ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ರಾಮನಗರದಲ್ಲಿ ಅಕ್ಟೋಬರ್ 16 ರಿಂದ 18ರವರೆಗೆ 'ಸುವರ್ಣ ಸಂಭ್ರಮ' ಆಯೋಜಿಸಲಾಗಿದೆ. ಈ ಮೂರು ದಿನಗಳ ಮೇಳದಲ್ಲಿ ಆಹಾರ, ಫ್ಯಾಷನ್, ಶಾಪಿಂಗ್ ಮತ್ತು ಮನರಂಜನಾ ಕಾರ್ಯಕ್ರಮಗಳು ಇರಲಿದ್ದು, ಪ್ರವೇಶ ಉಚಿತವಾಗಿದೆ. ಸ್ಟಾಲ್ ಬುಕಿಂಗ್‌ಗೂ ಅವಕಾಶ ಕಲ್ಪಿಸಲಾಗಿದೆ.
ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಂಸ್ಥೆಗಳು ರಾಮನಗರ ಜನತೆಗಾಗಿ ಆಯೋಜಿಸುತ್ತಿರುವ ಮೂರು ದಿನಗಳ ಲೈಫ್‌ಸ್ಟೈಲ್, ಫ್ಯಾಷನ್ ಹಾಗೂ ಫುಡ್ ಫೆಸ್ಟಿವಲ್ 'ಸುವರ್ಣ ಸಂಭ್ರಮ'ಕ್ಕೆ ಜಿಲ್ಲೆಯ ಎಲ್ಲಾ ವರ್ಗದ ಜನರಿಗೆ ಆತ್ಮೀಯ ಸ್ವಾಗತ. ಅಕ್ಟೋಬರ್ 16, 17 ಮತ್ತು 18 ರಂದು ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಸಂಭ್ರಮಕ್ಕೆ ಪ್ರವೇಶ ಉಚಿತವಾಗಿದೆ.
ರಾಮನಗರದಲ್ಲಿ ‘ಸುವರ್ಣ ಸಂಭ್ರಮ’
ಈ ಮೇಳದಲ್ಲಿ ಕರ್ನಾಟಕದ ನೆಚ್ಚಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯುವ ಅವಕಾಶವಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ಆಹಾರ ಪದಾರ್ಥಗಳ ಸ್ಟಾಲ್‌ಗಳು, ಶಾಪಿಂಗ್‌ಗೆ ಅನುಕೂಲವಾಗುವಂತೆ ವೈವಿಧ್ಯಮಯ ಫ್ಯಾಷನ್ ವಸ್ತುಗಳು, ಬಟ್ಟೆ, ಆಭರಣ ಹಾಗೂ ಜೀವನಶೈಲಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಜೊತೆಗೆ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿ ಪ್ರದರ್ಶನಗಳು ಹಾಗೂ ಕುಟುಂಬ ಸಹಿತ ಆನಂದಿಸಬಹುದಾದ ವಿಶೇಷ ಆಕರ್ಷಣೆಗಳನ್ನು ಏರ್ಪಡಿಸಲಾಗಿದೆ.
ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳು ಹಾಗು ಸ್ಟಾಲ್ ನಿರ್ವಾಹಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಟಾಲ್ ಬುಕಿಂಗ್ ಮಾಡಲು 99161 88559, 99729 33559 ಹಾಗೂ 74113 24744 ಸಂಖ್ಯೆಗಳಿಗೆ ಸಂಪರ್ಕಿಸಬಹುದು. ರಾಮನಗರ ಜನತೆಯ ಉತ್ಸಾಹ, ಶಾಪಿಂಗ್ ಹಾಗು ರುಚಿಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಈ ಸಂಭ್ರಮವನ್ನು ಏರ್ಪಡಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾವಹಿಸುವಂತೆ ಜನರಿಗೆ ಮುಕ್ತ ಆಹ್ವಾನ ನೀಡಲಾಗಿದೆ.



