Asianet Suvarna News Asianet Suvarna News

ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌

ದೇಶದ ರಕ್ಷಣೆಗೆ ಹಿಂದೂ ಯುವಕರು ಕಂಕಣ ಬದ್ಧರಾಗಬೇಕಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅಧಿಕಾರಲ್ಲಿರಬೇಕು. ಶ್ರೀರಾಮ ಆದರ್ಶ ಪುರುಷ. ಯಡ್ರಾಮಿ ಪಟ್ಟಣ ಪುಣ್ಯಕ್ಷೇತ್ರ. ಈ ನಾಡಿನಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ಒಂದು ತಿಂಗಳ ಪರ್ಯಂತ ಪ್ರವಚನ ನೀಡಿದ್ದರು: ಪ್ರಮೋದ್‌ ಮುತಾಲಿಕ್‌

Struggle is Necessary to Prevent Cow Slaughter and Conversion in India Says Pramod Mutalik grg
Author
First Published Jan 13, 2023, 2:51 PM IST

ಜೇವರ್ಗಿ(ಜ.13):  ಭಾರತ ದೇಶದಲ್ಲಿ ಗೋಹತ್ಯೆ ಹಾಗೂ ಮತಾಂತರ ತಡೆಗೆ ಹಿಂದೂಪರ ಸಂಘಟನೆಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು. ಯಡ್ರಾಮಿ ಪಟ್ಟಣದ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ನಿಮಿತ್ತ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಂಡ ಹಿಂದೂ ಸಂತ ಸಮಾವೇಶದಲ್ಲಿ ಅವರು ಮಾತನಾಡಿದರು.

ದೇಶದ ರಕ್ಷಣೆಗೆ ಹಿಂದೂ ಯುವಕರು ಕಂಕಣ ಬದ್ಧರಾಗಬೇಕಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅಧಿಕಾರಲ್ಲಿರಬೇಕು. ಶ್ರೀರಾಮ ಆದರ್ಶ ಪುರುಷ. ಯಡ್ರಾಮಿ ಪಟ್ಟಣ ಪುಣ್ಯಕ್ಷೇತ್ರ. ಈ ನಾಡಿನಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ಒಂದು ತಿಂಗಳ ಪರ್ಯಂತ ಪ್ರವಚನ ನೀಡಿದ್ದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳನ್ನು ಇಂದಿನ ಯುವಕರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀರಾಮ ಸೇನೆಯ ಕಾರ್ಯಕರ್ತರ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದರು.

ಹಿಂದೂ ಅರ್ಚಕರ ನೇಮಕ, ಹೋರಾಟಕ್ಕೆ ಬೆಲೆ ಸಿಕ್ಕಿದೆ: ಪ್ರಮೋದ್‌ ಮುತಾಲಿಕ್‌

ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲವ್‌ ಜಿಹಾದ್‌, ಮತಾಂತರ ಹಾಗೂ ಗೋ ಹತ್ಯೆಯನ್ನು ತಡೆಯಬೇಕಾಗಿದೆ. ಹಿಂದೂ ಸಂಘಟನೆಗಳು ಒಗ್ಗಟ್ಟಾದರೇ ದೇಶದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.

ಹಿಂದೂಪರ ಸಂಘಟನೆಯ ಚೈತ್ರಾ ಕುಂದಾಪುರ ಮುಖ್ಯ ಭಾಷಣ ಮಾಡಿದರು. ಬಿಜೆಪಿ ಮುಖಂಡ ಮಲ್ಲಿನಾಥ ಪಾಟೀಲ ಯಲಗೋಡ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಆಲೂರಿನ ಕೆಂಚವೃಷಭೇಂದ್ರ ಶಿವಾಚಾರ್ಯರು, ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ನಾಡಿನ ಮಠಾಧೀಶರು ಭಾಗವಹಿಸಿದ್ದರು.

ಮುಸ್ಲಿಂ ಕಾಲೇಜು ವಿರೋಧಿಸಿದ ಮುತಾಲಿಕ್‌ಗೆ ಜೀವ ಬೆದರಿಕೆ

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ದಂಡಪ್ಪ ಸಾಹು ಕುಳಗೇರಿ, ಶ್ರೀರಾಮ ಸೇನೆಯ ಯಡ್ರಾಮಿ ತಾಲೂಕು ಘಟಕದ ಅಧ್ಯಕ್ಷ ಸಿದ್ದು ಹಂಗರಗಿ, ಜೇವರ್ಗಿ ತಾಲೂಕು ಘಟಕದ ಅಧ್ಯಕ್ಷ ನಿಂಗಣ್ಣಗೌಡ ರಾಸಣಗಿ ಸೇರಿದಂತೆ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಶ್ರೀರಾಮ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶೋಭಾಯಾತ್ರೆ:

ಯಡ್ರಾಮಿ ಪಟ್ಟಣದ ಸುಂಬಡ ರಸ್ತೆಯಲ್ಲಿರುವ ಕಡಕೋಳ ಶಾಖಾ ಮಠದಿಂದ ಬೈಕ್‌ ರಾರ‍ಯಲಿ ಮುಖಾಂತರ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ವೇದಿಕೆವರೆಗೆ ಶೋಭಾ ಯಾತ್ರೆ ನಡೆಸಲಾಯಿತು.

Follow Us:
Download App:
  • android
  • ios