ಶೆಡ್ ಮೇಲೆ ಟ್ರ್ಯಾಕ್ಟರ್ ಪಲ್ಟಿ; ಊಟಕ್ಕೆ ಕುಳಿತಿದ್ದ ರೈತ ಸಾವು!
- ಶೆಡ್ ಮೇಲೆ ಟ್ರ್ಯಾಕ್ಟರ್ ಬಿದ್ದು ರೈತ ಸಾವು
- ಊಟ ಮಾಡುತ್ತಿರುವಾಗಲೇ ದಾರುಣವಾಗಿ ಸಾವನ್ನಪ್ಪಿದ ರೈತ ಲಕ್ಷ್ಮಣ
- ಕಬ್ಬಿನ ಜಲ್ಲಿಗಳಿಂದ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ದುರಂತ
ಕಲಬುರಗಿ (ಜ.31) : ಸಾವಿನ ಹಕ್ಕಿ ನಮ್ಮ ಬೆನ್ನ ಮೇಲೆಯೇ ಕುಳಿತಿರುತ್ತದಂತೆ, ಯಾವಾಗ ಕುಕ್ಕುತ್ತದೋ ಗೊತ್ತಿಲ್ಲ ಎಂಬ ಮಾತು ಜನಜನಿತ. ಈ ಮಾತಿಗೆ ಪುಷ್ಟಿಎಂಬಂತೆ ವಿಧಿಯ ಕ್ರೂರ ಅಟ್ಟಹಾಸದ ಘಟನೆಯೊಂದಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭುಸನೂರು ಸಾಕ್ಷಿಯಾಗಿದೆ.
ಕಬ್ಬು ತುಂಬಿದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರೈತನಿಗೆ ಸೇರಿದ್ದ ಶೆಡ್ ಮೇಲೆಯೇ ಪಲ್ಟಿಹೊಡೆದಾಗ ಊಟ ಮಾಡುತ್ತಿರುವಾಗಲೇ ಬಡಪಾಯಿ ರೈತ ಕೊನೆ ಉಸಿರೆಳೆದಿರುವ ದುರಂತ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
Belagavi: ಶೆಡ್ ಮೇಲೆ ಉರುಳಿ ಬಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್: ಮಹಿಳೆ ಸಾವು -ನಾಲ್ವರಿಗೆ ಗಾಯ
ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿರುವ ಈ ದುರಂತ ಘಟನೆಯಲ್ಲಿ ಸಾವನ್ನಪ್ಪಿರುವ ರೈತನನ್ನು ಲಕ್ಷ್ಮಣ ಚಿಂಚನಸೂರ್ ಎಂದು ಗುರುತಿಸಲಾಗಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್ ಮೃತ ರೈತ ಲಕ್ಷ್ಮಣ ಕುಳಿತು ಊಟ ಮಾಡುತ್ತಿದ್ದ ಶೆಡ್ ಮೇÇಯೇ ಏಕಾಏಕಿ ಪಲ್ಟಿಯಾದಾಗದ ದುರ್ಘಟನೆ ಸಂಭವಿಸಿದೆ. ಊಟ ಮಾಡುತ್ತಿದ್ದಂತೆಯೇ ರೈತ ಲಕ್ಷ್ಮಣ ಕೊನೆಯುಸಿರೆಳೆದಿದ್ದಾರೆ.
ಪತಿ-ಪತ್ನಿ ಊಟ ಮಾಡುತ್ತಿದ್ದರು:
ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನಿನ್ನೆ ರಾತ್ರಿ ಮನೆ ಶೆಡ್‌ನಲ್ಲಿ ಗಂಡ ಹೆಂಡತಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಪತಿಗೆ ಕುಡಿಯಲು ನೀರು ತರಲು ಪತ್ನಿ ಹೊರ ಬಂದಿದ್ದರು.
ಈ ಸಂದರ್ಭದಲ್ಲಿ ನಿಂಬಾಳದಿಂದ ಭೂಸನೂರು ಸಕ್ಕರೆ ಕಾರ್ಖಾನೆಗೆ ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇರುವ ರೈತನ ಶೆಡ್‌ಗೆ ನುಗ್ಗಿ ಪಲ್ಟಿಯಾಗಿದೆ. ಈ ಹಂತದಲ್ಲಿ ರೈತ ಟ್ರ್ಯಾಕ್ಟರ್ ಹಾಗೂ ಕಬ್ಬಿನ ಜಲ್ಲಿಗಳ ರಾಶಿಯಡಿಯಲ್ಲಿ ಸಿಲುಕಿ ಅಪ್ಪಚ್ಚಿಯಾಗಿ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Vijayapura: ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗೆ ಸಿಲುಕಿ ಯುವಕ ಸಾವು
ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ:
ಕಬ್ಬಿಣದ ಶೀಟ್‌ಗಳಿಂದ ನಿರ್ಮಾಣ ಮಾಡಲಾಗಿದ್ದ ತಾತ್ಕಾಲಿಕ ಶೆಡ್ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಲಕ್ಷ್ಮಣ ಚಿಂಚನಸೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶೆಡ್ ಹೊರಗಡೆ ನಿಂತಿದ್ದ ಲಕ್ಷ್ಮಣ ಚಿಂಚನಸೂರ್ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.