ಸರ್ಕಾರಕ್ಕೆ ಹೊರೆಯಾದರೂ ಕೊಟ್ಟಮಾತು ಉಳಿಸಿಕೊಳ್ಳುತ್ತೇವೆ: ಸಚಿವ ವೆಂಕಟೇಶ್
ಐದು ಕಾರ್ಯಕ್ರಮ ಅನುಷ್ಠಾನ ಮಾಡ್ತಕ್ಕಂತ ಸರ್ಕಾರಕ್ಕೆ ಎಷ್ಟೇ ಹೊರೆಯಾದರೂ ಪರವಾಗಿಲ್ಲ ನಾವು ಜನರಿಗೆ ಮಾತು ಕೊಟ್ಟಿದ್ದೇವೆ ಜನರಿಗೆ ಕೊಟ್ಟಂತ ಮಾತು ಉಳಿಸಿಕೊಳುಳುತ್ತೇವೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಹೇಳಿದರು.
ಚಾಮರಾಜನಗರ (ಜೂ.12): ಐದು ಕಾರ್ಯಕ್ರಮ ಅನುಷ್ಠಾನ ಮಾಡ್ತಕ್ಕಂತ ಸರ್ಕಾರಕ್ಕೆ ಎಷ್ಟೇ ಹೊರೆಯಾದರೂ ಪರವಾಗಿಲ್ಲ ನಾವು ಜನರಿಗೆ ಮಾತು ಕೊಟ್ಟಿದ್ದೇವೆ ಜನರಿಗೆ ಕೊಟ್ಟಂತ ಮಾತು ಉಳಿಸಿಕೊಳುಳುತ್ತೇವೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಹೇಳಿದರು. ನಗರದ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಆಯೋಜಿಸಲಾಗಿರುವ ಕರ್ನಾಟಕ ರಾಜ್ಯಾದ್ಯಂತ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಘೋಷಣೆಗಳನ್ನು ಅನುಷ್ಠಾನ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆ ಕೊಟ್ಟಿದ್ದಾರೆ. ಸುಳ್ಳು ಹೇಳಿ ಓಟು ಹಾಕಿಸಿಕೊಂಡಿದ್ದಾರೆ ಎಂದು ಹೇಳಿ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಮಾಡಿದ ಐದು ಘೋಷಣೆಯನ್ನು ಇವತ್ತೇ ಮಾಡಿ ಇವತ್ತೇ ಮಾಡಿ ಎನ್ನುತ್ತಾ ಬಹಳಷ್ಟುಜನ ವಿರೋಧ ಪಕ್ಷದವರು ಒತ್ತಾಯ ಮಾಡುತ್ತಿದ್ದಾರೆ. ವಿರೋಧ ಪಕ್ಷದವರನ್ನು ಒಂದು ಪ್ರಶ್ನೆ ಕೇಳುತ್ತೇನೆ. ನಾವು ಯಾರಿಗೆ ಕೊಡಬೇಕು ಎಂದು ತೀರ್ಮಾನ ಮಾಡದೇ ಯಾರಿಗೆ ಕೊಡೋದು? ಯಾರಿಗೆ ಕೊಡಬೇಕು ಎನ್ನುವುದು ಗೊತ್ತಾಗಬೇಕಲ್ಲ? ಡಿಗ್ರಿ ಮಾಡಿರುವವರು ಯಾರು?, ಮನೆ ಮಹಿಳೆಯರು ಯಾರು? ಇವೆಲ್ಲಾ ತೀರ್ಮಾನವಾಗಬೇಕಲ್ಲ, ಅದೆಲ್ಲ ತೀರ್ಮಾನವಾದ ಮೇಲೆ ತಾನೇ ನಾವು ಜನಕ್ಕೆ ಕೊಡಬೇಕು ಎಂದರು.
ಪಿಯು ಫೇಲ್ ಅಲ್ಲ, ನ್ಯಾಷನಲ್ ಲಾ ಸ್ಕೂಲಲ್ಲಿ ಓದಿದವನು: ಸಚಿವ ಪ್ರಿಯಾಂಕ್ ಖರ್ಗೆ
ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನ ಮಾಡಿ, ಅನುಷ್ಠಾನ ಮಾಡಲು ಈಗಾಗಲೇ ಕ್ರಮ ಕೈಗೊಂಡು ಮೊದಲನೇಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದರು. ಈ ಯೋಜನೆಗಳು ಬಡವರಿಗಾಗಿ ಮಾಡಿರುವಂತಹ ಕಾರ್ಯಕ್ರಮ ಬಡವರಿಗೆ ಸಹಾಯವಾಗಲಿ ಅವರ ಬದುಕಿಗೆ ಸಹಾಯವಾಗಬೇಕು ಎಂದು ಮಾಡಿದ್ದೇವೆ. ನಿಮ್ಮ ಕಷ್ಠದಲ್ಲಿ ಸರ್ಕಾರ ಭಾಗಿಯಾಗಬೇಕು. ನಿಮ್ಮ ಕಷ್ಠ ಕಡಿಮೆ ಮಾಡಬೇಕು ಎಂಬ ದೃಷ್ಠಿಯಿಂದ ಈ ಕಾರ್ಯಕ್ರಮಗಳು ಜಾರಿಯಾಗಿವೆ ಎಂದರು.
ರಾಜ್ಯ ಸರ್ಕಾರ ದೇಶದಲ್ಲೇ ಮಾದರಿ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಗೆ ಉಚಿತ ಬಸ್ ಶಕ್ತಿ ಯೋಜನೆಯನ್ನು ಜಾರಿ ಮಾಡಿ ದೇಶದಲ್ಲೇ ಮಾದರಿ ಸರ್ಕಾರವಾಗಿದೆ. ಕರ್ನಾಟಕ ಸರ್ಕಾರ ಮೊದಲನೇಯದಾಗಿ ಶಕ್ತಿ ಯೋಜನೆಯನ್ನು ಸಂಪೂರ್ಣವಾಗಿ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮವಾಗಿದೆ. ಶಕ್ತಿ ಯೋಜನೆಯನ್ನು ಬೇರೆ ಯಾವ ರಾಜ್ಯದಲ್ಲೂ ಜಾರಿ ಮಾಡಿಲ್ಲ ಎಂದರು. ನಮ್ಮ ರಾಜ್ಯದ ಎಲ್ಲಾ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಡೀ ರಾಜ್ಯದಲ್ಲಿ ವೊಲ್ವೊ ಮತ್ತು ಎ.ಸಿ ಬಸ್ ಬಿಟ್ಟು ಎಕ್ಸಕ್‌ಪ್ರೆಸ್ ಬಸ್ ಸೇರಿದಂತೆ ರಾಜ್ಯದಲ್ಲಿ ಉಚಿತವಾಗಿ ಓಡಾಡುವ ಅವಕಾಶವನ್ನು ಮಾಡಿದ್ದೇವೆ. ನಾವು ನಿಮಗೆ ಕೊಟ್ಟಂತ ವಾಗ್ದಾನ ಇದು ಎಂದರು.
ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಇಡೀ ರಾಜ್ಯದ ಒಳಗೆ ಎಲ್ಲಾ ಕಡೆ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಡುತ್ತೇವೆ. ವಾಗ್ದಾನದ ಮೊದಲ ಹೆಜ್ಜೆ ಇದು ಎಂದರು. ಕರ್ನಾಟಕ ರಾಜ್ಯದ ಸಾರಿಗೆ ಬಸ್ಸಿನಲ್ಲಿ ಇಡೀ ರಾಜ್ಯಾದ್ಯಂತ ಓಡಾಡಲು ಅವಕಾಶ ಕಲ್ಪಿಸಿದೆ. ಬೆಂಗಳೂರಿನಲ್ಲಿ ಸಿಎಂ ಶಕ್ತಿ ಯೋಜನೆ ಉದ್ಘಾಟಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರಗಳಲ್ಲಿ ಶಾಸಕರು ಯೋಜನೆ ಆರಂಭಿಸಿದ್ದಾರೆ ಎಂದರು. ಚುನಾವಣೆ ವೇಳೆ ನಾವು ನಿಮಗೆ ಕೊಟ್ಟಂತ ವಾಗ್ದಾನ ಐದರಲ್ಲಿ ಮೊದಲನೇಯದು ಇದು. ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಾರೆ. ಈ ಸೌಲಭ್ಯ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಸರ್ಕಾರಿ ಭೂಮಿ ಅರ್ಹರಿಗೆ ಸಿಗಬೇಕು: ಸಚಿವ ದಿನೇಶ್ ಗುಂಡೂರಾವ್
ಪ್ರಸ್ತುತ ಆಧಾರ್ ಕಾರ್ಡ್, ಓಟರ್ ಐಡಿಕಾರ್ಡ್, ಪೋಟೋ ಇರಬೇಕು, ರಾಜ್ಯದ ಮಹಿಳೆಯಾಗಿದ್ದಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು. ಸ್ಮಾರ್ಟ್ ಕಾರ್ಡ್ ಪಡೆದು ರಾಜ್ಯದ ಹೊರಗೆ ಹೋಗಲಿಕ್ಕೆ ಆಗುವುದಿಲ್ಲ, ಈ ರಾಜ್ಯದ ಒಳಗೆ ಎಲ್ಲಿ ಬೇಕಾದರೂ ಓಡಾಡಿ. ಇದು ವಿದ್ಯಾರ್ಥಿನಿಯರಿಗೂ ಅನ್ವಹಿಸುತ್ತದೆ. ಎಲ್ಲಾ ಮಹಿಳೆಯರಿಗೂ ಇದೊಂದು ಸಂತೋಷದ ಸಂಗತಿ ಎಂದುಕೊಂಡಿದ್ದೇನೆ. ಎಲ್ಲರಿಗೂ ಸರ್ಕಾರದ ಪರವಾಗಿ ಶುಭಾಶಯ ಹೇಳಿದರು. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, 200 ಯೂನಿಟ್ ಕರೆಂಟ್ ಉಚಿತ, ಯುವ ನಿಧಿ, ಅನ್ನಭಾಗ್ಯಯೋಜನೆ ಸೇರಿತ್ತು. ಅದರಲ್ಲಿ ಒಂದು ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ್ದೇವೆ. ಇನ್ನೂ 4 ಕಾರ್ಯಕ್ರಮದಲ್ಲಿ 2 ಕಾರ್ಯಕ್ರಮ ಜುಲೈ 1ರಿಂದ ಚಾಲನೆಯಾಗಲಿದೆ. ಅದು ಅನ್ನಭಾಗ್ಯ ಯೋಜನೆ ಮತ್ತು 200 ಯೂನಿಟ್ ಕರೆಂಟ್ ಉಚಿತ ಕೊಡುವುದಾಗಿದೆ ಎಂದರು.