Asianet Suvarna News Asianet Suvarna News

ಗೂಡ್ಸ್ ವಾಹನಗಳ ಮೊರೆ ಹೋದ ವಿದ್ಯಾರ್ಥಿಗಳು

 ತಾಲೂಕಿನಾದ್ಯಂತ ಶಾಲೆಗಳಿಗೆ ಮಕ್ಕಳು ಹೋಗಲು ತುಂಬಾ ತೊಂದರೆಯಾಗಿದ್ದು, ಪ್ರತಿನಿತ್ಯ ಬರುತ್ತಿದ್ದ ಬಸ್‌ಗಳು ಕಡಿಮೆಯಾಗಿರುವುದರಿಂದ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಗೂಡ್ಸ್ ವಾಹನದ ಮೊರೆ ಹೋಗಿದ್ದಾರೆ.

Students who went for goods vehicles snr
Author
First Published Jun 29, 2023, 6:34 AM IST

  ಪಿರಿಯಾಪಟ್ಟಣ : ತಾಲೂಕಿನಾದ್ಯಂತ ಶಾಲೆಗಳಿಗೆ ಮಕ್ಕಳು ಹೋಗಲು ತುಂಬಾ ತೊಂದರೆಯಾಗಿದ್ದು, ಪ್ರತಿನಿತ್ಯ ಬರುತ್ತಿದ್ದ ಬಸ್‌ಗಳು ಕಡಿಮೆಯಾಗಿರುವುದರಿಂದ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಗೂಡ್ಸ್ ವಾಹನದ ಮೊರೆ ಹೋಗಿದ್ದಾರೆ.

ಗೂಡ್‌್ಸ ವಾಹನಗಳಲ್ಲಿ ದನಕರುಗಳಂತೆ ಮಕ್ಕಳನ್ನು ತುಂಬಿಕೊಂಡು ಶಾಲೆಗೆ ಬಿಡುತ್ತಿದ್ದಾರೆ. ಅಪಾಯ ಸಂಭವಿಸಿದರೆ ಸಾರಿಗೆ ಇಲಾಖೆ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ ಎಂದು ಪೋಷಕರು ಆರೋಪಿಸಿದ್ದಾರೆ.

ಪ್ರತಿದಿನ ಮಕ್ಕಳು ಬಸ್‌ಗಾಗಿ ಕಾದು ಹಲವಾರು ದಿನಗಳ ಕಾಲ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದರೂ, ಆದರೆ ಇದೀಗ ಪೋಷಕರು ಖಾಸಗಿ ವಾಹನಗಳನ್ನು ತರಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವುದು ಒಂದು ನೋವಿನ ಸಂಗತಿಯಾಗಿದೆ. ಅಪಘಾತ ಸಂಭವಿಸಿದರೆ ಮಕ್ಕಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ, ಆದ್ದರಿಂದ ತಕ್ಷಣವೇ ಪಿರಿಯಾಪಟ್ಟಣ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೆ ಅದರಲ್ಲೂ ಶಾಲಾ ಸಮಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಖಾಸಗಿ ಬಸ್ ಮಾಲಿಕರಿಗೆ ನಷ್ಟ

ಹಿರಿಯೂರು (ಜೂ.29):  ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಖಾಸಗಿ ಬಸ್‌ಗಳ ಕಲೆಕ್ಷನ್‌ ಕಡಿಮೆಯಾಗಿ ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಖಾಸಗಿ ಬಸ್‌ ಮಾಲೀಕರು ಗೋಳಾಡುತ್ತಿದ್ದಾರೆ

ತಾಲೂಕಿನಲ್ಲಿ ಸುಮಾರು 40ರಿಂದ 50 ಬಸ್‌ಗಳಿದ್ದು, ಅವುಗಳ ಮಾಲೀಕರು ಮತ್ತು ಕಾರ್ಮಿಕರು ಶಕ್ತಿ ಯೋಜನೆಯ ಹೊಡೆತಕ್ಕೆ ಸಿಕ್ಕು ನಲುಗಿ ಹೋಗಿದ್ದಾರೆ. ಪ್ರತಿ ದಿನ ಡೀಸೆಲ್‌ಗೆ ಕೈಯಿಂದ ಸಾವಿರ, ಎರಡು ಸಾವಿರ ಹಾಕಿ ಬಸ್‌ ಓಡಿಸುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮ ಪಾಡೇನು ಎಂದು ತಾಲೂಕಿನ ಬಸ್‌ ಮಾಲೀಕ ರಾಘವೇಂದ್ರ ಪ್ರಶ್ನಿಸುತ್ತಾರೆ.

ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣ ವಾಪಸ್‌ ಪಡೆಯಿರಿ, ಇಲ್ಲವೇ ಬಸ್‌ಗಳ ಸಂಖ್ಯೆ ಹೆಚ್ಚಿಸಿ

ಕಾರ್ಮಿಕರ ಕೊರತೆ, ತೆರಿಗೆ, ವಿಮೆ, ಪರವಾನಗಿ ನವೀಕರಣ, ದುಬಾರಿ ಟೈರ್‌ಗಳ ಸಂಕಷ್ಟದ ಜೊತೆಗೆ ಹಳ್ಳಿ ಹಳ್ಳಿಗೂ ಬಸ್‌ ಓಡಿಸುತ್ತಿದ್ದು, ಇದೀಗ ಮಹಿಳೆಯರು ಖಾಸಗಿ ಬಸ್‌ಗಳತ್ತ ಮುಖ ಮಾಡದೇ ಇರುವುದು ಇನ್ನೊಂದು ಬಲವಾದ ಹೊಡೆತ ಕೊಟ್ಟಂತಾಗಿದೆ. ಈ ವೃತ್ತಿ ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲದ ನಾವು ಹೊಸ ಹೊಸ ಬಸ್‌ಗಳನ್ನು ಖರೀದಿಸಿದ್ದೇವೆ. ಅವುಗಳ ಕಂತು ಕಟ್ಟಬೇಕು. ಬಸ್‌ಗಳ ಬಿಡಿ ಭಾಗಗಳು ಸಹ ದುಬಾರಿಯಾಗಿದ್ದು, ಬಸ್‌ಗಳ ಆದಾಯವನ್ನೇ ನಂಬಿಕೊಂಡಿರುವ ತಾಲೂಕಿನ ನೂರಾರು ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ತಾಲೂಕಿನವು ಸೇರಿದಂತೆ ಹೊರಗಡೆಯಿಂದ ತಾಲೂಕಿಗೆ ಬರುವ ನೂರಾರು ಬಸ್‌ಗಳು ಖಾಲಿ ಖಾಲಿ ಕಾಣುತ್ತಿದ್ದು ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು, ನಿಲ್ದಾಣಗಳ ಏಜೆಂಟರು ಮುಂದೇನು ಎಂಬ ಸ್ಥಿತಿಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್‌ಗಳ ಪ್ರಮಾಣ ಕಡಿಮೆ ಇದ್ದರೂ ಸಹ ಇದೀಗ ಇರುವ ಸರ್ಕಾರಿ ಬಸ್‌ಗಳಿಗೇ ಕಾದು ಪ್ರಯಾಣ ಮಾಡುತ್ತಿದ್ದಾರೆ. ಕಲೆಕ್ಷನ್‌ ಗಣನೀಯ ಮಟ್ಟದಲ್ಲಿ ಕುಸಿದಿದ್ದು, ಸುಮಾರು 40-50 ವರ್ಷದಿಂದ ಖಾಸಗಿ ಬಸ್‌ಗಳನ್ನು ಓಡಿಸುತ್ತಾ ಬಂದಿರುವವರನ್ನು ಸಹ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಬಸ್‌ ಮಾಲೀಕರು ಮನವಿ ಮಾಡಿದ್ದಾರೆ.

ರಾಮ​ನ​ಗರದಲ್ಲಿ ಶಕ್ತಿ ಯೋಜ​ನೆ ಲಾಭ ಪಡೆದ 1.35 ಲಕ್ಷ ಮಹಿ​ಳೆ​ಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯ​ಕ್ತಿ

Follow Us:
Download App:
  • android
  • ios