ಶಿವಮೊಗ್ಗ: ಗಾಯಗೊಂಡಿದ್ದ ಕಾಳಿಂಗ ಸರ್ಪಕ್ಕೆ ಶಸ್ತ್ರಚಿಕಿತ್ಸೆ

ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಗುಡ್ಡೇ​ಕೇ​ರಿ​ಯ ಕಾಳಿಂಗ ಫೌಂಡೇಶನ್‌ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನೀಡಿ ಕಾಳಿಂಗ ಫೌಂಡೇಶನ್‌ನಲ್ಲಿಯೇ ಅನಸ್ತೇಷಿಯ ಕೊಟ್ಟು ಕಾಳಿಂಗ ಸರ್ಪಕ್ಕೆ ಆರೈಕೆ ಮಾಡಲಾಗಿದೆ. 

Surgery for injured Snake in Shivamogga grg

ಶಿವಮೊಗ್ಗ(ಆ.05):  ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ, ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಕಾಡಿಗೆ ಬಿಟ್ಟಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ತಾಲೂ​ಕಿನ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಗುಡ್ಡೇ​ಕೇ​ರಿ​ಯ ಕಾಳಿಂಗ ಫೌಂಡೇಶನ್‌ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ಬಳಿಕ ಶಸ್ತ್ರಚಿಕಿತ್ಸೆ ನೀಡಿ ಕಾಳಿಂಗ ಫೌಂಡೇಶನ್‌ನಲ್ಲಿಯೇ ಅನಸ್ತೇಷಿಯ ಕೊಟ್ಟು ಕಾಳಿಂಗ ಸರ್ಪಕ್ಕೆ ಆರೈಕೆ ಮಾಡಲಾಗಿದೆ. ಗಾಯ ಮಾಗುವ ವಾತಾವರಣ ಸೃಷ್ಟಿಸಿ, ನಿತ್ಯ ಪರಿಶೀಲನೆ ನಡೆಸಲಾಯಿತು. ಮೂರ್ನಾಲ್ಕು ದಿನಗಳ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಗಿದೆ. ಈ ಸಂಬಂಧ ವಿಡಿಯೋವನ್ನು ಕಾಳಿಂಗ ಫೌಂಡೇಶನ್‌ ತನ್ನ ಇ​ನ್‌​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ. ಜನರು ಕಾಳಿಂಗ ಫೌಂಡೇಶನ್‌ ಮತ್ತು ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಎಂದು ಪಶುವೈದ್ಯ ಯುವರಾಜ ಹೆಗಡೆ ಮೇಗರವಳ್ಳಿ ತಿಳಿಸಿದರು.

ಶಿವಮೊಗ್ಗ: ವಿಕಲಚೇತನ ಕಲ್ಯಾಣಾಧಿಕಾರಿ ಕಚೇರಿಗೆ ನುಗ್ಗಿ ಪತ್ನಿಗೆ ಥಳಿಸಿದ ಪತಿ!

ಮನೆಯೊಳಗೆ ಹಾವು ಸೇರಿದ್ದರೆ ಮಾತ್ರ ಅದನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ. ಆದರೆ, ಕಮ್ಮರಡಿಯಲ್ಲಿ ಮನೆಯ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆವು. ಆಗ ಕಾಳಿಂಗ ಸರ್ಪಕ್ಕೆ ಗಾಯವಾಗಿರುವ ವಿಚಾರ ಗೊತ್ತಾಯಿತು. ಕೂಡಲೇ ಅದನ್ನು ಹಿಡಿದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಲಾಯಿತು. ಮರುದಿನ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಕಾಳಿಂಗ ಫೌಂಡೇಶನ್‌ ವ್ಯವಸ್ಥಾಪಕ ಪ್ರಶಾಂತ್‌ ಮಾಹಿತಿ ನೀಡಿದರು.

ಏನಿದು ಕಾಳಿಂಗ ಫೌಂಡೇಶನ್ಸ್‌?:

ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಕಾಳಿಂಗ ಸೆಂಟರ್‌ ಫಾರ್‌ ರೈನ್ಫಾರೆಸ್ಟ್‌ ಇಕಾಲಜಿ ಎಂಬ ಸಂಸ್ಥೆ ಇದೆ. ಹರ್ಪಿಟಾಲಜಿಸ್ಟ್‌ ಪಿ.ಗೌರಿ ಶಂಕರ್‌ ಅವರು ಈ ಸಂಸ್ಥೆ ಆರಂಭಿಸಿದ್ದು, ಕಾಳಿಂಗ ಸರ್ಪದ ಕುರಿತು ಸಂಶೋಧನೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆಸಕ್ತರು ಸಂಸ್ಥೆಗೆ ಭೇಟಿ ನೀಡಿ ಕಾಳಿಂಗ ಸರ್ಪದ ಕುರಿತು ಕುತೂಹಲಕರ ಮಾಹಿತಿ ಪಡೆಯಬಹುದಾಗಿದೆ.

Latest Videos
Follow Us:
Download App:
  • android
  • ios