ನಾಲ್ಕು ವರ್ಷದ ಬಳಿಕ ಮತ್ತೆ ನಗರದಲ್ಲಿ ಬೀದಿ ನಾಯಿಗಳ ಗಣತಿ ನಡೆಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 70 ಸಿಬ್ಬಂದಿ ಮತ್ತು ಬಿಬಿಎಂಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿಸಲಾಗಿದೆ. 

ಬೆಂಗಳೂರು(ಜು.11): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರದಿಂದ ಬೀದಿ ನಾಯಿಗಳ ಗಣತಿಗೆ ಆರಂಭಗೊಳ್ಳಲಿದ್ದು, ಗಣತಿದಾರರು ಬೈಕ್‌ ಮೇಲೇರಿ ನಗರದ ಬೀದಿ ಬೀದಿ ಸುತ್ತಲಿದ್ದಾರೆ. ನಾಲ್ಕು ವರ್ಷದ ಬಳಿಕ ಮತ್ತೆ ನಗರದಲ್ಲಿ ಬೀದಿ ನಾಯಿಗಳ ಗಣತಿ ನಡೆಸುವುದಕ್ಕೆ ಬಿಬಿಎಂಪಿ ಮುಂದಾಗಿದೆ. ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ 70 ಸಿಬ್ಬಂದಿ ಮತ್ತು ಬಿಬಿಎಂಪಿಯ 30 ಸಿಬ್ಬಂದಿ ಸೇರಿದಂತೆ ಒಟ್ಟು 100 ಮಂದಿ ನಿಯೋಜಿಸಲಾಗಿದೆ. ಒಂದು ಬೈಕ್‌ನಲ್ಲಿ ಇಬ್ಬರು ಸಿಬ್ಬಂದಿ ಗಣತಿ ನಡೆಸುವುದಕ್ಕೆ ಹೋಗಲಿದ್ದಾರೆ. ಒಬ್ಬ ಸಿಬ್ಬಂದಿಯು ಬೈಕ್‌ ಚಾಲನೆ ಮಾಡಲಿದ್ದಾರೆ, ಮತ್ತೊಬ್ಬರು ಮೊಬೈಲ್‌ನಲ್ಲಿ ಬೀದಿ ನಾಯಿ ಫೋಟೋ ತೆಗೆದು ಆ್ಯಪ್‌ ಮೂಲಕ ದಾಖಲಿಸಿ ಗಣತಿ ಕಾರ್ಯ ನಡೆಸಲಿದ್ದಾರೆ. ಒಟ್ಟು 14 ದಿನ ಬೆಳಗ್ಗೆ 6ರಿಂದ ಬೆಳಗ್ಗೆ 8.30ರ ವರೆಗೆ ಗಣತಿ ಕಾರ್ಯ ನಡೆಯಲಿದೆ. ಮೇಲ್ವಿಚಾರಣೆಗೆ 15 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

ಬಿಬಿಎಂಪಿಯ 840 ಚದರ ಕಿ.ಮೀ. ವ್ಯಾಪ್ತಿಯನ್ನು ತಲಾ 0.5 ಚ.ಕಿ.ಮೀ. ವ್ಯಾಪ್ತಿಯಂತೆ 6,850 ಮೈಕ್ರೋ ವಲಯಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಶೇ.20ರಷ್ಟುರಾರ‍ಯಂಡಮ್‌ ಸ್ಯಾಂಪಲ್‌ಗಳಂತೆ 1,360 ಮೈಕ್ರೋ ವಲಯಗಳನ್ನು ಆಯ್ಕೆ ಮಾಡಿಕೊಂಡು ಗಣತಿ ನಡೆಸುವುದಕ್ಕೆ ಯೋಜನೆ ರೂಪಿಸಲಾಗಿದೆ.

Bengaluru: ಐಟಿ ಉದ್ಯೋಗಿಗಳೇ ಬೀದಿ ನಾಯಿಗಳ ಕಾಟದಿಂದ ಎಚ್ಚರ

ಬೀದಿ ನಾಯಿ ಗಣತಿಯು ವಿಜ್ಞಾನಿಗಳಾದ ಡಾ. ಕೆ.ಪಿ.ಸುರೇಶ್‌, ಡಾ. ಹೇಮಾದ್ರಿ ದಿವಾಕರ್‌, ಡಾ. ಕೃಷ್ಣ ಇಸ್ಲೂರು, ಡಾ. ಬಾಲಾಜಿ ಚಂದ್ರಶೇಖರ್‌ ಸಹಯೋಗದೊಂದಿಗೆ ನಡೆಯಲಿದೆ. 2019ರಲ್ಲಿ ನಡೆಸಲಾದ ಬೀದಿ ನಾಯಿ ಗಣತಿಯಲ್ಲಿ ನಗರದಲ್ಲಿ 3.10 ಲಕ್ಷ ಬೀದಿ ನಾಯಿಗಳಿವೆ ಎಂದು ತಿಳಿದು ಬಂದಿತ್ತು.

ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ

ನಗರದಲ್ಲಿ ಬೀದಿ ನಾಯಿ ಗಣತಿ ನಡೆಸುವ ಬಗ್ಗೆ ‘ಕನ್ನಡಪ್ರಭ’ದಲ್ಲಿ ಜೂನ್‌ 24ರಂದೇ ‘ಬೈಕ್‌ನಲ್ಲಿ ನಗರದ ಬೀದಿ ನಾಯಿಗಳ ಗಣತಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.