'ಜನರ ಅಭಿಪ್ರಾಯ ಕೇಳಿ ಯಾವ ಪಕ್ಷ ಸೇರಬೇಕೆಂದು ನಿರ್ಧಾರ: ಬಿಜೆಪಿ ಸೇರಿ ಸೋತಿದ್ದು ಸಾಕು'
- ನಾನು ಯಾವ ಪಕ್ಷಕ್ಕೆ ಹೋಗಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ
- ಜನರನ್ನು ಕೇಳಿ ತೀರ್ಮಾನಿಸುತ್ತೇನೆ
- ಮತದಾರರ ಮಾತು ಕೇಳದೆ ಬಿಜೆಪಿ ಸೇರಿ ಸೋತಿದ್ದೆ
ಮೈಸೂರು (ಜು.04): ನಾನು ಯಾವ ಪಕ್ಷಕ್ಕೆ ಹೋಗಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಜನರನ್ನು ಕೇಳಿ ತೀರ್ಮಾನಿಸುತ್ತೇನೆ ಎಂದು.
ಹಿಂದೆ ಹುಣಸೂರಿನಲ್ಲಿ ಜನರ ಮಾತು ಕೇಳದೆ ತಪ್ಪು ಮಾಡಿದ್ದೇನೆ. ಮತದಾರರ ಮಾತು ಕೇಳದೆ ಬಿಜೆಪಿ ಸೇರಿ ಸೋತಿದ್ದೆ. ಅಂಥ ತಪ್ಪು ಮತ್ತೆ ಮಾಡುವುದಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
ಜೆಡಿಎಸ್, ಬಿಜೆಪಿಯ ಕೆಲವರು ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದಾರೆ: ಕೆಪಿಸಿಸಿ ಕಾರ್ಯಧ್ಯಕ್ಷ ಹೊಸ ಬಾಂಬ್ .
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಜೆಡಿಎಸ್‌ನಲ್ಲೇ ಇರಬೇಕಾ?, ಕಾಂಗ್ರೆಸ್ ಅಥವಾ ಬಿಜೆಪಿ ಸೇರಬೇಕಾ ಎಂಬುದನ್ನು ಜನರಲ್ಲಿ ಕೇಳಿ ತೀರ್ಮಾನಿಸುತ್ತೇನೆ ಎಂದರು. ಇದೇ ವೇಳೆ ಸಿಎಂ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ, ಜನ ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.
ಚುನಾವಣೆಗೆ 23 ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಯಾರು ಮುಂದೆ ಹೋಗಿ ಸರ್ಕಾರ ರಚಿಸಬೇಕು, ರಚಿಸಬಾರದು ಎಂಬ ಚರ್ಚೆ ಬೇಡ. ಜನರ ತೀರ್ಮಾನಕ್ಕಾಗಿ ಕಾಯೋಣ ಎಂದು ತಿಳಿಸಿದರು.