Asianet Suvarna News Asianet Suvarna News

ಗಾಂಧಿ ಕನಸಿಗೆ ಕೈ ಜೋಡಿಸಿದ ಮದ್ಯ ವ್ಯಸನಿಗಳು

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಕರೆ ನೀಡಿದಂತಯೇ ಸ್ವಚ್ಚ ಭಾರತ್‌ ಅಭಿಯಾನಕ್ಕೆ ಮೈಸೂರಿನ ಮದ್ಯ ವ್ಯಸನಿಗಳು ಸ್ವಚ್ಛತಾ ಕಾರ್ಯ ನಡೆಸಿಕೊಡುವ ಮೂಲಕ ಗಾಂಧೀಜಿ ಅವರ ಕನಸನ್ನು ಈಡೇರಿಸಲು ವ್ಯಸನಿಗಳೇ ಮುಂದಾಗಿರುವುದು ವಿಶೇಷ.

Swachh Bharat Programme Organised in Mysuru
Author
First Published Oct 3, 2022, 5:24 AM IST

 ಮೈಸೂರು (ಅ.03): ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಕರೆ ನೀಡಿದಂತಯೇ ಸ್ವಚ್ಚ ಭಾರತ್‌ ಅಭಿಯಾನಕ್ಕೆ ಮೈಸೂರಿನ ಮದ್ಯ ವ್ಯಸನಿಗಳು ಸ್ವಚ್ಛತಾ ಕಾರ್ಯ ನಡೆಸಿಕೊಡುವ ಮೂಲಕ ಗಾಂಧೀಜಿ ಅವರ ಕನಸನ್ನು ಈಡೇರಿಸಲು ವ್ಯಸನಿಗಳೇ ಮುಂದಾಗಿರುವುದು ವಿಶೇಷ.

ಮೈಸೂರಿನ (Mysuru) ಹೆಬ್ಬಾಳಿನ ರಿಂಗ್‌ ರಸ್ತೆಯಲ್ಲಿನ ಬಸವ ಮಾರ್ಗ ಫೌಂಡೇಷನ್‌ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ Road ಬದಿಗಳಲ್ಲಿ ಸಸಿ ನೆಟ್ಟು ಸ್ವಚ್ಛತಾ ಕಾರ್ಯ ನಡೆಸಲಾಯಿತು.

 ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು, ಹೆಬ್ಬಾಳು Ring Road ಸೇರಿದಂತೆ ಸುತ್ತಲಿನ ರಸ್ತೆ, ರಸ್ತೆ ಬದಿ ಪುಟ್ಪಾತ್‌ ಮತ್ತು ಉದ್ಯಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಬಳಿಕ ರಸ್ತೆ ಬದಿ ಸೇರಿದಂತೆ ಖಾಲಿ ಇದ್ದ ಪ್ರದೇಶಗಳಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ಪ್ರೇಮಿಗಳಾಗುವ ಮೂಲಕ ಉತ್ತಮ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾದರು.

ಈ ಸಂದರ್ಭದಲ್ಲಿ ಫೌಂಡೇಷನ್‌ ಅಧ್ಯಕ್ಷ ಸಿ. ಬಸವರಾಜು ಮಾತನಾಡಿ, ಸ್ವಚ್ಚ ಭಾರತ್‌ ಗಾಂಧೀಜಿ ಅವರು ಕಂಡ ದೊಡ್ಡ ಕನಸು. ಆ ಕನಸನ್ನು ಈಡೇರಿಸುವ ಒಂದಿಷ್ಟು ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ಸ್ವಚ್ಚತಾ ಕಾರ್ಯ ಕೇವಲ ಒಂದು ದಿನಕ್ಕೆ ಸೀಮತವಾಗಬಾರದು. ಇದು ವರ್ಷವಿಡೀ ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತರಾಗೋಣ ಎಂದು ಬಸವರಾಜು ವ್ಯಸನಿಗಳಿಗೆ ಕರೆ ನೀಡಿದರು. ವಿಶೇಷವಾಗಿ ಪ್ರತಿವಾರ ಗಾಂಧಿಜೀ ಅವರ ಹೆಸರಿನಲ್ಲಿ ಸ್ವಚ್ಛತಾ ಕಾರ್ಯವನ್ನು ಫೌಂಡೇಷನ್‌ನಿಂದ ನಡೆಸಲಾಗುವುದು ಎಸ್‌ ಬಸವರಾಜು ತಿಳಿಸಿದರು.

ಗಾಂಧೀಜಿ ಇಂದಿಗೂ ಮನುಕುಲದ ಮಾರ್ಗದರ್ಶಕ 

 ಹುಣಸೂರು : ಮನುಕುಲದ ಮಾರ್ಗದರ್ಶಕ ಗಾಂಧೀಜಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇಂದಿಗೂ ವಿಶ್ವ ಮನುಕುಲದ ಮಾರ್ಗದರ್ಶಕರಾಗಿದ್ದಾರೆ ಎಂದು ಹಿರಿಯ ರಂಗಕಲಾವಿದ ಜಯರಾಂ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಾಂಧಿ ಜಯಂತಿಯನ್ನು ಅಹಿಂಸ ದಿನಾಚರಣೆಯನ್ನಾಗಿಯೂ ಆಚರಿಸಲಾಗುತ್ತದೆ. ಗಾಂಧೀಜಿಯವರ ಜೀವನಾ ದರ್ಶಗಳಾದ ಸತ್ಯ ಮತ್ತು ಧರ್ಮಪಾಲನೆ ಇಂದಿನ ವಿಶ್ವದ ಅಗತ್ಯವಾಗಿದೆ. ನ್ಯಾಯಯುತ ಹೋರಾಟದ ಪ್ರತೀಕವಾಗಿ ಸತ್ಯಾಗ್ರಹವನ್ನು ಪರಿಚಯಿಸಿದರು. ಪಾಶವಿಕೃತ್ಯಗಳ ಮೂಲಕ ಹೋರಾಟಕ್ಕಿಂತ ಸತ್ಯಾಗ್ರಹ ಅತ್ಯಂತ ಶಕ್ತಿಯುತವಾದದ್ದು ಎಂದು ತಿಳಿಸಿಕೊಟ್ಟರು.

ಉಪವಿಭಾಗಾಧಿಕಾರಿ ವರ್ಣಿತ್‌ ನೇಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿಯ ವಿಚಾರಧಾರೆಗಳ ಕುರಿತು ಇಂದಿಗೂ ಪುಸ್ತಕಗಳು ಹೊರಬರುತ್ತಿವೆ. ಅಂದರೆ ಅವರ ಜೀವನ ಇಂದಿನ ಪೀಳಿಗೆಗೂ ದಾರಿದೀಪವಾಗಿದೆ ಎಂದು ಅರ್ಥ. ಇಂತಹ ಮಹನೀಯ ಈ ಭೂಮಿಯಲ್ಲಿದ್ದ ಎನ್ನುವುದೇ ನಮ್ಮೆಲ್ಲರ ಹೆಮ್ಮೆ ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಸೋಮಶೇಖರ್‌, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಡಿ. ಕುಮಾರ್‌, ತಹಸೀಲ್ದಾರ್‌ ಡಾ.ಎಸ್‌.ಯು. ಅಶೋಕ್‌, ತಾಪಂ ಇಒ ಬಿ.ಕೆ. ಮನು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್‌, ಬಿಇಒ ಎಸ್‌. ರೇವಣ್ಣ, ಮುಖಂಡ ಖಾಲಿದ್‌ ಇದ್ದರು.

ಹಿರಿಯ ಕಲಾವಿದ ಜಯರಾಂ ನೇತೃತ್ವದಲ್ಲಿ ಗಾಂಧೀಜಿಯವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಂ ಹಾಡನ್ನು ಸುಶ್ರಾವ್ಯವಾಗಿ ಹಾಡಲಾಯಿತು.

ಬೆಟ್ಟದಪುರ : ಗ್ರಾಮದಲ್ಲಿ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಗಾಂಧಿ ಜಯಂತಿ ಆಚರಿಸಿತು. ಗ್ರಾಮದ ಪ್ರೌಢಶಾಲೆಯಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಶಿಕ್ಷಕರಾದ ನಿಂಗರಾಜ… ಜ್ಯೋತಿ ಹಾಗೂ ಇತರ ಶಿಕ್ಷಕರು ಭಾಗವಹಿಸಿದ್ದರು. ಗ್ರಾಪಂನಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅಧ್ಯಕ್ಷೆ ಮಂಜುಳಾ ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ದಿವಾಕರ್‌, ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ರೇಖಾ, ಶಿಲ್ಪ, ರಾಜಶೇಖರ ಹಾಗೂ ನೌಕರರಾದ ಶ್ರೀನಿಧಿ, ಮುರ್ಗೇಶ್‌, ಮೈಲಾರಿಗೌಡ ಇದ್ದರು.

ಹಾರಂಗಿ ಇಲಾಖೆ, ಸೆಸ್‌್ಕ ಕಚೇರಿ, ಡಿಟಿಎಂಎನ… ಪ್ರೌಢಶಾಲೆ, ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಿಸಿತು.

Follow Us:
Download App:
  • android
  • ios