ಜಿಟಿಡಿ ಪತ್ನಿ ಚುನಾವಣೆ ಸ್ಪರ್ಧೆ ಬಗ್ಗೆ ಜೋರಾದ ಚರ್ಚೆ
- ಜಿಟಿ ದೇವೇಗೌಡ ಪತ್ನಿ ಚುನಾವಣಾ ಕಣಕ್ಕೆ ಇಳಿಸುವಂತೆ ಆಗ್ರಹ
- ಲಲಿತಾ ದೇವೇಗೌಡರು ಜಿಪಂ ಚುನಾವಣೆಗೆ ಸ್ಪರ್ಧಿಸಲು ಆಗ್ರಹ
- ಹನಗೋಡು ಜಿಪಂ ಕ್ಷೇತ್ರದಿಂದ ಕಣಕ್ಕಳಿಸುವಂತೆ ಒತ್ತಾಯ
ಹುಣಸೂರು (ಜು.14): ಹನಗೋಡು ಕ್ಷೇತ್ರದವರು ಲಲಿತಾ ದೇವೇಗೌಡರನ್ನು ಹನಗೋಡು ಜಿಪಂ ಕ್ಷೇತ್ರದಿಂದ ಕಣಕ್ಕಳಿಸುವಂತೆ ಒತ್ತಾಯಿಸಿದರು.
ಈ ಬಾರಿಯ ಜಿಪಂ ಚುನಾವಣೆಯಲ್ಲಿ ನಿಲ್ಲಿಸಬೇಕಾ ಬೇಡವಾ ಎನ್ನುವ ಬಗ್ಗೆ ಆಗಸ್ಟ್ 15ರ ನಂತರ ತೀರ್ಮಾನ ಮಾಡುವುದಾಗಿ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರಿನ ಬೋಗಾದಿಯಲ್ಲಿರುವ ನಿವಾಸಕ್ಕೆ ಹನಗೋಡು ಜಿಪಂ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಒತ್ತಾಯಿಸಿ ಮನವಿ ಮಾಡಿದರು.
'ಜನರ ಅಭಿಪ್ರಾಯ ಕೇಳಿ ಯಾವ ಪಕ್ಷ ಸೇರಬೇಕೆಂದು ನಿರ್ಧಾರ: ಬಿಜೆಪಿ ಸೇರಿ ಸೋತಿದ್ದು ಸಾಕು' .
ಇದಕ್ಕೆ ಸ್ಪಂದಿಸಿದ ಶಾಸಕ ಜಿಟಿ ದೇವೇಗೌಡ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹನಗೋಡು ಕ್ಷೇತ್ರ ನನ್ನ ತವರೂರು ಎಂದು ಘೋಷಿಸಿಕೊಂಡಿದ್ದೇನೆ. ನಾನು ನನ್ನ ಪತ್ನಿ ಮಗ ಹುಣಸೂರು ತಾಲೂಕಿನ ಜನರ ಸೇವೆಯಲ್ಲಿ ಇಂದಿಗೂ ಇದ್ದೇವೆ.
ಮುಂದೆಯು ನೊಮ್ಮಟ್ಟಿಗೆ ಇರುತ್ತೇವೆ. ನಾನು ಪ್ರಥಮವಾಗಿ ಹುಣಸೂರಿನಿಂದ ಶಾಸಕನಾದೆ, ಸಚಿವನಾದೆ. ನನ್ನ ಮಗ ಕೂಡ ಸಹಕಾರ ಕ್ಷೇತ್ರದಿಂದ ಅಯ್ಕೆಯಾದ ಮತ್ತು ಪತ್ನಿ ಕೂಡ ಜಿಪಂ ಮತ್ತು ಸಹಕಾರ ಕ್ಷೇತ್ರದಿಂದಲೂ ಆಯ್ಕೆಯಾಗಿರುವುದನ್ನು ಸ್ಮರಿಸಬಹುದು ಎಂದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದು ಹೀಗೆ...!
ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡಿಕೊಂಡು ಬರುತ್ತಿರುವುದರಿಂದಲೇ ಜನ ನಮ್ಮನ್ನು ಇಂದಿನವರೆಗೂ ಬೆಂಬಲಿಸಿಕೊಂಡು ಬರುತ್ತಿದ್ದಾರೆ ಎಂದು ಜಿ ಟಿ ದೇವೇಗೌಡ ಕೃತಜ್ಞತಾ ಪೂರ್ವಕವಾಗಿ ಹೇಳಿದರು.
ಪತ್ನಿ ಲಲಿತಾ ಅವರನ್ನು ಚುನಾವಣೆಗೆ ನಿಲ್ಲಿಸುವ ಬಗ್ಗೆ 15ರ ನಂತರ ತೀರ್ಮಾನಿಸಲಾಗುವುದು ಎಂದು ಜಿಟಿಡಿ ಹೇಳಿದರು.