ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ಶಂಕೆ: ಜೋಸೆಫ್‌ ಹೂವರ್‌ ಆರೋಪ

ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಸಾವನ್ನಪ್ಪಿದ್ದ ಹುಲಿ ಹಾಗೂ ಚಿರತೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯ ಅರಣ್ಯಾಧಿಕಾರಿ ಪುಟ್ಟರಾಜು ಗುಟ್ಟಾಗಿ ಹೂತಿದ್ದಾರೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್‌ ಹೂವರ್‌ ಗಂಭೀರ ಆರೋಪ ಮಾಡಿದ್ದಾರೆ. 

Suspected poaching in Bandipur Tiger Reserve Says Joseph Hoovar gvd

ಗುಂಡ್ಲುಪೇಟೆ (ಜೂ.17): ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಸಾವನ್ನಪ್ಪಿದ್ದ ಹುಲಿ ಹಾಗೂ ಚಿರತೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯ ಅರಣ್ಯಾಧಿಕಾರಿ ಪುಟ್ಟರಾಜು ಗುಟ್ಟಾಗಿ ಹೂತಿದ್ದಾರೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್‌ ಹೂವರ್‌ ಗಂಭೀರ ಆರೋಪ ಮಾಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉರುಳಿಗೆ ಸಿಕ್ಕಿಬಿದ್ದಿದ್ದ ಹುಲಿ ಮತ್ತು ಅಂಗಚ್ಛೇಧಗೊಂಡ ಚಿರತೆಯ ಶವವನ್ನು ವಲಯ ಅರಣ್ಯಾಧಿಕಾರಿ ಪುಟ್ಟರಾಜು ಗುಟ್ಟಾಗಿ ಹೂತಿಟ್ಟಿದ್ದರು. 

ಈ ವಿಚಾರ ನಮ್ಮ ಗಮನಕ್ಕೆ ಬಂದಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಜೊತೆಗೆ 2022ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಕೂಡ ಬರೆಯಲಾಗಿದ್ದರೂ ತನಿಖೆ ಮಾತ್ರಆಗಿಲ್ಲ ಎಂದು ಆರೋಪಿಸಿದರು. ದೇಶದ ಪ್ರಮುಖ ವನ್ಯಜೀವಿ ಹುಲಿ ಮತ್ತು ಚಿರತೆಯ ಶವಗಳನ್ನು ರಹಸ್ಯವಾಗಿ ಹೂಳುವಲ್ಲಿ ಭಾಗಿಯಾಗಿರುವ ಎಲ್ಲರ ವಿವರಗಳನ್ನು ನಾವು ಒದಗಿಸಿದ್ದೇವೆ. ಚಿರತೆಯ ತಲೆ ಮತ್ತು ಪಾದಗಳನ್ನು ಕಳ್ಳ ಬೇಟೆಗಾರರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ ಎಂದರು. 

ಸರ್ಕಾರಕ್ಕೆ ಹೊರೆಯಾದರೂ ಕೊಟ್ಟಮಾತು ಉಳಿಸಿಕೊಳ್ಳುತ್ತೇವೆ: ಸಚಿವ ವೆಂಕಟೇಶ್‌

ಆದರೆ, ಇಂಥ ಪ್ರಕರಣದಲ್ಲಿ ವನ್ಯಜೀವಿಗಳ ಹೂತು ಹಾಕಿದ ವಲಯ ಅರಣ್ಯಾಧಿಕಾರಿ ಮೇಲೆ ಕ್ರಮ ಕೈಗೊಂಡಿಲ್ಲ. ಬದಲಾಗಿ ಮೊಳೆಯೂರು ಅರಣ್ಯ ವೀಕ್ಷಕರು ಮಾತ್ರ ಘಟನೆಯ ಬಲಿಪಶುಗಳಾಗಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಹುಲಿ ಮತ್ತು ಚಿರತೆಯ ರಹಸ್ಯವಾಗಿ ಹೂತಿದ್ದ ಮಾಹಿತಿ ಹೊರ ಬರುತ್ತಿದ್ದಂತೆ ಘಟನೆಯ ಪ್ರಮುಖ ಸಾಕ್ಷಿಗಳಾಗಿದ್ದ ಅರಣ್ಯ ವೀಕ್ಷಕರನ್ನು ವಲಯ ಅರಣ್ಯಾಧಿಕಾರಿ ಪುಟ್ಟರಾಜು ಕೆಲಸದಿಂದ ವಜಾಗೊಳಿಸಿದ್ದಾರೆ. ಕಳ್ಳತನದ ಆರೋಪ ಹೊರಿಸಿ 6 ಮಂದಿಯನ್ನು ವಜಾ ಮಾಡಿದ್ದು, ಕಾಡು ಕಾಯುವವರನ್ನು ಬಲಿಪಶು ಮಾಡಿದ್ದಾರೆ ಎಂದು ಕಿಡಿಕಾರಿದರು.

ಪರೀಕ್ಷೆ ನಡೆಸಲಿ: ಮೊಳೆಯೂರು ವಲಯ ಅರಣ್ಯಾಧಿಕಾರಿ ಪುಟ್ಟರಾಜು, ಸಾಕ್ಷಿದಾರರು ಮತ್ತು ನಮ್ಮನ್ನು ನಾರ್ಕೋ ಅನಾಲಿಸಿಸ್‌ ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಸರ್ಕಾರ ಹೊರತೆಗೆಯಬೇಕು. ಹುಲಿ ಮತ್ತು ಚಿರತೆ ಶವಗಳನ್ನು ಅಕ್ರಮವಾಗಿ ಹೂತು ಹಾಕಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಘಟನೆ ವಿವರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ವಲಯದಲ್ಲಿ 2019-20ರಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಹುಲಿ, ಬೇಟೆಗಾರರು ಕೊಂದಿದ್ದ ಚಿರತೆಯನ್ನು ಮೊಳೆಯೂರು ವಲಯ ಅರಣ್ಯಾಧಿಕಾರಿ ಪುಟ್ಟರಾಜು ಮೇಲಾಧಿಕಾರಿಗಳ ಗಮನಕ್ಕೆ ತರದೇ ರಹಸ್ಯವಾಗಿ ವಿಲೇವಾರಿ ಮಾಡಿದ್ದಾರೆ. ಜೊತೆಗೆ ಘಟನೆಗೆ ಸಾಕ್ಷಿಯಾಗಿದ್ದ 6 ಮಂದಿ ಅರಣ್ಯ ವೀಕ್ಷಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಸಂಬಂಧ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ಸಂಪರ್ಕಿಸಿತರಾದರೂ ಅವರು ಕರೆಗೆ ಸ್ವೀಕರಿಸಲಿಲ್ಲ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ: ಶಾಸಕ ಗಣೇಶ್‌ ಪ್ರಸಾದ್‌

ಅರಣ್ಯ ಸಂರಕ್ಷಣಾಧಿಕಾರಿ ತನಿಖೆ ಕೈಗೊಂಡಿಲ್ಲ: ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ರಮೇಶ್‌ಕುಮಾರ್‌ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಬಗ್ಗೆ ಇಲಾಖೆ ತನಿಖೆ ನಡೆದು ವರದಿ ಸಲ್ಲಿಸಿದ್ದರೂ ಕ್ರಮವಾಗಿಲ್ಲ ಎಂದು ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್‌ ಹೂವರ್‌ ಆರೋಪಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿ, ಸಿಸಿಎಫ್‌ರೊಬ್ಬರು ಇಲಾಖೆ ತನಿಖೆ ನಡೆಸಿ ವರದಿ ನೀಡಿದ್ದಾರೆ. ವರದಿಯಲ್ಲಿರುವ ಅಂಶಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವಿಲ್ಲ. ಹಾಗಾಗಿ, ತನಿಖಾ ವರದಿ ಆಧಾರಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಹಿಂದಿನ ಸಿಎಫ್‌ಗಳಲ್ಲಿ ಕೆಲವರು ಬಂಡೀಪುರ ಹೆಸರನ್ನೇ ಹಾಳು ಮಾಡಿದ್ದಾರೆ. ಹಾಗಾಗಿ, ಬಂಡೀಪುರಕ್ಕೆ ಒಳ್ಳೆ ಅಧಿಕಾರಿ ನೇಮಕ ಮಾಡುವ ಮೂಲಕ ಬಂಡೀಪುರ ಉಳಿಸಿ ಎಂದರು.

Latest Videos
Follow Us:
Download App:
  • android
  • ios