಚು. ಬಹುತೇಕರು ಋತುವಿನಲ್ಲಿ ಕಾಣಿಸಿಕೊಳ್ಳುವ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಾರೆ. ಆಗಾಗ ಖಾಯಿಲೆ ಬೀಳೋದು ಹೆಚ್ಚು. ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕೂಡ ಹದಗೆಡುತ್ತೆ ಎನ್ನುವವರು ಡಯಟ್ ನಲ್ಲಿ ಟೊಮೆಟೊ ಸೂಪ್ ಸೇರಿಸಿ.  ಇದ್ರಿಂದ ದೊಡ್ಡ ಮಟ್ಟದ ಪರಿಹಾರ ಸಿಗುತ್ತದೆ. ಟೊಮೊಟೊದಲ್ಲಿ  ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ (Bacteria) ವಿರುದ್ಧ ಹೋರಾಡುವ ನಮಗೆ ಶಕ್ತಿ ನೀಡುವ ಜೊತೆಗೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

RAINBOW DIET: ಈ ಸ್ಪೆಷಲ್ ಡಯೆಟ್ ಮಾಡಿದ್ರೆ ಕಾಯಿಲೆಗಳಿಂದ ದೂರವಿರ್ಬೋದು

ದೇಹದ ಉಷ್ಣತೆ:  ಚಳಿಗಾಲದಲ್ಲಿ ಶೀತದಿಂದಾಗಿ ನಮ್ಮ ದೇಹದ ಉಷ್ಣತೆಯಲ್ಲಿ ಏರುಪೇರಾಗುತ್ತದೆ. ಚಳಿಯಿಂದ ಬಳಲುವವರು ದೇಹವನ್ನು ಬಿಸಿ ಮಾಡಲು ಟೀ, ಕಾಫಿ ಸೇವನೆ ಮಾಡ್ತಾರೆ. ಆದ್ರೆ ಇದು ಕೆಲ ಸಮಯ ಮಾತ್ರ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಹಾಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಿಸುತ್ತದೆ. ಆದ್ರೆ ಟೊಮೊಟೊ ಸೂಪ್ ನಮ್ಮ ದೇಹವನ್ನು ಬೆಚ್ಚಗಿಡುವ ಜೊತೆಗೆ ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.  

ತೂಕ ನಿಯಂತ್ರಣಕ್ಕೆ ಟೊಮೊಟೊ ಸೂಪ್: ಚಳಿಗಾಲದಲ್ಲಿ ಹಸಿವು ಹೆಚ್ಚು. ಇದೇ ಕಾರಣಕ್ಕೆ ಅನೇಕರು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡ್ತಾರೆ. ಜೊತೆಗೆ ಚಳಿ ಕಾರಣಕ್ಕೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ತೂಕ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ತೂಕ ನಿಯಂತ್ರಣದಲ್ಲಿರಬೇಕು, ಹೊಟ್ಟೆ ತುಂಬಿದ ಅನುಭವವಾಗ್ಬೇಕು ಎನ್ನುವವರು ಟೊಮೆಟೊ ಸೂಪ್  ಸೇವಿಸಿ. ಅದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಟೊಮೊಟೊ ಸೂಪ್ ನಲ್ಲಿ ಕಡಿಮೆ ಕ್ಯಾಲೋರಿಯಿದೆ. ಇದ್ರಲ್ಲಿರುವ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ನೀವು ಹೆಚ್ಚು ತಿನ್ನೋದು ನಿಯಂತ್ರಣಕ್ಕೆ ಬರುತ್ತದೆ. 

ನೀವು ಇಷ್ಟಪಟ್ಟು ತಿನ್ನುವ ಮೊಮೊಸ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ದೇಹದಿಂದ ಹೊರ ಹೋಗುತ್ತೆ ವಿಷ: ಚಳಿಗಾಲದಲ್ಲಿ ಟೊಮೆಟೊ ಸೂಪ್‌ ಸೇವನೆ ಮಾಡೋದ್ರಿಂದ ದೇಹದಲ್ಲಿರುವ ವಿಷ ಹೊರ ಹೋಗಲು ನೆರವಾಗುತ್ತದೆ. ಮೊದಲೇ ಹೇಳಿದಂತೆ ಚಳಿಗಾಲದಲ್ಲಿ ತಿನ್ನುವುದು ಹೆಚ್ಚಾಗುತ್ತದೆ. ಅದ್ರಲ್ಲೂ ಬಿಸಿ ಬಿಸಿ ಫಾಸ್ಟ್ ಫುಡ್ ಸೇವನೆ ಹೆಚ್ಚು. ಇದ್ರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುತ್ತವೆ. ಅತಿಯಾದ ಸೇವನೆಯಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ.  ಟೊಮೆಟೊ ಸೂಪ್ ಈ ಎರಡೂ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಟೊಮೆಟೊ ಸೂಪ್‌ನಲ್ಲಿರುವ ನೀರಿನ ಅಂಶ, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಿಂದಾಗಿ ಯುಟಿಐಗೆ ರಕ್ಷಣೆ ಸಿಗುತ್ತದೆ. ಇದಲ್ಲದೆ, ಟೊಮೆಟೊದಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಹಾಗಾಗಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. 

Latest Videos
Follow Us:
Download App:
  • android
  • ios