Asianet Suvarna News Asianet Suvarna News

ಚಿತ್ತಾಪುರ: ಸ್ಟೇಷನ್‌ ತಾಂಡಾ ಹುಡುಗ ಈಗ ದೇಶದ ಕೃಷಿ ವಿಜ್ಞಾನಿ

ಕುಟುಂಬದ ಹಣಕಾಸಿನ ತೊಂದರೆ ನಡುವೆಯೂ ಅನಿಲ್‌ ಅವರಲ್ಲಿನ ಪ್ರತಿಭೆಗೆ ತಂದೆ ಧನಸಿಂಗ್‌ ಪ್ರೋತ್ಸಾಹ ನೀಡಿ ಉತ್ತಮ ಶಿಕ್ಷಣ ನೀಡಿದ್ದರ ಫಲವಾಗಿ ಇಂದು ದೇಶದ ಅತ್ಯುನ್ನತ ಹುದ್ದೆಯಾದ ಕೃಷಿ ವಿಜ್ಞಾನಿಯಂತಹ ಹುದ್ದೆಗೆ ಏರಲು ಸಹಕಾರಿಯಾಗಿದೆ.

Station Tanda Based Anil Dhanasingh is now an Agricultural Scientist of India grg
Author
First Published Jan 31, 2023, 9:00 PM IST

ಚಿತ್ತಾಪುರ(ಜ.31):  ಕುಟುಂಬದ ಬಡತನ ಹಾಗೂ ಹಣಕಾಸಿನ ತೊಂದರೆಯ ನಡುವೆ ಉತ್ತಮವಾಗಿ ವ್ಯಾಸಂಗ ಮಾಡಿ ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಕೀಟ ವಿಜ್ಞಾನ ವಿಭಾಗದ ಗ್ರೇಡ್‌-ಎ ಹುದ್ದೆಗೆ ಪಟ್ಟಣದ ಸ್ಟೇಶನ್‌ ತಾಂಡಾದ ಅನಿಲ್‌ ಧನಸಿಂಗ್‌ ಪವಾರ ತನ್ನ 30ನೇ ವಯಸ್ಸಿನಲ್ಲಿಯೇ ಆಯ್ಕೆಯಾಗುವುದರೊಂದಿಗೆ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಧನಸಿಂಗ್‌ ಪವಾರ್‌ ಹಾಗೂ ಲಕ್ಷಿತ್ರ್ಮೕಬಾಯಿ ಅವರ ಮಗನಾದ ಅನಿಲ್‌ ಪವಾರ್‌ಗೆ ನಾಲ್ವರು ಅಕ್ಕಂದಿರು ಹಾಗೂ ಒಬ್ಬ ಅಣ್ಣ ಹಾಗೂ ಒಬ್ಬ ತಮ್ಮ ಇದ್ದಾರೆ. ಕುಟುಂಬದ ಹಣಕಾಸಿನ ತೊಂದರೆ ನಡುವೆಯೂ ಅನಿಲ್‌ ಅವರಲ್ಲಿನ ಪ್ರತಿಭೆಗೆ ತಂದೆ ಧನಸಿಂಗ್‌ ಪ್ರೋತ್ಸಾಹ ನೀಡಿ ಉತ್ತಮ ಶಿಕ್ಷಣ ನೀಡಿದ್ದರ ಫಲವಾಗಿ ಇಂದು ದೇಶದ ಅತ್ಯುನ್ನತ ಹುದ್ದೆಯಾದ ಕೃಷಿ ವಿಜ್ಞಾನಿಯಂತಹ ಹುದ್ದೆಗೆ ಏರಲು ಸಹಕಾರಿಯಾಗಿದೆ.

ಶೆಡ್‌ ಮೇಲೆ ಟ್ರ್ಯಾಕ್ಟರ್‌ ಪಲ್ಟಿ; ಊಟಕ್ಕೆ ಕುಳಿತಿದ್ದ ರೈತ ಸಾವು!

ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಹುಟ್ಟುರಾದ ಚಿತ್ತಾಪುರ ಪಟ್ಟಣದಲ್ಲಿ ಪಡೆದ ಅನಿಲ್‌ ಉನ್ನತ ಶಿಕ್ಷಣವನ್ನು ಕಲಬುರಗಿ ಹಾಗೂ ಬಿಎಸ್‌ಸಿ ಪದವಿ ಕೃಷಿ ವಿಶ್ವವಿದ್ಯಾಲಯ ರಾಯಚೂರು, ಎಂಎಸ್‌ಸಿ ಪದವಿಯನ್ನು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಪೂರೈಸಿದ ಅವರು ಪಿಎಚ್‌ಡಿ ಪದವಿಯನ್ನು ಇಂಡಿಯನ್‌ ಅಗ್ರಿಕಲ್ಚರ್‌ ರಿಸರ್ಚ ಇನ್‌ಸ್ಟಿಟ್ಯೂಟ್‌ ದೆಹಲಿಯಲ್ಲಿ ಪೂರೈಸುತ್ತಿದ್ದು ಇದೇ ವೇಳೆ ದೆಹಲಿಯಲ್ಲಿರುವ ಅಗ್ರಿಕಲ್ಚರ್‌ ಸೈಂಟಿಸ್ಟ್‌ ರಿಕ್ರೋಟ್‌ಮೆಂಟ್‌ ಬೊರ್ಡ ವತಿಯಿಂದ (ಕೃಷಿ ಸಂಶೋಧನೆ ಸೇವೆ) ನಡೆದ 2021ರಲ್ಲಿ ಕೃಷಿ ವಿಭಾಗದ 46 ವಿಭಾಗಗಳ 208 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಪರೀಕ್ಷೆ ಕೈಗೊಂಡಿದ್ದರು. ಅನಿಲ್‌ ಪವಾರ್‌ ಅವರು ಕೀಟ ವಿಜ್ಞಾನ ವಿಭಾಗದಿಂದ ಕರೆದಿದ್ದ ಹುದ್ದೆಯಲ್ಲಿ ಮೂರು ಹಂತದ ಆಯ್ಕೆ ಪರೀಕ್ಷೆಗಳಾದ ಪ್ರಿಲಿಮಿನರಿ, ಮೇನ್ಸ್‌ ಮತ್ತು ಸಂದರ್ಶನದಲ್ಲಿ ಆಯ್ಕೆಯಾಗುವುದರ ಮೂಲಕ ದೇಶಕ್ಕೆ ಸಾಮಾನ್ಯ ವರ್ಗದಲ್ಲಿ 8ನೇ ರಾರ‍ಯಂಕ್‌ ಹಾಗೂ ಎಸ್‌ಸಿ ವಿಭಾಗದಲ್ಲಿ ಪ್ರಥಮ ರಾರ‍ಯಂಕ್‌ ಪಡೆದು ಹುದ್ದೆಗೆ ಆಯ್ಕೆಯಾಗಿದ್ದಾರೆ.

ಅನಿಲ್‌ ಪವಾರ್‌ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಡಾಕ್ಟರ್‌ ಆಗಿ ಜನಸೇವೆ ಮಾಡಬೇಕು ಎನ್ನುವ ಕನÓಸನ್ನು ಇಟ್ಟುಕೊಂಡಿದ್ದೆ. ಆದರೆ, ಕೃಷಿ ಪ್ರಧಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿ ನಾನು ಕೃಷಿ ವಿಜ್ಞಾನದಲ್ಲಿ ಡಾಕ್ಟರ್‌ ಆಗಿರುವುದು ನನಗೆ ತೃಪ್ತಿ ತಂದಿದೆ. ನನ್ನ ಈ ಸಾಧನೆಗೆ ನನ್ನ ತಂದೆ - ತಾಯಿ ಹಾಗೂ ಗೆಳೆಯರು ಕಾರಣರಾಗಿದ್ದಾರೆ. ಅದರಲ್ಲೂ ಬಾರಮತಿಯ ಮಾಳೆಗಾಂವದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ರಾಜಕುಮಾರ ವಿ. ಭಾಜೊಳ್ಕರ್‌ ಎನ್ನುವವರು ಕೃಷಿ ಕ್ಷೇತ್ರದ ಮಹತ್ವ ತಿಳಿಸಿದ ಕಾರಣ ಈ ಹುದ್ದೆಗೆ ಬರಲು ಸಾಧ್ಯವಾಗಿದ್ದು, ಅವರ ಸಹಕಾರ ತುಂಬಾ ಇದೆ ಎಂದರು.

ನಮ್ಮ ತಾಂಡಾದ ಯುವಕ ಸುನಿಲ್‌ ಹಲವು ವರ್ಷಗಳ ಕಠೀಣ ಪರಿಶ್ರಮ ಪಟ್ಟು ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಇಂತಹ ಹಲವಾರು ಪ್ರತಿಭೆಗಳು ಸೂಕ್ತ ತರಬೇತಿ ಇಲ್ಲದೇ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪ್ರತಿಭೆಗಳು ಹೊರಹೊಮ್ಮುವಂತೆ ಮಾಡಲು ತಾಲೂಕಿನಲ್ಲಿ ಸೂಕ್ತ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಅಂತ ಚಿತ್ತಾಪುರ ಬಂಜಾರ ಸೇವಾ ಸಂಘದ ಅಧ್ಯಕ್ಷ ರಾಮದಾಸ ಚವ್ಹಾಣ ತಿಳಿಸಿದ್ದಾರೆ. 

Follow Us:
Download App:
  • android
  • ios