Asianet Suvarna News Asianet Suvarna News

Corona Efffect: ಡಿಪೋದಲ್ಲಿ ಧೂಳು ಹಿಡಿದ 600 ವೋಲ್ವೋ ಬಸ್‌: ಕೋಟ್ಯಂತರ ರು. ನಷ್ಟ..!

*   ರಸ್ತೆಗಿಳಿಯದ 600 ವೋಲ್ವೊ ಬಸ್‌
*   860ರಲ್ಲಿ 200 ಬಸ್‌ಗಳು ಮಾತ್ರ ಸಂಚಾರ
*   ನಿಗಮಕ್ಕೆ ಕೋಟ್ಯಂತರ ರು. ನಷ್ಟ
 

600 Volvo Buses Did Not Operation in Bengaluru Due to Corona Effect grg
Author
Bengaluru, First Published Dec 8, 2021, 6:42 AM IST

ಬೆಂಗಳೂರು(ಡಿ.08):  ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ಕಳೆದ ಎರಡು ವರ್ಷದಿಂದ ಡಿಪೋ ಸೇರಿದ್ದ ಬಿಎಂಟಿಸಿಯ ನೂರಾರು ವೋಲ್ವೊ ಬಸ್‌ಗಳು ಇದೀಗ ಕೊರೋನಾ ಭೀತಿ ಕಡಿಮೆಯಾಗಿ ಜನ ಜೀವನ ಸಾಮಾನ್ಯವಾಗಿದ್ದರೂ, ಪ್ರಯಾಣಿಕರ ಕೊರತೆಯಿಂದಾಗಿ ಡಿಪೋ ಬಿಟ್ಟು ಹೊರ ಬರುತ್ತಿಲ್ಲ. ಬೆಂಗಳೂರು(Bengaluru) ನಗರದ ಬಿಎಂಟಿಸಿಯ(BMTC) ವಿವಿಧ ಡಿಪೋಗಳಲ್ಲಿರುವ 860 ವೋಲ್ವೊ ಬಸ್‌ಗಳಿವೆ(Volvo Bus). ಅವುಗಳಲ್ಲಿ ಪ್ರಸ್ತುತ ಕೇವಲ 200 ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನುಳಿದ 600 ಬಸ್‌ಗಳು ಡಿಪೋಗಳಲ್ಲಿ(Bus Depot) ಧೂಳು ತಿನ್ನುತ್ತಿವೆ.

ಕಳೆದ ಎರಡು ವರ್ಷಗಳಿಂದ ಈ ಬಸ್‌ಗಳನ್ನು ಬಳಸದೇ ನಿಲ್ಲಿಸಿದ್ದು, ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕಾಗಿದೆ. ಇದಕ್ಕಾಗಿ ಲಕ್ಷಾಂತರ ರು. ವೆಚ್ಚವಾಗುತ್ತಿದ್ದು, ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಿದೆ. ಇದರಿಂದ ನಿಗಮ ಕೋಟ್ಯಂತರ ರು. ನಷ್ಟ ಅನುಭವಿಸುವಂತಾಗಿದೆ.

ವಿದ್ಯಾರ್ಥಿಗಳಿಗೆ ಬಿಎಂಟಿಸಿ ಪಾಸ್‌ ವಿತರಣೆ : ಇಲ್ಲಿದೆ ಮಾಹಿತಿ

ಕೈ ಬಿಟ್ಟ ಐಟಿ ಕಂಪೆನಿಗಳು:

ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಐಟಿ-ಬಿಟಿ ಕಂಪೆನಿಗಳು(IT-BT Companies) ವೋಲ್ವೊ ಬಸ್‌ಗಳನ್ನು ಒಪ್ಪಂದದ ಮೇರೆಗೆ ಗುತ್ತಿಗೆಗೆ ಪಡೆದುಕೊಂಡಿದ್ದವು. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಎಲ್ಲ ಐಟಿ ಕಂಪೆನಿಗಳು ವರ್ಕ್ಫ್ರಮ್‌ ಹೋಮ್‌(Work From Home) ಜಾರಿ ಮಾಡಿವೆ. ಇದರಿಂದ ವೋಲ್ವೊ ಬಸ್‌ಗಳಿಗಿದ್ದ ಬೇಡಿಕೆ ಸಂಪೂರ್ಣ ಕುಸಿದಿದೆ. ಅಲ್ಲದೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಭಾಗಗಳಿಂದ ಪ್ರತಿ ದಿನ 20 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಪ್ರಯಾಣಿಕರ(Passengers) ಸಂಖ್ಯೆ ತೀವ್ರ ಕಡಿಮೆಯಿದ್ದು, ನಷ್ಟದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿ ಬಸ್‌ ಹತ್ತಲು ಹಿಂದೇಟು

ಕೊರೋನಾ ಮೊದಲ ಅಲೆಯಲ್ಲಿ ಹವಾನಿಯಂತ್ರಿತ ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹರಡಲಿದೆ ಎಂದು ವೈದ್ಯಕೀಯ ವಲಯದ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕರು ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಪ್ರಯಾಣಿಕರ ತೀವ್ರ ಕೊರತೆಯುಂಟಾಗಿದ್ದು, ಕೋಟ್ಯಂತರ ರು. ಬೆಲೆ ಬಾಳುವ ಬಸ್‌ಗಳು ಬಿಎಂಟಿಸಿ ಡಿಪೋಗಳಲ್ಲಿ ಧೂಳು ತಿನ್ನುವಂತಾಗಿದೆ. ಅಲ್ಲದೆ, ಮೆಟ್ರೋ ರೈಲಿನ ಸೇವೆಯಿಂದಾಗಿ ಬಸ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಪ್ರಯಾಣ ದರ ಇಳಿಕೆ?

ಹೆಸರು ಬಹಿರಂಗ ಪಡಿಸಲಿಚ್ಛಿಸದ ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರ ಈ ಕುರಿತು ಪ್ರತಿಕ್ರಿಯಿಸಿ, ವೋಲ್ವೊ ಬಸ್‌ ಕಾರ್ಯಾಚರಣೆ ಮಾಡದಿರುವ ಸಂಬಂಧ ಸಾಕಷ್ಟು ದೂರುಗಳು ಬರುತ್ತಿವೆ. ಅಲ್ಲದೆ, ಪ್ರಯಾಣ ದರ ಕಡಿಮೆ ಮಾಡಬೇಕು ಎಂಬ ಬೇಡಿಕೆಯೂ ಇದೆ. ಈ ಸಂಬಂಧ ಆಡಳಿತ ಮಂಡಳಿ ಸಭೆಯಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Bengaluru| 300 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ BMTC ಹಸಿರು ನಿಶಾನೆ

ಮೆಟ್ರೋ ಫಿಡರ್‌ ಸೇವೆ : ಬಿಎಂಟಿಸಿ ಅವಧಿ ವಿಸ್ತರಣೆ

ನಗರದಲ್ಲಿ ‘ನಮ್ಮ ಮೆಟ್ರೋ’ (Namma Metro ) ರೈಲು ಸೇವೆ ಪ್ರಾರಂಭವಾಗುತ್ತಿದ್ದಂತೆ ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಪರ್ಕ ಸಾರಿಗೆಗಳನ್ನು ಪುನಾರಂಭಿಸಲು ಮುಂದಾಗಿದೆ. ನ.18ರಿಂದ ಸಂಪರ್ಕ ಸಾರಿಗೆಗಳನ್ನು ರೈಲು ಸೇವೆ (Train service) ಹಾಗೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ತಡರಾತ್ರಿವರೆಗೂ ವಿವಿಧ ಮೆಟ್ರೋ (Metro) ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಿದೆ. 

ಎಸ್‌.ವಿ.ಮೆಟ್ರೋ ನಿಲ್ದಾಣ - ಸೆಂಟ್ರಲ್‌ ಸಿಲ್ಕ್ ಬೋರ್ಡ್‌ (Silk Board), ವೈಲ್ಟ್‌ ಫೀಲ್ಡ್‌ ಟಿಟಿಎಂಸಿ (TTMC), ಕೆ.ಆರ್‌.ಪುರಂ, ವಿಜಯನಗರ (Vijayanagar) ಮೆಟ್ರೋ ನಿಲ್ದಾಣ- ಅಂಬೇಡ್ಕರ್‌ ಕಾಲೇಜು (College), ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ -  ಬಿಇಎಂಎಲ್‌ 5ನೇ ಹಂತ, ಜ್ಞಾನ ಭಾರತಿ ಮೆಟ್ರೋ ನಿಲ್ದಾಣ- ಉಲ್ಲಾಳು ಉಪನಗರ, ಜಾಲಹಳ್ಳಿ ಮೆಟ್ರೋ ನಿಲ್ದಾಣ -  ಪೀಣ್ಯ 2ನೇ ಹಂತ, ನಾಗಸಂದ್ರ ಮೆಟ್ರೋ ನಿಲ್ದಾಣ - ಚಿಕ್ಕಬಾಣಾವರ, ಜಯನಗರ ಮೆಟ್ರೋ ನಿಲ್ದಾಣ - ಜಂಬೂ ಸವಾರಿ ದಿಣ್ಣೆ, ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣ- ಕಗ್ಗಲೀಪುರ ಮಾರ್ಗವಾಗಿ ಬಸ್‌ (Bus) ಸಂಚಾರ ನಡೆಸಿವೆ. 
 

Follow Us:
Download App:
  • android
  • ios