MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 'ಯಾರ್ ರೀ ಅಲ್ಲಿರೋದು, ನಂದೊಂದು ಫೋಟೋ ತೆಗೇರಿ!' ಎನ್ನುವಂತೆ ಪೋಸ್ ಕೊಟ್ಟ ನಾಗರಹಾವು!

'ಯಾರ್ ರೀ ಅಲ್ಲಿರೋದು, ನಂದೊಂದು ಫೋಟೋ ತೆಗೇರಿ!' ಎನ್ನುವಂತೆ ಪೋಸ್ ಕೊಟ್ಟ ನಾಗರಹಾವು!

ಮಡಿಕೇರಿಯ ಮನೆಯೊಂದರ ಕಾಂಪೌಂಡ್‌ನಲ್ಲಿ ಬೃಹತ್ ಗಾತ್ರದ ಗೋಧಿ ಬಣ್ಣದ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಉರಗ ಸಂರಕ್ಷಕ ಯದುಕುಮಾರ್ ಅವರು ಹಾವನ್ನು ರಕ್ಷಿಸುವಾಗ ಅದು ಕ್ಯಾಮೆರಾಗೆ ಪೋಸ್ ನೀಡಿದಂತೆ ಹೆಡೆ ಬಿಚ್ಚಿ ನಿಂತಿದ್ದ ದೃಶ್ಯ ವೈರಲ್ ಆಗಿದೆ.

1 Min read
Author : Sathish Kumar KH
Published : Oct 01 2026, 03:49 PM IST
Share this Photo Gallery
  • FB
  • TW
  • Linkdin
  • Whatsapp
14
ಗೋಧಿ ನಾಗರಹಾವು
Image Credit : Asianet News

ಗೋಧಿ ನಾಗರಹಾವು

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಬೃಹತ್ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಅದನ್ನು ರಕ್ಷಣೆ ಮಾಡುವ ವೇಳೆ ನಡೆದ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾನು ವಿಷಕಾರಿ ಹಾವು ಎಂದು ತೋರಿಸಲು ಬುಸುಗುಟ್ಟಿದರೂ, ಕ್ಯಾಮೆರಾ ಕಣ್ಣಿಗೆ ಅದು ಯಾವುದೋ ಫೋಟೋಶೂಟ್‌ಗೆ ಪೋಸ್ ನೀಡಿದಂತೆ ಭಾಸವಾಗುತ್ತಿತ್ತು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಏನಿದು ಘಟನೆ?
Image Credit : Asianet News

ಏನಿದು ಘಟನೆ?

ಮಡಿಕೇರಿಯ ದಿಲೀಪ್ ಪರಿವಾರ ಎಂಬುವರ ಮನೆಯ ಕಾಂಪೌಂಡ್ ಮತ್ತು ಗಿಡಗಳ ಮಧ್ಯೆ ಬೃಹತ್ ಗಾತ್ರದ ಗೋಧಿ ಬಣ್ಣದ ನಾಗರಹಾವೊಂದು ಓಡಾಡುತ್ತಿತ್ತು. ಜನವಸತಿ ಪ್ರದೇಶವಾಗಿರುವುದರಿಂದ ಮಕ್ಕಳು ಮತ್ತು ಸಾರ್ವಜನಿಕರು ಓಡಾಡಲು ಭಯಪಡುವಂತಾಗಿತ್ತು. ಹಾವು ಕಚ್ಚುವ ಆತಂಕದಿಂದ ಕುಟುಂಬಸ್ಥರು ಕೂಡಲೇ ಉರಗ ಸಂರಕ್ಷಕ ಯದುಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.

Related Articles

Related image1
ಇದೇ ನೋಡಿ ಭಾರತದ 'ಹಾವುಗಳ ಗ್ರಾಮ'; ನಾಗರಹಾವು ಮನೆಗೆ ಬಂದಾಗ ತಂಗಲು ವಿಶೇಷ ಮೂಲೆಗಳೂ ಇವೆ!
Related image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
34
ಫೋಟೋಗೆ ಪೋಸ್ ಕೊಟ್ಟ ನಾಗ!
Image Credit : Asianet News

ಫೋಟೋಗೆ ಪೋಸ್ ಕೊಟ್ಟ ನಾಗ!

ಸ್ಥಳಕ್ಕೆ ಆಗಮಿಸಿದ ಉರಗ ಸಂರಕ್ಷಕ ಯದುಕುಮಾರ್, ಅತ್ಯಂತ ಕೌಶಲ್ಯದಿಂದ ಮನೆಯ ಪಾಟ್‌ಗಳ ನಡುವೆ ಅವಿತುಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಹಾವನ್ನು ಡಬ್ಬಿಯಲ್ಲಿ ಹಾಕುವ ಮುನ್ನ ಸುರಕ್ಷಿತವಾಗಿ ನೆಲದ ಮೇಲೆ ಬಿಟ್ಟಾಗ, ಆ ನಾಗರಹಾವು ಬುಸುಗುಡುತ್ತಾ ತನ್ನ ಅಂಗೈಯಗಲದಷ್ಟು ಹೆಡೆಯನ್ನು ಬಿಚ್ಚಿ ನಿಂತಿತು. ಆ ಕ್ಷಣದಲ್ಲಿ ಅದು ಎದುರಿಗೆ ಇದ್ದವರನ್ನು ಹೆದರಿಸಲು ಪ್ರಯತ್ನಿಸುತ್ತಿತ್ತಾದರೂ, ನೋಡಲು ಮಾತ್ರ ಯಾವುದೋ ಮಾಡೆಲ್ ಫೋಟೋಗೆ ಪೋಸ್ ನೀಡಿದಂತೆ ಕಂಡುಬಂತು.

44
ಅರಣ್ಯ ಇಲಾಖೆಗೆ ಹಸ್ತಾಂತರ:
Image Credit : Asianet News

ಅರಣ್ಯ ಇಲಾಖೆಗೆ ಹಸ್ತಾಂತರ:

ಸಾರ್ವಜನಿಕರಿಗೆ ಆತಂಕ ತಂದಿದ್ದ ಈ ಬೃಹತ್ ನಾಗರಹಾವನ್ನು ಯದುಕುಮಾರ್ ಅವರು ಹಾನಿಯಾಗದಂತೆ ರಕ್ಷಣೆ ಮಾಡಿ, ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅಧಿಕಾರಿಗಳು ಈ ಹಾವನ್ನು ಜನವಸತಿ ಇಲ್ಲದ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹಾವು
ಕೊಡಗು
ಕರ್ನಾಟಕ ಸುದ್ದಿ
 

Latest Videos
Recommended Stories
Recommended image1
ಮೈಸೂರು ದಸರಾಗೆ ಕೌಂಟ್‌ಡೌನ್ ಶುರು, ಈ ಬಾರಿ ಅಡಗಿರುವ ಅಚ್ಚರಿಗಳೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
Recommended image2
ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಬೂಸ್ಟ್: 19ರ ಪೈಕಿ 11 ನಿಲ್ದಾಣಗಳ ಅಂತಿಮ ಪಟ್ಟಿ ಸಿದ್ಧ!
Recommended image3
ಮೇಡಂ ನಾನು ಗೇ, ಮಹಿಳೆಯರ ಪಿಂಕ್ ರ‍್ಯಾಪಿಡೋ ರೈಡ್ ಬುಕ್ ಮಾಡಿದ ಯುವತಿಗೆ ಬಿಗ್ ಶಾಕ್
Related Stories
Recommended image1
ಇದೇ ನೋಡಿ ಭಾರತದ 'ಹಾವುಗಳ ಗ್ರಾಮ'; ನಾಗರಹಾವು ಮನೆಗೆ ಬಂದಾಗ ತಂಗಲು ವಿಶೇಷ ಮೂಲೆಗಳೂ ಇವೆ!
Recommended image2
100 ವರ್ಷದ ಸಾಧನೆ: ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡುಹಿಡಿದ ಬೆಂಗಳೂರು ಐಐಎಸ್‌ಸಿ ವಿಜ್ಞಾನಿಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved