Asianet Suvarna News Asianet Suvarna News

ಧಾರವಾಡ: ಮನೆ ಪೂರ್ತಿಗೊಳಿಸದ ಗುತ್ತಿಗೆದಾರಗೆ ₹7.50 ಲಕ್ಷ ದಂಡ!

ಹಣ ಪಡೆದು ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ .7.50 ಲಕ್ಷ ದಂಡದೊಂದಿಗೆ ಪರಿಹಾರ ನೀಡಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.

The consumer court fined the contractor for not completing the house at dharwad rav
Author
First Published Mar 9, 2023, 9:48 AM IST | Last Updated Mar 9, 2023, 9:48 AM IST

ಧಾರವಾಡ (ಮಾ.9) : ಹಣ ಪಡೆದು ಮನೆ ಪೂರ್ತಿಗೊಳಿಸದ ಗುತ್ತಿಗೆದಾರನಿಗೆ .7.50 ಲಕ್ಷ ದಂಡದೊಂದಿಗೆ ಪರಿಹಾರ ನೀಡಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.

ಅಳ್ನಾವರ್‌ ನಿವಾಸಿ ರೇಣುಕಾ ಸುಣಗಾರ(Renuka sunagara) ಮನೆ ಕಟ್ಟಿಕೊಡುವಂತೆ ಖಾನ್‌ ಸಿವಿಲ್‌ ಕನ್ಸಲ್ಟೆನ್ಸಿ(Khan Civil Consultancy)ಯ ವಾಸಿಮ್‌ ಖಾನ್‌ ಪಠಾಣ(Wasim Khan Pathan) ಅವರ ಜೊತೆ 2020ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದ ಪ್ರಕಾರ ದೂರುದಾರ ಪ್ರತಿ ಚ.ಅಡಿಗೆ .1,800ಗಳಂತೆ ಗುತ್ತಿಗೆದಾರನಿಗೆ ಕೊಡುವ ಕರಾರು ಇತ್ತು. ದೂರುದಾರರು .14.87 ಲಕ್ಷ ಮನೆ ಕಟ್ಟುವ ಕುರಿತು ಎದುರುದಾರರಿಗೆ ಸಂದಾಯ ಮಾಡಿದ್ದರು.

1 ರೂಪಾಯಿ ಚಿಲ್ಲರೆ ಕೊಡದ ಕಂಡಕ್ಟರ್‌ಗೆ 3 ಸಾವಿರ ರೂ. ದಂಡ: ಬಿಎಂಟಿಸಿ ಸಿಬ್ಬಂದಿಗೆ ಕೋರ್ಟ್‌ ತರಾಟೆ

ಗುತ್ತಿಗೆದಾರ ಕಳಪೆ ಗುಣಮಟ್ಟ(Poor work)ದ ಸಾಮಗ್ರಿಗಳನ್ನು ಉಪಯೋಗಿಸಿ ಮನೆಯ ಕಟ್ಟಡ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರು. ಕಳಪೆ ಗುಣಮಟ್ಟದ ಸಾಮಗ್ರಿಯಿಂದ ಕಟ್ಟಿದ್ದರಿಂದ ಮನೆಯ ಸ್ಲಾ್ಯಬ್‌ನಲ್ಲಿ 7-8 ಕಡೆ ಲಿಕೇಜ್‌ ಆಗಿತ್ತು. ಮನೆಯ ಇಟ್ಟಿಗೆಗಳು ಸಹ ಕರಗಿ ಹೋಗಿವೆ. ಕಳಪೆ ಮನೆ ಕಾಮಗಾರಿಯಿಂದ ಮತ್ತು ಮನೆ ಕೆಲಸ ಪೂರ್ತಿಗೊಳಿಸದ್ದರಿಂದ ತನಗೆ ಆರ್ಥಿಕ ಹಾನಿ, ಮಾನಸಿಕ ತೊಂದರೆಯಾಗಿದೆ ಎಂದು ರೇಣುಕಾ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಗುತ್ತಿಗೆದಾರ ವಕೀಲರ ಮೂಲಕ ಹಾಜರಾಗಿ ನಾವು ಕಟ್ಟಡ ಕಾಮಗಾರಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿದ್ದೇವೆ. ದೂರುದಾರ ಇನ್ನೂ .12 ಲಕ್ಷ ಕೊಡುವುದಿದೆ. ತಮ್ಮಿಂದ ಯಾವುದೇ ಸೇವಾ ನ್ಯೂನತೆ ಆಗಿಲ್ಲವೆಂದು ಹೇಳಿ ಈ ದೂರನ್ನು ವಜಾ ಮಾಡುವಂತೆ ಕೋರಿದ್ದರು.

ದೂರಿನ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿಮತ್ತು ಪ್ರಭು ಹಿರೇಮಠ, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಲಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸ್ಥಳಿಯ ವಕೀಲರನ್ನು ಕೋರ್ಚ್‌ ಕಮೀಷನರ್‌ ಆಗಿ ನೇಮಿಸಲಾಗಿತ್ತು. ಅವರು ಉಭಯತರ ಸಮಕ್ಷಮ ಸ್ಥಳ ಪರಿಶೀಲನೆ ಮಾಡಿ ಆಯೊಗಕ್ಕೆ ವರದಿ ಸಲ್ಲಿಸಿದ್ದರು. ಅವರ ವರದಿ ಮತ್ತು ಉಭಯತರ ಹಾಜರು ಮಾಡಿದ ಸಾಕ್ಷಾಧಾರಗಳನ್ನು ಆಯೋಗವು ಪರಿಶೀಲಿಸಿ ಆಯೋಗ ಆದೇಶ ನೀಡಿದೆ.

ದೂರುದಾರ ಗುತ್ತಿಗೆದಾರನಿಗೆ .14.87 ಲಕ್ಷ ಸಂದಾಯ ಮಾಡಿದ್ದರೂ ಅವರು ಕಳಪೆ ಕಾಮಗಾರಿ ಮಾಡಿ ಕಟ್ಟಡದ ಕೆಲಸ ಪೂರ್ತಿಗೊಳಿಸದ್ದರಿಂದ ಗುತ್ತಿಗೆದಾರ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಹಣ ಪಡೆದು ಮನೆ ಕಟ್ಟಿಕೊಡದ ಬಿಲ್ಡರ್; ಬಡ್ಡಿ ಸಮೇತ ಪರಿಹಾರ, ದಂಡ ಕೊಡಲು ಆದೇಶಿಸಿದ ಕೋರ್ಟ್

ಅದಕ್ಕಾಗಿ ಗುತ್ತಿಗೆದಾರ ದೂರುದಾರಳಿಗೆ ಕೊಡಬೇಕಾದ ಹಣ, ಅವರಿಗೆ ಆಗಿರುವ ಅನಾನುಕೂಲ, ಮಾನಸಿಕ ತೊಂದರೆ ಹಾಗೂ ಪ್ರಕರಣದ ಖರ್ಚು ವೆಚ್ಚವೆಂದು .7.50 ಲಕ್ಷವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ಅವಧಿಯೊಳಗೆ ಹಣ ಕೊಡದಿದ್ದಲ್ಲಿ ತೀರ್ಪು ನೀಡಿದ ದಿನಾಂಕದಿಂದ .7.50 ಲಕ್ಷ ಮೇಲೆ ಶೇ.8ರಂತೆ ಬಡ್ಡಿ ಹಾಕಿ ಕೊಡಲು ಆಯೋಗ ತಿಳಿಸಿದೆ.

Latest Videos
Follow Us:
Download App:
  • android
  • ios