ಹಿಂದೂ ಅರ್ಚಕರ ನೇಮಕ, ಹೋರಾಟಕ್ಕೆ ಬೆಲೆ ಸಿಕ್ಕಿದೆ: ಪ್ರಮೋದ್ ಮುತಾಲಿಕ್
ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿ, ಪೂಜೆ ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ, ಕೇಳಿ ನಿಜವಾಗಿಯೂ ಧನ್ಯ ಆಯ್ತು. ಸುದೀರ್ಘಹೋರಾಟಕ್ಕೆ ಬೆಲೆ ಸಿಕ್ಕಿದೆ ಎನ್ನುವುದು ನಮಗೆ ಗೊತ್ತಾಗಿದೆ.
ಚಿಕ್ಕಮಗಳೂರು (ಡಿ.28): ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿ, ಪೂಜೆ ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ, ಕೇಳಿ ನಿಜವಾಗಿಯೂ ಧನ್ಯ ಆಯ್ತು. ಸುದೀರ್ಘ ಹೋರಾಟಕ್ಕೆ ಬೆಲೆ ಸಿಕ್ಕಿದೆ ಎನ್ನುವುದು ನಮಗೆ ಗೊತ್ತಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ ರವಿಯವರಿಗೆ ಧನ್ಯವಾದಗಳು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸವಾಗಬೇಕು. ಮುಸ್ಲಿಂ ಸಮಾಜಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಒಳಗೆ ಸೌಹಾರ್ಧಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ, ಗಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಬಿಟ್ಟು ಕೊಟ್ಟು ನಾಗೇನಹಳ್ಳಿಯಲ್ಲಿ ನಮಾಜು, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದ: ಕೊಳಕು ಮಂಡಲ ಕಂಡು ಹೌಹಾರಿದ ಜನ
25 ವರ್ಷಗಳ ಹಿಂದೆಯೂ ಇಲ್ಲಿನ ಹಿರಿಯರಾದ ನಾಣಯ್ಯ, ವಿಠಲ್ ರಾಯ್, ದತ್ತಾತ್ರೆಯ ಶೆಟ್ಟಿಸೇರಿದಂತೆ ಅನೇಕರು ಪರಿಶ್ರಮ ಪಟ್ಟಿದ್ದಾರೆ ಅವರಿಗೂ ಕೂಡಾ ಹಿಂದೂ ಅರ್ಚಕರ ನೇಮಕ ಆನಂದವಾಗಿದೆ ಎಂದರು. ಇನ್ನೂ ಗರ್ಭ ಗುಡಿಯ ಒಳಗೆ ಪೂಜೆ ನಡೆಯುತ್ತಿರುವುದರಿಂದ, ನಾಸ್ತಿಕವಾದಿಗಳು, ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬಲಾರದವರು ದತ್ತಪಾದುಕೆಯ ಗರ್ಭ ಗುಡಿಯ ಒಳಗೆ ಹೋಗಬಾರದು, ಕುರಾನಿನ ಪ್ರಕಾರ ಅದು ನಿಷಿದ್ಧ ಎಂದು ಹೇಳಿದರು.
ದತ್ತಪೀಠದ ಆವರಣ ಪೂರ್ಣ ಪ್ರಮಾಣದಲ್ಲಿ ದತ್ತ ಪೀಠ ಹಿಂದೂ ಪೀಠವಾಗುವವರೆಗೆ ನಮ್ಮ ಹೋರಾಟ ಕಾನೂನಾ ತ್ಮಕವಾಗಿ ಮುಂದುವರೆಯುತ್ತದೆ. ಆಂದೋಲನಾತ್ಮಕವಾಗಿ ನಡೆಯು ತ್ತಿದೆ. ನಮಾಜ್, ಉರುಸ್ ಮಾಡ್ತಾರೆ ಅವುಗಳೆಲ್ಲವನ್ನು ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು. ಹಾಸನದಲ್ಲಿ ಕೊರಿಯರ್‌ನಲ್ಲಿ ಬಂದ ಮಿಕ್ಸಿ ಸ್ಪೋಟಗೊಂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಂದ ಪ್ರಕಾರ ಕೊರಿಯರ್ ಮೂಲಕ ಬಂದ ಮಿಕ್ಸಿ ಓಪನ್ ಮಾಡಿದಾಗ ಬ್ಲಾಸ್ಟ್ ಆಗಿದೆ. ಇದೊಂದು ವ್ಯವಸ್ಥಿತವಾದ ಟೆರರಿಸಂನ ಬೇರೆ ಬೇರೆ ಪ್ರಕಾರಗಳಲ್ಲಿ ಇದೂ ಒಂದು ಎಂದರು.
ಶಾರೀಕ್ ಮುಖಾಂತರ ಕುಕ್ಕರ್ ಮೂಲಕ ಸ್ಪೋಟ ಮಾಡಲು ಯತ್ನಿಸಿದ್ದು, ಈ ರೀತಿಯಾಗಿ ಅನೇಕ ವಿಧಾನಗಳ ಮೂಲಕ ಮಾಡುವ ಕುಕೃತ್ಯಗಳನ್ನು ತಡೆಯುವ ಕೆಲಸ ಆಗಬೇಕು. ಕೆಂದ್ರದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಅದನ್ನು ತಡೆದುಕೊಳ್ಳಲಾಗದೆ. ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಅದನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಜನವರಿಯಲ್ಲಿ ಸ್ಪರ್ಧೆ ಘೋಷಣೆ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಐದಾರು ಬಾರಿ ಪ್ರವಾಸ ಮಾಡಿದ್ದೇನೆ, ಕಾರ್ಕಳ ಸೇರಿದಂತೆ ಏಳೆಂಟು ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚಿಸಿದ್ದೇನೆ ಎಂದರು. ಕಾರ್ಕಳದಿಂದ ಸ್ಪರ್ಧೆ ಮಾಡಲು ನಾನು ಘೋಷಣೆ ಮಾಡಿಲ್ಲ, ಪ್ರಚಾರವೂ ಆರಂಭಿಸಿಲ್ಲ, ಈಗಾಗಲೇ ಶಾಸಕ ಸುನೀಲ್‌ಕುಮಾರ್ ಅವರಲ್ಲಿ ಭಯದ ವಾತಾವರಣ ಹುಟ್ಟಿಕೊಂಡಿದೆ. ನಮ್ಮನ್ನು ಹೆದರಿಸಿ, ಬೆದರಿಸುವ ಪ್ರಯತ್ನ ಬೇಡ. ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಹಿಂದೂತ್ವದ ಬಗ್ಗೆ ಒಳ್ಳೆಯ ವಾತಾವರಣ ಇದೆ. ಆಂತರಿಕ ಸರ್ವೆಯ ಪ್ರಕಾರ ಕಾರ್ಕಳದಿಂದ ಸ್ಪರ್ಧೆ ಮಾಡುವುದು ಸೂಕ್ತ.
ಕೋವಿಡ್ ರೂಲ್ಸ್ ಮರೆತ ಬೆಂಗಳೂರು ಜನತೆ: ಸಿಲಿಕಾನ್ ಸಿಟಿ ಬಸ್‌ಗಳಲ್ಲಿ ಮಾಸ್ಕ್ ಮಾಯ
ಜನವರಿ ಮೊದಲ ವಾರದಂದು ಕ್ಷೇತ್ರ ಆಯ್ಕೆಯ ಘೋಷಣೆ ಮಾಡಲಾಗುವುದು ಎಂದು ಹೇಳಿದರು. ಗಡಿ ವಿವಾದ ರಾಜಕೀಯ ಪ್ರೇರಿತವಾದದ್ದು, ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗಳರು ಸಹೋದರರಂತೆ ಇದ್ದಾರೆ. ರಾಜಕೀಯ ಬೇಳೆ ಬೇಯಿಸಲು ಕರ್ನಾಟಕ-ಮಹಾರಾಷ್ಟ್ರದ ರಾಜಕೀಯ ನಾಯಕರು ಕಿಡಿ ಹಚ್ಚುತ್ತಿದ್ದಾರೆ ಎಂದರು. ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ, ನ್ಯಾಯಾಂಗ ನಿಂದನೆ ಆಗುತ್ತೆ, ಮಹಾರಾಷ್ಟ್ರ ರಾಜ್ಯದ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಮಹಾರಾಷ್ಟ್ರದ್ದು ಎನ್ನುತ್ತಿದ್ದಾರೆ, ಕರ್ನಾಟಕ ರಾಜ್ಯದ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಕರ್ನಾಟಕದ್ದು ಎಂದು ಹೇಳುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ದ್ವಂದ್ವ ನಿಲುವು ಇದೆ. ಸುಪ್ರೀಂ ಕೋರ್ಟಿನಿಂದ ತೀರ್ಪು ಬರುವವರೆಗೂ ಸುಮ್ಮನಿರುವುದು ಒಳಿತು ಎಂದರು.