ಮದ್ದೂರು (ಸೆ.25): ಟಿಎಪಿಸಿಎಂಎಸ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೆ.30 ರಂದು ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ 20 ಮಂದಿ ಕಣದಲ್ಲಿ ಇದ್ದಾರೆ.

ಚುನಾವಣೆಯ ಎ ಮತ್ತು ಬಿ ತರಗತಿಯಿಂದ ಒಟ್ಟು 62 ಮಂದಿ ನಾಮಪತ್ರ ಸಲ್ಲಿಸಿದ್ದರು. ಎ ತರಗತಿಯಿಂದ 6 ಮಂದಿ, ಬಿ ತರಗತಿಯಿಂದ 14 ಮಂದಿ ಉಮೇದುವಾರಿಕೆ ಹಿಂಪಡೆದಿದ್ದಾರೆ. ಇದರಲ್ಲಿ 23 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳಾದ ತಹಸೀಲ್ದಾರ್‌ ಎಚ್‌ .ವಿ.ವಿಜಯಕುಮಾರ್‌ ತಿಳಿಸಿದ್ದಾರೆ.

ಬಿ ತರಗತಿಯಿಂದ ಕೊಪ್ಪ, ಆತಗೂರು ಹಾಗೂ ಕಸಬಾ ಹೋಬಳಿ ಕ್ಷೇತ್ರಗಳಿಂದ 3 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿಎ ಕೆರೆ ಹೋಬಳಿ ಎ ತರಗತಿ ಸಾಮಾನ್ಯ ಕ್ಷೇತ್ರದಿಂದ ನಂದೀಶ್‌, ಕೆ.ವಿ. ಶ್ರೀನಿವಾಸ, ಕೆ.ಟಿ.ಶೇಖರ್‌ , ಎಸ್‌ .ಡಿ.ಹೊನ್ನೇಗೌಡ ಕಣದಲ್ಲಿ ಉಳಿದಿದ್ದಾರೆ.

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ

ಬಿ ತರಗತಿ ಮಹಿಳಾ ಮತ್ತು ಸಾಮಾನ್ಯ ಕ್ಷೇತ್ರದಿಂದ ಕೆ.ಎಂ.ಅಮೂಲ್ಯ, ಎಚ್‌ .ಕೆ.ಇಂದಿರಾ, ಎ.ಕೃಷ್ಣ, ಗೌರಮ್ಮ, ಜಾವೀದ್‌ ಉಲ್ಲಾಖಾನ್‌ , ಮೊಹೆಬ್‌ ಪಾಷ, ಬೊಮ್ಮಲಿಂಗಯ್ಯ, ಎಸ್‌ .ಬಿ.ಮಹದೇವು, ಎಂ.ಎಂ.ಮಹೇಶ, ಎಸ್‌ .ಮಹೇಶ್‌ , ಎಂ.ಎ. ಮುರುಳಿ, ಎಸ್‌ .ಜಿ.ಮಂಜುಳಾ, ಸಿ.ಮಂಜುಳಾ, ರಾಮಕೃಷ್ಣ, ಬಿ.ಶ್ರೀನಿವಾಸಮೂರ್ತಿ, ಸಿ.ಪಿ.ಸುಧಾ, ಹನುಮಂತಸ್ವಾಮಿ ಕಣದಲ್ಲಿ ಇದ್ದಾರೆ. ಚುನಾವಣೆ ಸೆ.30 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಆ ನಂತರ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಮಾಡಲಾಗುವುದು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ರಾಜು ಇದ್ದರು.

BSY ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮಂಡನೆ..! ...

ಮೂವರು ಕಾಂಗ್ರೆಸ್‌ ಬೆಂಬಲಿತರು ಆಯ್ಕೆ : ಮದ್ದೂರು: ಟಿಎಪಿಸಿಎಂಎಸ್‌ನ ಚುನಾವಣೆಯ ಕೊಪ್ಪ, ಆತಗೂರು ಹಾಗೂ ಕಸಬಾ ಕ್ಷೇತ್ರಗಳಿಂದ ಮೂವರು ಕಾಂಗ್ರೆಸ್‌ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಪ್ಪ ಸಾಮಾನ್ಯ ಎ ತರಗತಿ ಕ್ಷೇತ್ರದಿಂದ ಎಚ್‌ .ಕೆ.ಕರಿಯಪ್ಪ, ಆತಗೂರು ಹೋಬಳಿ ಸಾಮಾನ್ಯ ಕ್ಷೇತ್ರದಿಂದ ಶಂಕರಲಿಂಗಯ್ಯ, ಕಸಬಾ ಕ್ಷೇತ್ರದ ಸಾಮಾನ್ಯ ಎ ತರಗತಿಯಿಂದ ಬಿ.ರಾಘವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂವರನ್ನು ಕೆಪಿಸಿಸಿ ಸದಸ್ಯ ಎಸ್‌ .ಗುರುಚರಣ್‌ , ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಅಭಿನಂದಿಸಿದರು.

ನಂತರ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕದಲೂರು ರಾಮಕೃಷ್ಣ, ಮೂರು ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿರುವುದರಿಂದ ಸಹಕಾರ ಸಂಘದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಉಳಿದ 5 ಕ್ಷೇತ್ರಗಳಿಂದ ಕಾಂಗ್ರೆಸ್‌ ಬೆಂಬಲಿತರು ಗೆಲುವು ಸಾಧಿಸಲಿದ್ದಾರೆ. ಮತದಾರರು ಕಾಂಗ್ರೆಸ್‌ ಬೆಂಬಲಿತರಿಗೆ ಮತ ನೀಡಿ ಆಯ್ಕೆಗೆ ಸಹಕಾರ ನೀಡಬೇಕು ಎಂದು ಕೋರಿದರು. ಈ ವೇಳೆ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಕೆ.ಜೋಗಿಗೌಡ, ತಾಪಂ ಮಾಜಿ ಸದಸ್ಯ ಕೆ.ಆರ್‌ .ಮಹೇಶ್‌ , ಮುಖಂಡರಾದ ಸತೀಶ್‌, ಸಿದ್ದು ಇದ್ದರು.