Asianet Suvarna News Asianet Suvarna News

Hyderabad Gang Rape Case: ಶಾಸಕರ ಪುತ್ರ ಬಿಟ್ಟು ಉಳಿದ 4 ಅಪ್ರಾಪ್ತರನ್ನು ವಯಸ್ಕರಂತೆ ವಿಚಾರಣೆ

ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ಪರಿಗಣಿಸಲಾಗುವುದು ಎಂದು ಬಾಲಾಪರಾಧಿ ನ್ಯಾಯ ಮಂಡಳಿ ಆದೇಶ ನೀಡಿದೆ. 

hyderabad jubilee hills gang rape case 4 out of 5 minors to be tried as adults ash
Author
First Published Oct 1, 2022, 3:01 PM IST

ತೆಲಂಗಾಣ ರಾಜಧಾನಿ ಹೈದರಾಬಾದ್‌ನ (Hyderabad) ಜ್ಯುಬಿಲಿ ಹಿಲ್ಸ್ (Jubilee Hills) ಗ್ಯಾಂಗ್ ರೇಪ್‌ (Gang Rape) ಆರೋಪಿಗಳಲ್ಲಿ (Accused) ಐವರು ಅಪ್ರಾಪ್ತರ ಪೈಕಿ ನಾಲ್ವರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ಬಾಲಾಪರಾಧ ನ್ಯಾಯ ಮಂಡಳಿ (Juvenile Justice Board) ಶುಕ್ರವಾರ ಒಪ್ಪಿಗೆ ನೀಡಿದೆ. ಆದರೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಥಳೀಯ ಶಾಸಕರೊಬ್ಬರ ಪುತ್ರನನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗುವುದು ಎಂದು ತಿಳಿದುಬಂದಿದೆ. ಶಾಸಕರ ಪುತ್ರನ ವಿರುದ್ಧ ಮಹಿಳೆಯ ಮೇಲೆ ಹಲ್ಲೆ ಮಾಡುವುದು ಅಥವಾ ಆಕೆಯ ವಿರುದ್ಧ ಕ್ರಿಮಿನಲ್ ಬಲವನ್ನು ಬಳಸುವುದು ಕಡಿಮೆ ಗಂಭೀರವಾದ ಆರೋಪ ಎಂಬ ಕಾರಣಕ್ಕಾಗಿ ಅವರನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗುವುದು ಎಂದೂ ಹೇಳಲಾಗಿದೆ. ಇನ್ನು, ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ  (High Court) ಮೊರೆ ಹೋಗಲು ಆರೋಪಿಗಳು ಸ್ವತಂತ್ರರು ಎಂದೂ ಬಾಲಾಪರಾಧ ನ್ಯಾಯ ಮಂಡಳಿ ತಿಳಿಸಿದೆ.

"ಈ ನಾಲ್ವರು ಆರೋಪಿಗಳು (ಕಾನೂನಿಗೆ ಸಂಘರ್ಷದಲ್ಲಿರುವ ಮಕ್ಕಳು) ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೊಂದಿದ್ದಾರೆ ಹಾಗೂ ಅಪರಾಧದ ಪರಿಣಾಮಗಳನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು (ಆರೋಪಿಗಳು) ಮದ್ಯ ಅಥವಾ ಇತರ ಪದಾರ್ಥಗಳ ಪ್ರಭಾವಕ್ಕೆ ಒಳಗಾಗಿರಲಿಲ್ಲ. ಅಲ್ಲದೆ, ಅಪರಾಧ ಎಸಗಿಗಲು ಯಾವುದೇ ಬಲವಂತ ಅಥವಾ ಒತ್ತಡದ ಸಂದರ್ಭಗಳಿರಲಿಲ್ಲ" ಎಂದು ಬಾಲಾಪರಾಧ ನ್ಯಾಯ ಮಂಡಳಿಯ ಐದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮತ್ತು ಪ್ರಧಾನ ಮ್ಯಾಜಿಸ್ಟ್ರೇಟ್ ರಾಧಿಕಾ ಗವ್ವಾಲಾ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

ಇದನ್ನು ಓದಿ: Hyderabad gang-rape case: ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ವಿಚಾರಣೆ ನಡೆಸಲು ಪೊಲೀಸರ ಕೋರಿಕೆ

ಈ ಹಿನ್ನೆಲೆ, ಪ್ರಧಾನ ಮ್ಯಾಜಿಸ್ಟ್ರೇಟ್‌ ಈ ಗ್ಯಾಂಗ್‌ರೇಪ್‌ ಪ್ರಕರಣವನ್ನು ಮಕ್ಕಳ ನ್ಯಾಯಾಲಯ ಹಾಗೂ ನಾಂಪಲ್ಲಿಯ 12 ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಿದರು. 

ಘಟನೆಯ ವಿವರ..
ಮೇ 28 ರಂದು, ಐವರು ಅಪ್ರಾಪ್ತರು ಸೇರಿದಂತೆ 6 ಆರೋಪಿಗಳು 17 ವರ್ಷದ ಸಂತ್ರಸ್ಥೆಯನ್ನು ಜ್ಯುಬಿಲಿ ಹಿಲ್ಸ್‌ನ ಪಬ್‌ನಿಂದ ಕರೆದುಕೊಂಡು ಬಂಜಾರಾ ಹಿಲ್ಸ್‌ನ ಬೇಕರಿಗೆ ಭೇಟಿ ನೀಡಿದ್ದರು. ಮಾರ್ಗ ಮಧ್ಯೆ ಶಾಸಕರ ಪುತ್ರ ಸೇರಿದಂತೆ ಕೆಲ ಅಪ್ರಾಪ್ತರು ಕಿರುಕುಳ ನೀಡಿದ್ದಾರೆ. ನಂತರ ಶಾಸಕರ ಪುತ್ರ ಆ ಗುಂಪನ್ನು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ ನಂತರ,ಉಳಿದ ಆರೋಪಿಗಳು ಜ್ಯುಬಿಲಿ ಹಿಲ್ಸ್‌ನ ಪ್ರತ್ಯೇಕ ಸ್ಥಳಕ್ಕೆ ಟೊಯೋಟಾ ಇನ್ನೋವಾದಲ್ಲಿ ಕರೆದುಕೊಂಡು ಹೋದರು ಮತ್ತು ನಿಲ್ಲಿಸಿದ ವಾಹನದಲ್ಲಿ ಯುವತಿ ಮೇಲೆ ಸರದಿಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿತ್ತು.

ಇನ್ನು, ವಿಧಿವಿಜ್ಞಾನ ತಂಡವು (Forensic Team) ಕಾರಿನಿಂದ ವಶಪಡಿಸಿಕೊಂಡ ಮಾದರಿಗಳಲ್ಲಿ ಆರೋಪಿಯ ಡಿಎನ್ಎಯನ್ನು ಪತ್ತೆ ಮಾಡಿತ್ತು. ಬಳಿಕ, ಸುಮಾರು 2 ತಿಂಗಳ ಹಿಂದೆ ಸಲ್ಲಿಸಿದ ತನ್ನ ಅಂತಿಮ ವರದಿಯಲ್ಲಿ ಪೊಲೀಸರು ಐವರು ಆರೋಪಿಗಳ ಮೇಲೆ ಪೋಕ್ಸೋ (POCSO) ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಹಲ್ಲೆ, ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಈ ಆರೋಪಿಗಳಲ್ಲಿ - ಎಲ್ಲರೂ ಹೈದರಾಬಾದ್‌ನ ಪ್ರಭಾವಿ ಕುಟುಂಬಗಳಿಂದ ಬಂದವರಾಗಿದ್ದು ಮತ್ತು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ನಾಲ್ವರು ಆರೋಪಿಗಳು ಆ ಸಮಯದಲ್ಲಿ 16 ವರ್ಷ ವಯಸ್ಸಿನವರಾಗಿದ್ದರು ಮತ್ತು ಒಬ್ಬನಿಗೆ 17 ವರ್ಷವಾಗಿತ್ತು. ಇನ್ನೊಂದೆಡೆ, 6ನೇ ಆರೋಪಿಗೆ 18 ವರ್ಷ ವಯಸ್ಸಾಗಿದ್ದು, ಅವನ ಹೆಸರು ಸಾದುದ್ದೀನ್‌ ಅಹ್ಮದ್‌ ಎಂದು ಪೊಲೀಸರು ಮಾಹಿತಿ ನೀಡಿದ್ದರು. 

ಇದನ್ನೂ ಓದಿ: Hyderabad gang-rape case: ಸಂತ್ರಸ್ತೆಯ ವಿಡಿಯೋ ಸೋರಿಕೆ, ಬಿಜೆಪಿ MLA ಮೇಲೆ ಎಫ್‌ಐಆರ್‌

ಈ ತೀರ್ಮಾನಕ್ಕೆ ಬಂದಿದ್ದು ಹೇಗೆ..?
ಪ್ರಧಾನ ಮ್ಯಾಜಿಸ್ಟ್ರೇಟ್ ರಾಧಿಕಾ ಗವ್ವಾಲಾ, ಬಾಲಾಪರಾಧಿ ನ್ಯಾಯ ಮಂಡಳಿ ಸದಸ್ಯೆ ಮತ್ತು ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನ ಮನಶ್ಶಾಸ್ತ್ರಜ್ಞರೂ ಆಗಿದ್ದಾರೆ. ಅವರು ಐದು ಅಪ್ರಾಪ್ತ ವಯಸ್ಕರೊಂದಿಗೆ ಪ್ರತ್ಯೇಕವಾಗಿ ಸಂವಾದ ನಡೆಸಿ ಅಪರಾಧ ಎಸಗಲು ಅವರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ನಿರ್ಣಯಿಸಿದರು. ಹಾಗೂ, ಅವರು ಅಪರಾಧವನ್ನು ಮಾಡಿದ ಸಂದರ್ಭಗಳನ್ನು ಸಹ ಅವರು ಮೌಲ್ಯಮಾಪನ ಮಾಡಿದರು.
 

Follow Us:
Download App:
  • android
  • ios